ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ಮಣಿಯದ್ದಕ್ಕೆ ತಮಿಳರ ಹತ್ಯೆ: ರಾಹುಲ್ ವಿವಾದಾತ್ಮಕ ಹೇಳಿಕೆ

|
Google Oneindia Kannada News

ತೂತುಕುಡಿ, ಮೇ 23: ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಹಿಂಸಾಚಾರಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್‌ಎಸ್‌) ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರಣವೆಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇದಾಂತ ಸ್ಟೆರ್ಲೈಟ್ ಕಾಪರ್ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು. ಘಟನೆಯಲ್ಲಿ ಇದುವರೆಗೂ 11 ಮಂದಿ ಬಲಿಯಾಗಿದ್ದಾರೆ.

ತಮಿಳುನಾಡು: ತಾಮ್ರ ಘಟಕದ ವಿಸ್ತರಣೆಗೆ ಹೈಕೋರ್ಟ್ ಮಧ್ಯಂತರ ತಡೆತಮಿಳುನಾಡು: ತಾಮ್ರ ಘಟಕದ ವಿಸ್ತರಣೆಗೆ ಹೈಕೋರ್ಟ್ ಮಧ್ಯಂತರ ತಡೆ

ಈ ಸಂಬಂಧ ಬುಧವಾರ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮಿಳು ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ತಲೆಬಾಗಲು ನಿರಾಕರಿಸುವವರನ್ನು ಸರ್ಕಾರ ಕೊಲೆ ಮಾಡುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Tamilians being murdered because they refused to bow down to RSS ideals: rahul

'ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಒಪ್ಪಿಕೊಳ್ಳದ ಕಾರಣಕ್ಕೆ ತಮಿಳರನ್ನು ಹತ್ಯೆ ಮಾಡಲಾಗುತ್ತಿದೆ. ತಮಿಳಿಗರ ಭಾವನೆಗಳನ್ನು ಹತ್ತಿಕ್ಕಲು ಆರ್‌ಎಸ್‌ಎಸ್ ಮತ್ತು ಮೋದಿ ಬೆಂಬಲಿಗರಿಂದ ಸಾಧ್ಯವಿಲ್ಲ. ತಮಿಳು ಸಹೋದ ಸಹೋದರಿಯರೇ, ನಾವು ನಿಮ್ಮೊಂದಿಗೆ ಇದ್ದೇವೆ' ಎಂದು ತಮಿಳಿನಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮಂಗಳವಾರ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರ ಕ್ರಮವನ್ನು ರಾಹುಲ್ ಗಾಂಧಿ ಖಂಡಿಸಿದ್ದರು. ನಾಗರಿಕರನ್ನು ಗುಂಡು ಹಾರಿಸಿ ಉರುಳಿಸುವುದು ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯ ಕ್ರೂರ ಉದಾಹರಣೆ.

ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಈ ನಾಗರಿಕರನ್ನು ಕೊಲ್ಲಲಾಗುತ್ತಿದೆ. ಈ ಹುತಾತ್ಮರು ಮತ್ತು ಗಾಯಾಳುಗಳ ಕುಟುಂಬದವರ ಜತೆಗೆ ನಾನಿದ್ದೇನೆ ಎಂದು ರಾಹುಲ್ ಹೇಳಿದ್ದರು.

ತೂತುಕುಡಿಯಲ್ಲಿ ನಿಲ್ಲದ ಗಲಭೆ, ಪೊಲೀಸರ ಗುಂಡಿಗೆ ಮತ್ತೋರ್ವ ಬಲಿ ತೂತುಕುಡಿಯಲ್ಲಿ ನಿಲ್ಲದ ಗಲಭೆ, ಪೊಲೀಸರ ಗುಂಡಿಗೆ ಮತ್ತೋರ್ವ ಬಲಿ

ಜಲಿಯನ್ ವಾಲಾಬಾಗ್‌ಗೆ ಹೋಲಿಸಿದ ಡಿಎಂಕೆ
ತೂತುಕುಡಿಯಲ್ಲಿ ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿ 11 ಮಂದಿ ಬಲಿಯಾದ ಪ್ರಕರಣವನ್ನು ತಮಿಳುನಾಡಿನ ವಿರೋಧ ಪಕ್ಷ ಡಿಎಂಕೆ, 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಕೆ ಮಾಡಿದೆ.

ಇ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿರುವ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಆದೇಶಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಯಾಕೆ ಇರಲಿಲ್ಲ? ಈ ದುರದೃಷ್ಟಕರ ಸಾವುಗಳಿಗೆ ರಾಜ್ಯ ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯ ಕಾರಣ ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಆದೇಶಿಸಿದ್ದು ಯಾರು?ಗುಂಪನ್ನು ಚೆದುರಿಸಲು ಆಟೊಮ್ಯಾಟಿಕ್ ಶಸ್ತ್ರಾಸ್ತ್ರವನ್ನು ಏಕೆ ಬಳಸಲಾಯಿತು? ಅದಕ್ಕೆ ಯಾವ ಕಾನೂನಿನ ಅಡಿ ಅನುಮತಿ ನೀಡಲಾಯಿತು? ಗಂಭೀರ ಗಾಯಗಳು ಆಗದಂತೆ ತಡೆಯಲು ಏಕೆ ರಬ್ಬರ್/ಪ್ಲಾಸ್ಟಿಕ್ ಬುಲೆಟ್‌ಗಳನ್ನು ಏಕೆ ಬಳಸಲಿಲ್ಲ? ಗುಂಡು ಹಾರಿಸುವ ಮುನ್ನ ಏಕೆ ಎಚ್ಚರಿಕೆ ನೀಡಲಿಲ್ಲ? ಎಂದು ಸರಣಿ ಪ್ರಶ್ನೆಗಳನ್ನು ಸ್ಟಾಲಿನ್ ಮುಂದಿಟ್ಟಿದ್ದಾರೆ.

English summary
Tuticorin sterlite protest Rahul Gandhi said that the Tamilians are being murdered because they refused to bow down to RSS ideals. RSS and BJP of crushing the voice of Tamil people, he accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X