• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿಗಾಗಿ ತಮಿಳುನಾಡು ರೈತರ ವಿಭಿನ್ನ ಪ್ರತಿಭಟನೆ:ಇತರೆ ಚಿತ್ರಗಳು

|

ಬೆಂಗಳೂರು, ಏಪ್ರಿಲ್ 07: ತಮಿಳುನಾಡಿನ ತಿರುಚಿರಾಪಲ್ಲಿಯ ಕಾವೇರಿ ನದಿ ದಂಡೆಯಲ್ಲಿ ಮರಳಿನಲ್ಲಿ ತಮ್ಮನ್ನು ತಾವು ಭಾಗಶಃ ಸಮಾಧಿ ಮಾಡಿಕೊಳ್ಳುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ರೈತರು ಇಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಆದರೆ, ಕೆಲ ಸಮಯದ ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪೊಲೀಸರು ರೈತರನ್ನು ಮರಳಿನಿಂದ ಹೊರಗೆ ಕರೆತಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಡಿಎಂಕೆ ಹಾಗೂ ಇತರ ಪಕ್ಷಗಳು ಕರೆ ನೀಡಿದ್ದ ಬಂದ್‌ನಿಂದಾಗಿ ತಮಿಳುನಾಡಿನಲ್ಲಿ (ಏ.5)ಗುರುವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ, ಮಂಡಳಿ ರಚನೆಗೆ ಒತ್ತಾಯಿಸಿ ಏಪ್ರಿಲ್ 11ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಫೆ.16ರಂದು ಕಾವೇರಿ ನದಿ ನೀರು ಹಂಚಿಕೆ ಕುರಿತು ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಆರು ವಾರದೊಳಗೆ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಕಾವೇರಿ ಜಲಮಂಡಳಿಗಾಗಿ ರಸ್ತೆಯಲ್ಲೇ ಮಲಗಿದ ಡಿಎಂಕೆ ಕಾರ್ಯಕರ್ತರು!

ಆದರೆ ಮೂರು ತಿಂಗಳು ಕಳೆದರೂ ಮಂಡಳಿ ರಚನೆಯಾಗದಿರುವುದು ರಾಜಕೀಯ ಮತ್ತು ರೈತ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರದ ವಿರುದ್ಧ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಕೂಡ ದಾಖಲಿಸಿದ್ದು ಏ.9ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ದೇಶದಲ್ಲಿ ನಡೆದ ಇನ್ನೂ ಪ್ರಮುಖ ಘಟನೆಗಳ ವಿವಿರವನ್ನು ಚಿತ್ರಗಳ ಸಮೇತ ವಿವರಿಸಲಾಗಿದೆ.

ನ್ಯಾಯಾಲಯಕ್ಕೆ ತೆರಳುವ ಮುನ್ನ ಸಲ್ಮಾನ್: ಪ್ರಮುಖ ಚಿತ್ರಗಳು

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

ತಮಿಳುನಾಡಿನ ತಿರುಚಿರಾಪಲ್ಲಿಯ ಕಾವೇರಿ ನದಿ ದಂಡೆಯಲ್ಲಿ ಮರಳಿನಲ್ಲಿ ತಮ್ಮನ್ನು ತಾವು ಭಾಗಶಃ ಸಮಾಧಿ ಮಾಡಿಕೊಳ್ಳುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ರೈತರು ಇಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಆದರೆ, ಕೆಲ ಸಮಯದ ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪೊಲೀಸರು ರೈತರನ್ನು ಮರಳಿನಿಂದ ಹೊರಗೆ ಕರೆತಂದರು.

ದೆಹಲಿಯಲ್ಲಿ ಕಾಣಿಸಿಕೊಂಡ ಮಿಂಚು

ದೆಹಲಿಯಲ್ಲಿ ಕಾಣಿಸಿಕೊಂಡ ಮಿಂಚು

ದಿನೇ ದಿನೇ ಹವಮಾನ ಬದಲಾವಣೆಯಾಗುತ್ತಲೇ ಇದೆ. ಕರ್ನಾಟಕದಲ್ಲಿ ಒಂದುವಾರಗಳ ಕಾಲ ಮೋಡದ ವಾತಾವರಣ ಗೋಚರಿಸಿತ್ತು. ಕೆಲವೆಡೆ ಮಳೆಯಾಗಿತ್ತು. ಇದೀಗ ದೆಹಲಿಯ ಸರದಿ, ಕೆಲವು ದಿನಗಳಿಂದ ಸುಡು ಬೇಸಿಗೆ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ಇದೀಗ ಮೋಡದ ವಾತಾವರಣ ಸ್ಋಷ್ಟಿಯಾಗಿದ್ದು, ದೆಹಲಿಯ ರೈಸಿನಾ ಹಿಲ್ಸ್‌ನಲ್ಲಿ ಮಿಂಚಿನ ಓಟ ಸೆರೆಯಾಗಿದ್ದು ಹೀಗೆ.

ದೆಹಲಿಯಲ್ಲಿ ವಾಹನಕ್ಕಾಗಿ ಕಾದುನಿಂತಿರುವ ಮಹಿಳೆ

ದೆಹಲಿಯಲ್ಲಿ ವಾಹನಕ್ಕಾಗಿ ಕಾದುನಿಂತಿರುವ ಮಹಿಳೆ

ದೆಹಲಿಯಲ್ಲಿ ರಾತ್ರಿ ಮಹಿಳೆ ತನ್ನ ಮಗಳೊಂದಿಗೆ ವಾಹನಕ್ಕಾಗಿ ಕಾದುನಿಂತಿರುವ ದೃಶ್ಯ ಸೆರೆಯಾಗಿದ್ದು ಹೀಗೆ. ದೆಹಲಿಯಂತಹ ಪ್ರದೇಶಗಳಲ್ಲಿ ಹಗಲಿನ ವೇಳೆಯೇ ಮಹಿಳೆಯರು ನೆಮ್ಮದಿಯಿಂದ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿರುವಾಗ ರಾತ್ರಿ ಹೊತ್ತು ಸಂಚರಿಸುವುದು ಅಪಾಯವೇ ಸರಿ.

ಮಾಲಿನ್ಯ ತುಂಬಿದ ಉದ್ಯಾನ

ಮಾಲಿನ್ಯ ತುಂಬಿದ ಉದ್ಯಾನ

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಸರ್ಕಾರವೂ ಎಷ್ಟೇ ಕ್ರಮ ಕೈಗೊಂಡರೂ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ದೆಹಲಿಯ ಲೋಧಿ ಗಾರ್ಡ್ ನಲ್ಲಿ ಕಂಡು ಬಂದ ಈ ಮಾಲಿನ್ಯದ ಪ್ರಮಾಣ ನೋಡಿದರೆ ಮಾಲಿನ್ಯ ಯಾವ ಪ್ರಮಾಣದಲ್ಲಿದೆ ಎನ್ನುವುದು ಅರ್ಥವಾದೀತು.

ಕಾಲುವೆಗೆ ಉರುಳಿದ ಟಿಪ್ಪರ್ ಮಹಿಳೆಯರ ಸಾವು

ಕಾಲುವೆಗೆ ಉರುಳಿದ ಟಿಪ್ಪರ್ ಮಹಿಳೆಯರ ಸಾವು

ತೆಲಂಗಾಣದ ನಲಗೊಂಡ ಜಿಲ್ಲೆಯ ವಡ್ಡಿಪಟ್ಲಾ ಗ್ರಾಮದಲ್ಲಿ ಟ್ರ್ಯಾಕ್ಟರೊಂದು ಕಾಲುವೆಗೆ ಉರುಳಿ 9 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ‘30 ಮಂದಿ ಕೃಷಿ ಕಾರ್ಮಿಕರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಮಗುಚಿದೆ' ‘ಚಾಲಕ ಮೊಬೈಲ್‌ನಲ್ಲಿ ಮಾತನಾಡಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಬಿಜೆಪಿ ಪ್ರತಿಭಟನಾ ಫಲಕಗಳು ಗಾಂಧಿ ಪ್ರತಿಮೆ ಬಳಿ ಸೆರೆಯಾದದ್ದು ಹೀಗೆ

ಬಿಜೆಪಿ ಪ್ರತಿಭಟನಾ ಫಲಕಗಳು ಗಾಂಧಿ ಪ್ರತಿಮೆ ಬಳಿ ಸೆರೆಯಾದದ್ದು ಹೀಗೆ

ಪಾರ್ಲಿಮೆಂಟ್‌ನಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಬಿಜೆಪಿ ಸಂಸದರು ಕೈಗೊಂಡಿದ್ದ ಪ್ರತಿಭಟನೆ ನಂತರ, ಪಾರ್ಲಿಮೆಂಟ್ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನಾ ಫಲಕಗಳನ್ನು ಇಟ್ಟು ತೆರಳಿರುವ ದೃಶ್ಯವನ್ನು ನೋಡಬಹುದು.

ಬಿದಿರನ್ನು ಕೊಂಡೊಯ್ಯುತ್ತಿರುವ ಕಾರ್ಮಿಕ

ಬಿದಿರನ್ನು ಕೊಂಡೊಯ್ಯುತ್ತಿರುವ ಕಾರ್ಮಿಕ

ಗುವಾಹಟಿಯಲ್ಲಿರುವ ಬ್ರಹ್ಮಪುತ್ರ ನದಿ ಮೂಲಕ ಸಾವಿರಾರು ಬಿದಿರುಗಳನ್ನು ಕಾರ್ಮಿಕ ಕೊಂಡೊಯ್ಯುತ್ತಿರುವ ದೇಶ್ಯವನ್ನು ಈ ಚಿತ್ರದಲ್ಲಿ ಗಮನಿಸಬಹುದಾಗಿದೆ. ಬ್ರಹ್ಮಪುತ್ರ ನದಿಯಿಂದಾಚೆ ಇರುವ ಕಾಡಿನಿಂದ ಈ ಬಿದಿರುಗಳನ್ನು ನದಿ ಮೂಲಕ ಮತ್ತೊಂದು ದಡಕ್ಕೆ ತಂದು ಅಲ್ಲಿಂದ ಹೊತ್ತೊಯ್ಯುತ್ತಿರುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil Nadu Farmers protest over cauvery management board in Tiruchirapalli. Supreme court has directed to central government to constitute management board.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more