ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಜಲಮಂಡಳಿಗಾಗಿ ಇಂದು ತಮಿಳುನಾಡು ಬಂದ್

|
Google Oneindia Kannada News

Recommended Video

ಕಾವೇರಿ ಜಲಮಂಡಳಿ ವಿವಾದ : ತಮಿಳುನಾಡು ರಾಜ್ಯದಾದ್ಯಂತ ಬಂದ್ | Oneindia Kannada

ಚೆನ್ನೈ, ಏಪ್ರಿಲ್ 05: ಕಾವೇರಿ ಜಲ ನಿರ್ವಹಣ ಮಂಡಳಿ ನಿರ್ಮಿಸುವಂತೆ ಒತ್ತಾಯಿಸಿ ಮತ್ತು ಮಂಡಳಿ ನಿರ್ಮಿಸಲು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ತಮಿಳುನಾಡು ಬಂದ್ ಗೆ ಡಿಎಂಕೆ ಮತ್ತು ತಮಿಳುನಾಡಿನ ಇನ್ನಿತರ ವಿಪಕ್ಷ ಸದಸ್ಯರು ಕರೆನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಇಂದು(ಏ.5) ಕರೆನೀಡಿರುವ ರಾಜ್ಯವ್ಯಾಪಿ ಬಂದ್ ನಿಂದಾಗಿ ತಮಿಳುನಾಡಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ತಮಿಳುನಾಡು ಬಂದ್ ಹಿನ್ನೆಲೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಕೆಎಸ್ ಆರ್ಟಿಸಿ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ)ಯ 250 ಕ್ಕೂ ಹೆಚ್ಚು ಬಸ್ ಗಳನ್ನು ರದ್ದು ಮಾಡಲಾಗಿದೆ.

ತಮಿಳುನಾಡಿನ ಹಲವೆಡೆ ರಸ್ತೆ ತಡೆ, ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆಯಿಂದಲೇ ರಾಜ್ಯದಲ್ಲಿ ಪ್ರತಿಭಟನೆಯ ಕಾವು ಏರಿದ್ದು, ಡಿಎಂಕೆಯ ಹಲವು ಸದಸ್ಯರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದರು.

ಕಾವೇರಿ ಜಲಮಂಡಳಿಗಾಗಿ ರಸ್ತೆಯಲ್ಲೇ ಮಲಗಿದ ಡಿಎಂಕೆ ಕಾರ್ಯಕರ್ತರು!ಕಾವೇರಿ ಜಲಮಂಡಳಿಗಾಗಿ ರಸ್ತೆಯಲ್ಲೇ ಮಲಗಿದ ಡಿಎಂಕೆ ಕಾರ್ಯಕರ್ತರು!

Tamil Nadu bandh for demanding to form Cauvery management board

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆ.16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ತೀರ್ಪು ಬಂದ ಆರುವಾರಗಳ ಒಳಗೆ ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಂತೆ ಆದೇಶ ನೀಡಿತ್ತು. ಆದರೆ ಇದುವರೆಗೂ ಕಾವೇರಿ ನಿರ್ವಹಣ ಮಂಡಳಿಯನ್ನು ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂದು ತಮಿಳುನಾಡು ದೂರಿದೆ.

ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ಧ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಏ.9 ರಂದು ನಡೆಯಲಿದೆ.

English summary
DMK and other opposition demonstrate 'road-roko' protest, the parties have also called for a state-wide bandh over Cauvery Mangement Board issue. Heavy Police force deployed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X