• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಸ್ಟ್ ಡೋಸ್ ಕೋವಿಶೀಲ್ಡ್, 2ನೇ ಡೋಸ್ ಕೊವ್ಯಾಕ್ಸಿನ್: ಅಪಾಯವೇ? ಸರಕಾರದ ಸ್ಪಷ್ಟನೆ

|
Google Oneindia Kannada News

ಲಸಿಕೆ ಅಭಾವದ ಹಾಹಾಕಾರದ ನಂತರ ದೇಶಾದ್ಯಂತ ಲಸಿಕೆ ಅಭಿಯಾನ ಒಂದು ಹಂತಕ್ಕೆ ಸರಿದಾರಿಗೆ ಬರುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳು ಕೂಡಾ ತಮ್ಮ ಉದ್ಯೋಗಿಗಳಿಗೆ ಕಚೇರಿಯಲ್ಲೇ ಲಸಿಕೆ ಹಾಕಿಸುತ್ತಿರುವುದರಿಂದ ಜನಸಂದಣಿ ಕಮ್ಮಿಯಾಗುತ್ತಿದೆ.

ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21ರಿಂದ ದೇಶಾದ್ಯಂತ ಉಚಿತ ಲಸಿಕೆ ಎಂದು ಪ್ರಧಾನಿ ಮೋದಿ ಈಗಾಗಲೇ ಘೋಷಿಸಿದ್ದಾರೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಕೂಡಾ ಭಾರತಕ್ಕೆ ಆಗಮಿಸಿರುವುದರಿಂದ ವ್ಯಾಕ್ಸಿನೇಶನ್ ವೇಗ ಪಡೆದುಕೊಳ್ಳುತ್ತಿದೆ.

ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?

ಭಾರತ ಸರಕಾರದ ಆರೋಗ್ಯ ಇಲಾಖೆಯ ಜೂನ್ ಹದಿಮೂರರ ಅಂಕಿಅಂಶದ ಪ್ರಕಾರ ಇದುವರೆಗೆ ದೇಶಾದ್ಯಂತ 25,31,95,048 ಲಸಿಕೆಯನ್ನು ಹಾಕಲಾಗಿದೆ. ಜೊತೆಗೆ, 37,62,32,162 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.

 ಲಸಿಕೆಗಳ ನಡುವಿನ ಅಂತರ ಕಡಿಮೆಗೊಳಿಸುವ ಬಗ್ಗೆ ಕೇಂದ್ರ ಹೇಳಿದ್ದಿಷ್ಟು! ಲಸಿಕೆಗಳ ನಡುವಿನ ಅಂತರ ಕಡಿಮೆಗೊಳಿಸುವ ಬಗ್ಗೆ ಕೇಂದ್ರ ಹೇಳಿದ್ದಿಷ್ಟು!

ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದೆ. ಇದಾದ ನಂತರ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳಿವೆ. ಈ ನಡುವೆ, ಮೊದಲ ಡೋಸ್ ಅನ್ನು ಕೋವಿಶೀಲ್ಡ್ ಮತ್ತು ಎರಡನೇ ಡೋಸ್ ಅನ್ನು ಕೊವ್ಯಾಕ್ಸಿನ್ ತೆಗೆದುಕೊಂಡರೆ ಅಪಾಯವೇ ಎನ್ನುವುದರ ಬಗ್ಗೆ ಸರಕಾರ ಸ್ಪಷ್ಟನೆಯನ್ನು ನೀಡಿದೆ.

 ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮೊದಲನೇ ಮತ್ತು ಎರಡನೇ ಡೋಸ್

ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮೊದಲನೇ ಮತ್ತು ಎರಡನೇ ಡೋಸ್

ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮೊದಲನೇ ಮತ್ತು ಎರಡನೇ ಡೋಸ್ ಬೇರೆ ಬೇರೆ ದಿನಗಳ ಅಂತರದೊಂದಿಗೆ ಹಾಕಿಸಿಕೊಳ್ಳಬೇಕು. ಮೊದಲನೇ ಡೋಸ್ ಕೋವಿಶೀಲ್ಡ್ ತೆಗೆದುಕೊಂಡು, ಎರಡನೇ ಡೋಸಿಗೆ ಎಂಬತ್ತು ದಿನ ಕಾಯುವ ಬದಲು ಕೊವ್ಯಾಕ್ಸಿನ್ ಹಾಕಿಸಿಕೊಂಡರೆ ಏನಾಗುತ್ತದೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಅಲ್ಲಲ್ಲಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಈ ರೀತಿ ಸ್ಪಷ್ಟನೆಯನ್ನು ನೀಡಿದೆ.

 ಕೇಂದ್ರ ಆರೋಗ್ಯ ಇಲಾಖೆ ಕಳೆದ ಗುರುವಾರ (ಜೂ10) ಬಿಡುಗಡೆ

ಕೇಂದ್ರ ಆರೋಗ್ಯ ಇಲಾಖೆ ಕಳೆದ ಗುರುವಾರ (ಜೂ10) ಬಿಡುಗಡೆ

ಕೇಂದ್ರ ಆರೋಗ್ಯ ಇಲಾಖೆ ಕಳೆದ ಗುರುವಾರ (ಜೂ10) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಎರಡು ಬೇರೆ ಬೇರೆ ಡೋಸ್ ಗಳನ್ನು ಹಾಕಿಸಿಕೊಂಡರೆ ಭಾರೀ ಪ್ರಮಾಣದಲ್ಲಿ ತೊಂದರೆ ಆಗುವುದಿಲ್ಲ. ಆದರೂ, ಎರಡೂ ಡೋಸ್ ಅನ್ನು ಒಂದೇ ಸಂಸ್ಥೆಯ ಲಸಿಕೆಯನ್ನು ಹಾಕಿಸಿಕೊಳ್ಳಲು ಶಿಫಾರಸು ಮಾಡಿದೆ.

 ವ್ಯತಿರಿಕ್ತ ಪರಿಣಾಮ ಇದರಿಂದ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ

ವ್ಯತಿರಿಕ್ತ ಪರಿಣಾಮ ಇದರಿಂದ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ

ಆದರೂ, ಬೇರೆ ಬೇರೆ ಲಸಿಕೆಯನ್ನು ಹಾಕಿಸಿಕೊಂಡರೆ ಅದರೆ ಗಂಭೀರ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ. ಹಾಗಾಗಿ, ಸ್ವಲ್ಪವೂ ವ್ಯತಿರಿಕ್ತ ಪರಿಣಾಮ ಇದರಿಂದ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

  ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ CM | Oneindia Kannada
   ಉತ್ತರ ಪ್ರದೇಶದ ಜಿಲ್ಲೆಯೊಂದರ ಹಳ್ಳಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೇರೆ ಬೇರೆ ಲಸಿಕೆ

  ಉತ್ತರ ಪ್ರದೇಶದ ಜಿಲ್ಲೆಯೊಂದರ ಹಳ್ಳಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೇರೆ ಬೇರೆ ಲಸಿಕೆ

  ಈಗಿರುವ ಅತ್ಯಂತ ಸ್ಪಷ್ಟ ಮಾರ್ಗಸೂಚಿಯ ಪ್ರಕಾರ ಸಾರ್ವಜನಿಕರು ಮೊದಲನೇ ಡೋಸ್ ಒಂದು, ಎರಡನೇ ಡೋಸ್ ಇನ್ನೊಂದು ಹಾಕಿಸಿಕೊಳ್ಳಲು ಬಂದರೂ, ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳು ಹಾಕುವಂತಿಲ್ಲ. ಆದರೂ, ಬೇರೆ ಬೇರೆ ಲಸಿಕೆ ಹಾಕಿಸಿಕೊಂಡರೆ ತೀರಾ ಗಂಭೀರ ಪರಿಣಾಮವಿಲ್ಲ ಎಂದು ಉತ್ತರ ಪ್ರದೇಶದ ಜಿಲ್ಲೆಯೊಂದರ ಹಳ್ಳಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೇರೆ ಬೇರೆ ಲಸಿಕೆ ನೀಡಿದ್ದನ್ನು ಉಲ್ಲೇಖಿಸಿ ಈ ಸರಕಾರ ಈ ಸ್ಪಷ್ಟನೆಯನ್ನು ನೀಡಿದೆ.

  English summary
  Taking COVISHIELD In The First Dose And COVAXIN In The Second Dose? Is it SAFE? Check What Government Says
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X