ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿ ತಾಣ ಆದಾಯ : ತಾಜ್ ಮಹಲ್ ನಂ.1

By Mahesh
|
Google Oneindia Kannada News

ಆಗ್ರಾ, ಆ.8: ದೇಶದ ಅತ್ಯುತ್ತಮ ಸ್ಮಾರಕಗಳಲ್ಲಿ ಒಂದಾಗಿ ಇಂದಿಗೂ ನವ ಜೋಡಿಗಳಿಗೆ ಪ್ರೀತಿ-ಪ್ರೇಮದ ಸಂಕೇತದಂತಿರುವ ಐತಿಹಾಸಿಕ ತಾಜ್‌ಮಹಲ್ ಈ ವರ್ಷ ಅತಿ ಹೆಚ್ಚು ಆದಾಯ ತಂದುಕೊಟ್ಟ ಸ್ಮಾರಕಗಳಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಶ್ರೀಪಾದ್ ಯೆಸ್ಸೊ ನಾಯ್ಕ್ ಅವರ ಹೇಳಿಕೆ ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

2013-14ನೇ ಸಾಲಿನಲ್ಲಿ ತಾಜ್‌ಮಹಲ್‌ಗೆ ದೇಶ-ವಿದೇಶಗಳಿಂದ ಭೇಟಿ ನೀಡಿದ ಪ್ರವಾಸಿಗರಿಂದಾಗಿ ಒಟ್ಟು 80 ಕೋಟಿ ಆದಾಯ ಗಳಿಕೆಯಾಗಿದೆ. ದೇಶದ ಪ್ರತಿಷ್ಠಿತ 20 ಐತಿಹಾಸಿಕ ಸ್ಮಾರಕಗಳಲ್ಲಿ ತಾಜ್‌ಮಹಲ್ ಈಗಲೂ ಕೂಡ ಮೊದಲ ಸ್ಥಾನವನ್ನೇ ಪಡೆದುಕೊಂಡಿದೆ.

ಈ ವರ್ಷ ತಾಜ್‌ಮಹಲ್‌ಗೆ ಪ್ರವಾಸಿಗರು ಭೇಟಿ ನೀಡಿದ್ದರಿಂದ 80 ಕೋಟಿ ಆದಾಯ ಬಂದಿದ್ದರೆ, ಎರಡನೆ ಸ್ಥಾನವನ್ನು ದೆಹಲಿಯ ಪ್ರತಿಷ್ಠಿತ ಕುತುಬ್ ಮಿನಾರ್ ಪಡೆದಿದೆ.

Taj Mahal Rakes In US$3.54 Million In Revenue, Mostly In Entrance Fee

ಕುತುಬ್ ಮಿನಾರ್ ಸ್ಮಾರಕದಿಂದ 10 ಕೋಟಿ 16 ಲಕ್ಷ ಬಂದಿದೆ, 3ನೇ ಸ್ಥಾನದಲ್ಲಿ ಹುಮಾಯೂನ್ ಗೋರಿಯಿಂದ 7.12 ಲಕ್ಷ ಹಾಗೂ 4ನೇ ಸ್ಥಾನದಲ್ಲಿ ದೇಶದ ಐತಿಹಾಸಿಕ ಕೆಂಪುಕೋಟೆಯಿಂದ 6 ಕೋಟಿ 16 ಲಕ್ಷ ಆದಾಯ ಬಂದಿದೆ. ಭಾರತೀಯ ಟಾಪ್ 20 ಸ್ಮಾರಕಗಳಿಂದ ಸುಮಾರು 80.01 ಕೋಟಿ (12.98 USD) ಗಳಿಕೆಯಾಗಿದೆ.

ದೆಹಲಿಯ ಪತೇಫುರ್ ಸಿಖ್ರಿ, ಮಹಾಬಲಿಪುರಂ, ಹೈದರಾಬಾದ್‌ನ ಚಾರ್‌ಮಿನಾರ್ ಕೋಟೆ, ಕರ್ನಾಟಕದ ಹಂಪಿ, ಗೋಲ್ಕುಂಡ ಕೋಟೆ ಸೇರಿದಂತೆ ಮತ್ತಿತರ ಸ್ಮಾರಕಗಳಿಗೆ ಗಣನೀಯ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸುಮಾರು 361 ವರ್ಷಗಳ ಇತಿಹಾಸದ ಹಿನ್ನೆಲೆ ಹೊಂದಿರುವ ಪ್ರೇಮ ಸ್ಮಾರಕ ತಾಜಮಹಲ್ ಪ್ರವೇಶ ಶುಲ್ಕ ಪ್ರತಿ ವಿದೇಶಿ ಪ್ರವಾಸಿಗರಿಗೆ ಸುಮಾರು 750 ರು (12.17 USD), ಬಾಂಗ್ಲಾದೇಶ, ಭೂತನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾದ ಪ್ರವಾಸಿಗರಿಗೆ 510 ರು ಹಾಗೂ ತಾಜ್ ಮಹಲ್ ನೋಡಲು ಭಾರತೀಯ ಪ್ರಜೆಗಳಿಗೆ 20 ರು ಪ್ರವೇಶ ಶುಲ್ಕ ದರ ನಿಗದಿಯಾಗಿದೆ.

English summary
One of the world's renowned monument, Taj Mahal and its integrated complex structure located in Agra, in the state of Uttar Pradesh, has raked in Rs21.84 crore (US$3.54 million) in revenue, mostly in entrance fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X