ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಮಕ್ಕಳಿಗೆ ಕೊರೊನಾವೈರಸ್ ತಗುಲಿದರೆ 6 ದಿನದಲ್ಲೇ ಗುಣಮುಖ!

|
Google Oneindia Kannada News

ನವದೆಹಲಿ, ಆಗಸ್ಟ್ 4: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಆಗಿರಲಿದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇದರ ಮಧ್ಯೆ ಸೋಂಕು ತಗುಲಿದ ಮಕ್ಕಳು ಅಲ್ಪಾವಧಿಯಲ್ಲೇ ಗುಣಮುಖರಾಗುತ್ತಾರೆ ಎಂಬುದಾಗಿ ಮತ್ತೊಂದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

'ಕೊವಿಡ್-19 ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡ ಮಗು ಕೇವಲ ಆರು ದಿನಗಳಲ್ಲಿ ಗುಣಮುಖವಾಗುತ್ತದೆ. ಅದರಿಂದ ಆಚೆಗೆ ಕೊರೊನಾವೈರಸ್ ಸೋಂಕಿನ ಲಕ್ಷಣಗಳನ್ನು ಅನುಭವಿಸುತ್ತಿದ್ದ ಮಗು ಗರಿಷ್ಠ 4 ವಾರಗಳಲ್ಲಿ ಚೇತರಿಕೆ ಕಾಣುತ್ತದೆ,' ಎಂದು ಯುನೈಟೆಡ್ ಕಿಂಗ್ ಡಮ್ ನಲ್ಲಿ ನಡೆಸಿರುವ ಅಧ್ಯಯನದ ಕುರಿತು 'ದಿ ಲ್ಯಾನ್ಸೆಟ್ ಚೈಲ್ಡ್ ಆಂಡ್ ಅಡೋಲ್ಸೆಂಟ್ ಹೆಲ್ತ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್ ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್

ಲಂಡನ್ ಕಿಂಗ್ ಕಾಲೇಜ, ಲಂಡನ್ ವಿಶ್ವವಿದ್ಯಾಲಯ ಕಾಲೇಜು, ನ್ಯೂಕ್ಯಾಸ್ಟಲ್ ವಿಶ್ವವಿದ್ಯಾಲಯ, ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರೊಪಿಕಲ್ ಮೆಡಿಸಿನ್ ಸೇರಿದಂತೆ ಹಲವು ಕಾಲೇಜುಗಳು ಸೇರಿಕೊಂಡು ಈ ಸಂಶೋಧನೆಯನ್ನು ನಡೆಸಿವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದ್ದು, ಯುನೈಟೆಡ್ ಕಿಂಗ್ ಡಮ್ ನಲ್ಲಿ ವಾಸಿಸುವ 2 ರಿಂದ 17 ವರ್ಷದೊಳಗಿನ 2.50 ಲಕ್ಷ ವಿದ್ಯಾರ್ಥಿಗಳ ಮಾಹಿತಿ ಪಡೆಯಲಾಗಿತ್ತು. 2020ರ ಸಪ್ಟೆಂಬರ್ 1 ರಿಂದ 2021ರ ಫೆಬ್ರವರಿ 22ರವರೆಗೂ ಸಂಗ್ರಹಿಸಿದ 1734 ಮಕ್ಕಳ ಮಾದರಿ ಮೇಲೆ ಹೆಚ್ಚಿನ ನಿಗಾ ವಹಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.

ಮಕ್ಕಳಿಗೆ ಗೋಚರಿಸುವ ಸಾಮಾನ್ಯ ಲಕ್ಷಣಗಳೇನು?

ಮಕ್ಕಳಿಗೆ ಗೋಚರಿಸುವ ಸಾಮಾನ್ಯ ಲಕ್ಷಣಗಳೇನು?

ಸಾಮಾನ್ಯವಾಗಿ ಕೊರೊನಾವೈರಸ್ ಸೋಂಕು ತಗುಲಿದ ಮಕ್ಕಳು ಸುಮಾರು ಆರು ದಿನಗಳವರೆಗೂ ಅನಾರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಪೈಕಿ ಸೋಂಕು ತಗುಲಿದ ಮಕ್ಕಳಲ್ಲಿ ಶೇ.62.2ರಷ್ಟು ಮಕ್ಕಳಿಗೆ ತಲೆನೋವು ಹಾಗೂ ಶೇ.55ರಷ್ಟು ಮಕ್ಕಳಲ್ಲಿ ಆಯಾಸದ ಲಕ್ಷಣಗಳು ಗೋಚರಿಸುತ್ತವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಬಹುತೇಕ ಮಕ್ಕಳು ಸೋಂಕಿನ ಲಕ್ಷಣಗಳು ಗೋಚರಿಸುವುದಕ್ಕೆ ಶುರುವಾದ ನಾಲ್ಕು ವಾರಗಳಲ್ಲಿ ಗುಣಮುಖರಾಗುತ್ತಾರೆ. ಅಧ್ಯಯನ ನಡೆಸಿದ 1734 ಮಕ್ಕಳಲ್ಲಿ ಶೇ.4.4ರಷ್ಟು ಮಕ್ಕಳು ಅಂದರೆ 77 ಮಕ್ಕಳು ಒಂದು ತಿಂಗಳಿನಲ್ಲಿ ರೋಗದಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಾಲ್ಕು ವಾರ ಸೋಂಕಿನಿಂದ ಬಳಲುವವರಲ್ಲಿ ಆರು ಲಕ್ಷಣಗಳು

ನಾಲ್ಕು ವಾರ ಸೋಂಕಿನಿಂದ ಬಳಲುವವರಲ್ಲಿ ಆರು ಲಕ್ಷಣಗಳು

ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ ಮಕ್ಕಳು ನಾಲ್ಕು ವಾರಕ್ಕಿಂತ ಹೆಚ್ಚು ಅವಧಿ ಬಳಲುತ್ತಿದ್ದರೆ ಅಂಥವರಲ್ಲಿ ಆಯಾಸ ಸೇರಿದಂತೆ ಒಟ್ಟು ಆರು ರೀತಿಯ ಲಕ್ಷಣಗಳು ಗೋಚರಿಸುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮೊದಲ ವಾರದಲ್ಲಿ ಅತಿಹೆಚ್ಚು ಸೋಂಕಿನ ಲಕ್ಷಣಗಳು ಗೋಚರಿಸುತ್ತದೆ. ಅತಿಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ತಲೆನೋವು ಮತ್ತು ಆಯಾಸವು ಸರ್ವೇ ಸಾಮಾನ್ಯ ಲಕ್ಷಣವಾಗಿದೆ. 28 ದಿನಗಳ ನಂತರದಲ್ಲಿ ಎರಡು ಲಕ್ಷಣಗಳಷ್ಟೇ ಕಾಣಿಸಿಕೊಳ್ಳಲಿದ್ದು, ವಾಸನೆ ಮತ್ತು ರುಚಿಯನ್ನು ಕಳೆದುಕೊಂಡ ಅನುಭವ ಉಂಟಾಗುತ್ತದೆ. ಇದೇ ರೀತಿಯಲ್ಲಿ ದೀರ್ಘಾವಧಿ ಸೋಂಕು ಅನುಭವಿಸಿದ 77 ಮಕ್ಕಳಲ್ಲಿ ಪ್ರಮುಖವಾಗಿ ಆರು ಲಕ್ಷಣಗಳು ಗೋಚರಿಸುತ್ತವೆ. ಆ ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ಓದಿ.

ದೀರ್ಘಾವಧಿಯ ಸೋಂಕಿತ ಮಕ್ಕಳಲ್ಲಿ ಗೋಚರಿಸುವ ಲಕ್ಷಣಗಳು:

* ಆಯಾಸ

* ತಲೆನೋವು

* ವಾಸನೆ ಗುರುತಿಸಲಾಗುವುದಿಲ್ಲ

* ರುಚಿ ಕಳೆದುಕೊಳ್ಳುವುದು

* ಗಂಟಲು ನೋವು

* ಶೀತ

8 ವಾರಗಳವರೆಗೂ ಮಕ್ಕಳಲ್ಲಿ ಜ್ವರದ ಲಕ್ಷಣಗಳು

8 ವಾರಗಳವರೆಗೂ ಮಕ್ಕಳಲ್ಲಿ ಜ್ವರದ ಲಕ್ಷಣಗಳು

ಸಂಶೋಧನಾ ಅಧ್ಯಯನದ ಕೊನೆಯ ಅವಧಿಯಲ್ಲಿ 1379 ಮಕ್ಕಳ ಪೈಕಿ ಶೇ.1.8ರಷ್ಟು ಮಕ್ಕಳಲ್ಲಿ ಎರಡು ತಿಂಗಳ ಹಿಂದೆಯೇ ಜ್ವರದ ಲಕ್ಷಣಗಳು ಗೋಚರಿಸಿತ್ತು ಎನ್ನಲಾಗಿದೆ. ಅಂದರೆ ಜ್ವರದ ಲಕ್ಷಣವು ಸೋಂಕಿತ ಮಕ್ಕಳಲ್ಲಿ 8 ವಾರಗಳವರೆಗೂ ಇರಬಹುದು. 25 ಮಕ್ಕಳಿಗೆ ಅದೇ ರೀತಿ ಲಕ್ಷಣ ಗೋಚರಿಸಿತ್ತು ಎಂದು ಹೇಳಲಾಗುತ್ತಿದೆ.

ಮಕ್ಕಳ ವಯಸ್ಸಿನ ಮೇಲೆ ಚೇತರಿಕೆ ಅವಧಿಯ ಲೆಕ್ಕ

ಮಕ್ಕಳ ವಯಸ್ಸಿನ ಮೇಲೆ ಚೇತರಿಕೆ ಅವಧಿಯ ಲೆಕ್ಕ

ಕೊರೊನಾವೈರಸ್ ಸೋಂಕು ತಗುಲಿದ ಮಕ್ಕಳ ವಯಸ್ಸಿನ ಆಧಾರದ ಮೇಲೆ ಚೇತರಿಕೆ ಅವಧಿ ನಿರ್ಧಾರವಾಗುತ್ತದೆ. ಹೆಚ್ಚು ವಯಸ್ಸಿನ ಮಕ್ಕಳ ಚೇತರಿಕೆ ಅವಧಿಯು ಚಿಕ್ಕ ವಯಸ್ಸಿನ ಮಕ್ಕಳ ಚೇತರಿಕೆ ಅವಧಿಗಿಂತಲೂ ಹೆಚ್ಚಾಗಿರುತ್ತದೆ. 12 ರಿಂದ 17 ವರ್ಷದೊಳಗಿನ ಮಕ್ಕಳು 7 ದಿನಗಳಲ್ಲಿ ಗುಣಮುಖರಾದರೆ, 5 ರಿಂದ 11 ವರ್ಷ ವಯಸ್ಸಿನ ಮಕ್ಕಳು 5 ದಿನಗಳಲ್ಲೇ ಗುಣಮುಖರಾಗುತ್ತಾರೆ. ಅದೇ ರೀತಿ ಸೋಂಕಿನ ಲಕ್ಷಣಗಳು ಹಿರಿಯ ವಯಸ್ಸಿನ ಮಕ್ಕಳಲ್ಲಿ ನಾಲ್ಕು ವಾರಗಳವರೆಗೂ ಕಾಣಿಸಿಕೊಳ್ಳುತ್ತವೆ. ಈ ಪ್ರಮಾಣವು ಚಿಕ್ಕವಯಸ್ಸಿನ ಮಕ್ಕಳಲ್ಲಿ ಕಡಿಮೆಯಾಗಿರುತ್ತದೆ. 12 ರಿಂದ 17 ವರ್ಷದೊಳಗಿನ ಮಕ್ಕಳಲ್ಲಿ ಶೇ.5.1ರಷ್ಟು ಮಕ್ಕಳಿಗೆ ನಾಲ್ಕು ವಾರಗಳವರೆಗೂ ಲಕ್ಷಣಗಳು ಗೋಚರಿಸುತ್ತವೆ. ಈ ಪ್ರಮಾಣವು 5 ರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.3.1ರಷ್ಟಿದೆ. ಇದೇ ರೀತಿ ಎಂಟು ವಾರಗಳವರೆಗೂ ಸೋಂಕಿನ ಲಕ್ಷಣಗಳು ಗೋಚರಿಸುವ ಪ್ರಮಾಣವು ಕ್ರಮವಾಗಿ ಶೇ.2 ಮತ್ತು ಶೇ1.3ರಷ್ಟಿದೆ.

ಕೊರೊನಾವೈರಸ್ ಮತ್ತು ಬಾಲ್ಯದ ರೋಗಗಳ ಮೇಲೆ ಲಕ್ಷ್ಯ

ಕೊರೊನಾವೈರಸ್ ಮತ್ತು ಬಾಲ್ಯದ ರೋಗಗಳ ಮೇಲೆ ಲಕ್ಷ್ಯ

ಕೋವಿಡ್ -19 ಸೋಂಕು ಇಲ್ಲದೇ ಸಾಮಾನ್ಯ ಶೀತ ಮತ್ತು ಜ್ವರದಂತಹ ಇತರ ಬಾಲ್ಯದ ರೋಗದ ಲಕ್ಷಣಗಳನ್ನು ಹೊಂದಿರುವ ಮಕ್ಕಳನ್ನು ಸಹ ಸಂಶೋಧಕರು ತಪಾಸಣೆಗೆ ಒಳಪಡಿಸಿದ್ದಾರೆ. ಇತರೆ ರೋಗವನ್ನು ಹೊಂದಿರುವ ಮಕ್ಕಳಿಗೆ ಹೋಲಿಸಿದರೆ ಕೋವಿಡ್ -19 ಇರುವ ಮಕ್ಕಳು ಹೆಚ್ಚು ಕಾಲ ಅನಾರೋಗ್ಯದಿಂದ ಬಳಲುತ್ತಿರುವುದು ಈ ವೇಳೆ ಗೊತ್ತಾಗಿದೆ. ಆರು ದಿನಗಳು ಇತರ ರೋಗ, ಮೂರು ದಿನಗಳವರೆಗೂ ಕೋವಿಡ್ -19 ರೋಗ ಸೇರಿದಂತೆ ನಾಲ್ಕು ವಾರಕ್ಕಿಂತ ಹೆಚ್ಚು ಅವಧಿವರೆಗೂ ಅನಾರೋಗ್ಯದಿಂದ ಬಳಲು ಅಪಾಯವಿದೆ. ಆದಾಗ್ಯೂ, ನಾಲ್ಕು ವಾರಗಳ ಅವಧಿಯಲ್ಲಿ ಇತರೆ ರೋಗದ ಲಕ್ಷಣಗಳನ್ನು ಹೊಂದಿರುವ ಮಕ್ಕಳಿಗಿಂತ ಕೊರೊನಾವೈರಸ್ ಸೋಂಕು ಹೊಂದಿರುವ ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುವುದು ಕಂಡು ಬಂದಿದೆ.

ಜ್ವರ ಮತ್ತು ಶೀತದ ಬಗ್ಗೆ ಜಾಗೃತಿ ವಹಿಸಲು ತಜ್ಞರ ಸಲಹೆ

ಜ್ವರ ಮತ್ತು ಶೀತದ ಬಗ್ಗೆ ಜಾಗೃತಿ ವಹಿಸಲು ತಜ್ಞರ ಸಲಹೆ

"ನಮ್ಮ ಅಧ್ಯಯನದ ಅಂಕಿ-ಅಂಶಗಳಲ್ಲಿ ಆಯಾಸ ಮತ್ತು ತಲೆನೋವನ್ನು ಹೆಚ್ಚಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಜ್ವರ ಮತ್ತು ಶೀತ ಕೂಡ ಮಕ್ಕಳಲ್ಲಿ ಕಾಣಿಸಿಕೊಳ್ಳುವ ದೀರ್ಘಾವಧಿಯ ರೋಗದ ಲಕ್ಷಣಗಳಾಗಿರುತ್ತವೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಶಿಶು ಮತ್ತು ಮಕ್ಕಳ ವೈದ್ಯ ಸೇವೆಯಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದು ಸೂಕ್ತ," ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ.ಮೈಕಲ್ ಅಬ್ಸೌಡ್ ತಿಳಿಸಿದ್ದಾರೆ.

ಮಕ್ಕಳಿಗೆ ಕೊವ್ಯಾಕ್ಸಿನ್ ನೀಡುವ ಬಗ್ಗೆ ಸಂಶೋಧನೆ

ಮಕ್ಕಳಿಗೆ ಕೊವ್ಯಾಕ್ಸಿನ್ ನೀಡುವ ಬಗ್ಗೆ ಸಂಶೋಧನೆ

ಭಾರತದ ಹೈದ್ರಾಬಾದ್ ನಲ್ಲಿ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಮಕ್ಕಳು ಮತ್ತು ಯುವಕರ ಮೇಲೆ ನಡೆಸುವುದಕ್ಕೆ ಭಾರತದ ಔಷಧೀಯ ನಿಯಂತ್ರಣ ಪ್ರಾಧಿಕಾರ ಕಳೆದ ಮೇ 12ರಂದು ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮೋದನೆ ನೀಡಿದೆ. ಜೂನ್ 7ರಿಂದ ನವದೆಹಲಿ ಏಮ್ಸ್ 2 ರಿಂದ 17 ವರ್ಷದ ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗವನ್ನು ಆರಂಭಿಸಿದೆ.

"ಭಾರತದಲ್ಲಿ ಮುಂಬರುವ ಸಪ್ಟೆಂಬರ್ ತಿಂಗಳಿನಿಂದ 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುವುದು," ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಕೊರೊನಾವೈರಸ್ ಟಾಸ್ಕ್ ಫೋರ್ಸ್ ತಂಡದಲ್ಲಿ ಪ್ರಮುಖರು ಎನಿಸಿರುವ ಖ್ಯಾತ ಶ್ವಾಸಕೋಶಶಾಸ್ತ್ರಜ್ಞ ಡಾ.ರಂದೀಪ್ ಗುಲೇರಿಯಾ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತ್ ಬಯೋಟೆಕ್ ಮಕ್ಕಳ ಮೇಲೆ ನಡೆಸುತ್ತಿರುವ ವೈದ್ಯಕೀಯ ಪ್ರಯೋಗದ ಅಧಿಕೃತ ದತ್ತಾಂಶ ಸಪ್ಟೆಂಬರ್ ತಿಂಗಳ ಹೊತ್ತಿಗೆ ಹೊರ ಬರಲಿದೆ. ಅದೇ ತಿಂಗಳು ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ವಿತರಣೆಗೆ ಅನುಮೋದನೆ ಪಡೆದುಕೊಂಡು ಲಸಿಕೆ ವಿತರಣೆ ಕಾರ್ಯ ಆರಂಭಿಸಲಾಗುವುದು," ಎಂದಿದ್ದಾರೆ.

ಕೊವ್ಯಾಕ್ಸಿನ್ ಪ್ರಯೋಗದ ನಂತರದಲ್ಲಿ ವರದಿ ಸಲ್ಲಿಕೆಗೆ ಸೂಚನೆ

ಕೊವ್ಯಾಕ್ಸಿನ್ ಪ್ರಯೋಗದ ನಂತರದಲ್ಲಿ ವರದಿ ಸಲ್ಲಿಕೆಗೆ ಸೂಚನೆ

ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ 2-17 ವರ್ಷದವರಿಗೆ ಸುರಕ್ಷಿತವೇ ಎಂಬ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ವೈದ್ಯಕೀಯ ಪ್ರಯೋಗಕ್ಕೆ ಷರತ್ತುಬದ್ಧ ಅನುಮೋದನೆ ನೀಡಲಾಗಿದೆ. 2ನೇ ಹಂತದ ವೈದ್ಯಕೀಯ ಪ್ರಯೋಗ ಹಾಗೂ ಅದರ ಫಲಿಶಾಂತಕ್ಕೆ ಸಬಂಧಿಸಿದ ದತ್ತಾಂಶವನ್ನು ಸಲ್ಲಿಸಿದ ನಂತರ ಡಿಎಸ್ಎಂಬಿ ಶಿಫಾರಸ್ಸಿನ ಮೇಲೆ 3ನೇ ಹಂತದ ಪ್ರಯೋಗಕ್ಕೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದೆ. ಕಳೆದ ಫೆಬ್ರವರಿ 24ರಂದು ವಿಷಯ ತಜ್ಞರ ಸಮಿತಿಯು ಈ ಬಗ್ಗೆ ಮೊದಲೇ ಚರ್ಚೆ ನಡೆಸಿದ್ದು, ಪರಿಷ್ಕೃತ ವೈದ್ಯಕೀಯ ಪ್ರಯೋಗದ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಸದ್ಯ ದೇಶದಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಐಸಿಎಂಆರ್ ಅನುಮೋದನೆ ನೀಡಿದೆ.

English summary
Symptoms of COVID-19 in children occurs mostly for a short duration, new study finds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X