ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿರುವ ಕಪ್ಪುಹಣದ ಮಾಹಿತಿ ಶೀಘ್ರದಲ್ಲೇ ಹೊರಕ್ಕೆ: ಗೋಯಲ್

|
Google Oneindia Kannada News

ನವದೆಹಲಿ, ಜೂನ್ 29: ಕಪ್ಪು ಹಣದ ಕುರಿತಂತೆ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಒಪ್ಪಂದ ನಡೆದಿದ್ದು, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಎಲ್ಲ ಮಾಹಿತಿ ಲಭ್ಯವಾಗಲಿವೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

2018ರ ಫೆಬ್ರುವರಿ 1ರಿಂದ ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗಿನ ಎಲ್ಲ ಮಾಹಿತಿಗಳು ನಮಗೆ ದೊರಕಲಿವೆ. ಹೀಗಿರುವಾಗ ಇದು ಕಪ್ಪುಹಣ ಅಥವಾ ಅಕ್ರಮ ವಹಿವಾಟು ಎಂದು ಕಲ್ಪನೆ ಮಾಡಿಕೊಳ್ಳುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಶೇ 50ರಷ್ಟು ಏರಿಕೆ

2017ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ ಹಣದ ಪ್ರಮಾಣ ಶೇ 50ರಷ್ಟು ಹೆಚ್ಚಳವಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

switzerland will provide all data on black money: Goyal

2017ರಲ್ಲಿ ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿದ ಹಣದ ಪ್ರಮಾಣ ಶೇ 50ರಷ್ಟು ಹೆಚ್ಚಾಗಿದ್ದು, 1.01 ಬಿಲಿಯನ್ ಸ್ವಿಸ್ ಫ್ರಾಂಕ್ಸ್ (7,000 ಕೋಟಿ) ಹಣ ಜಮೆ ಮಾಡಲಾಗಿದೆ ಎಂದು ಅಲ್ಲಿನ ಬ್ಯಾಂಕುಗಳ ಪ್ರಾಧಿಕಾರ ತಿಳಿಸಿತ್ತು.

ಮಾಜಿ ಸಚಿವ ಪಿ. ಚಿದಂಬರಂ ಅವರು ಪ್ರಾರಂಭಿಸಿದ ಲಿಬರಲೈಸ್ಡ್ ರೆಮಿಟ್ಟೆನ್ಸ್ ಸ್ಕೀಮ್ ಅಡಿಯಲ್ಲಿ ಶೇ 40ರಷ್ಟು ಹಣ ಜಮೆ ಮಾಡಲಾಗಿದೆ ಎಂಬ ವರದಿಗಳನ್ನು ಗೋಯಲ್ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

ಒಮ್ಮೆ ಮಾಹಿತಿ ಹೊರಬಂದ ಬಳಿಕ ತಪ್ಪಿತಸ್ಥರು ಎಂದು ಪತ್ತೆಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಉಂಟಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ಅಂತರರಾಷ್ಟ್ರೀಯ ಸನ್ನಿವೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

English summary
Union Finanace Minister Piyush Goyal said that an agreement between India and Switzerland will provide them with all data on black money by the end of the next accounting year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X