ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಟಿಗೆ 'Miss U Lot' ಮೆಸೇಜ್ ಕಳುಹಿಸಿದ ಸ್ವಿಗ್ಗಿ ಬಾಯ್ ಕಥೆ ಏನಾಯ್ತು?

|
Google Oneindia Kannada News

ನವದೆಹಲಿ, ಜೂನ್ 19: ಭಾರತದಲ್ಲಿ ಸೋಷಿಯಲ್ ಮೀಡಿಯಾ ಬಳಸುವುದಕ್ಕೂ ಪೂರ್ವದಲ್ಲಿ ಜನರು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದರಲ್ಲೂ ಯುವತಿಯರು, ಮಹಿಳೆಯರು ತಮ್ಮ ಮೊಬೈಲ್ ಸಂಖ್ಯೆಯನ್ನು ಶೇರ್ ಮಾಡುವಾಗ ಸಖತ್ ಅಲರ್ಟ್ ಆಗಿರಬೇಕು.

ಸುಖಾಸುಮ್ಮನೆ ಕಂಡ ಕಂಡಲ್ಲಿ ಮೊಬೈಲ್ ನಂಬರ್ ಶೇರ್ ಮಾಡುವುದರದಿಂದ ಏನೆಲ್ಲಾ ಯಡವಟ್ಟುಗಳು ಆಗುತ್ತವೆ ಎನ್ನುವುದಕ್ಕೆ ಕಂಡಿರುತ್ತೇವೆ, ಕೇಳಿರುತ್ತೇವೆ. ಈಗ ಅಂಥದ್ದೇ ಘಟನೆಯನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

Google Map: ಕೆಲಸ ಮಾಡದ ಗೂಗಲ್ ನಕ್ಷೆ; ದಿಕ್ಕು ತೋಚದೇ ಜನ ಕಂಗಾಲು! Google Map: ಕೆಲಸ ಮಾಡದ ಗೂಗಲ್ ನಕ್ಷೆ; ದಿಕ್ಕು ತೋಚದೇ ಜನ ಕಂಗಾಲು!

ಸ್ವಿಗ್ಗಿಯಲ್ಲಿ ದಿನಸಿ ಆರ್ಡರ್ ಮಾಡಿದ ಮಹಿಳೆಗೆ ಮನೆ ಬಾಗಿಲಿಗೆ ದಿನಸಿ ಸಿಕ್ಕಿತು. ಆದರೆ ಅಲ್ಲಿಂದ ಶುರುವಾಗಿದ್ದೇ ಸ್ವಿಗ್ಗಿ ಡೆಲಿವರಿ ಬಾಯ್ ಕಾಟ. ಮಹಿಳೆಯ ಮೊಬೈಲ್ ಸಂಖ್ಯೆಗೆ ಮೇಲಿಂದ ಮೇಲೆ ಸಂದೇಶಗಳು ಬರೋದಕ್ಕೆ ಶುರುವಾಯಿತು. ಅಲ್ಲಿಂದ ಮುಂದೆ ಏನಾಯಿತು? ಎನ್ನುವುದರ ಕುರಿತು ಕುತೂಹಲಕಾರಿ ಕಥೆಗಾಗಿ ಮುಂದೆ ಓದಿ.

ಆಂಟಿ ನೀ ಸೌಂದರ್ಯವತಿ ಎಂದು ಸಂದೇಶ

ಆಂಟಿ ನೀ ಸೌಂದರ್ಯವತಿ ಎಂದು ಸಂದೇಶ

ದಿನಸಿ ಮನೆಗೆ ತಲುಪಿಸಲಿ ಎಂದು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದರೆ, ಅದಕ್ಕಾಗಿ ನೀಡಿದ ನಂಬರ್ ಅನ್ನೇ ಮಿಸ್ ಯೂಸ್ ಮಾಡಿಕೊಂಡ ಕಂಪನಿಯ ಕಾರ್ಯನಿರ್ವಾಹಕನೊಬ್ಬ ಮಹಿಳೆಯ ಮೊಬೈಲ್ ಸಂಖ್ಯೆಗೆ ಮೆಸೇಜ್ ಕಳುಹಿಸುವುದಕ್ಕೆ ಶುರು ಮಾಡಿದ್ದಾನೆ. "ನೈಸ್ ಯುವರ್ ಬ್ಯೂಟಿ," (ನಿಮ್ಮ ಸೌಂದರ್ಯ ತುಂಬಾ ಚೆನ್ನಾಗಿದೆ) ಎನ್ನುವುದರ ಜೊತೆಗೆ ಪೋಲಿ ಸಂದೇಶಗಳು ಮಹಿಳೆಯ ಮೊಬೈಲ್ ಸಂಖ್ಯೆಗೆ ಬರುವುದಕ್ಕೆ ಪ್ರಾರಂಭವಾಯಿತು. ಆ ಭೂಪನ ಸಂದೇಶಗಳು ಸೌಂದರ್ಯ ವರ್ಣಿಸುವುದಕ್ಕೆ ಅಷ್ಟೇ ಸೀಮಿತವಾಗಿರಲಿಲ್ಲ.

ಮಹಿಳೆಗೆ 'Miss You Lot' ಸಂದೇಶ

ಮಹಿಳೆಗೆ 'Miss You Lot' ಸಂದೇಶ

ನಿಮ್ಮ ವರ್ತನೆ ತುಂಬಾ ಚೆನ್ನಾಗಿದೆ. ನಾನು ನಿಮ್ಮನ್ನು ಬಿಟ್ಟು ಇರಲಾರೆ, I Miss You Lot; ಹೀಗೆ ಸಾಲು ಸಾಲು ಪೋಲಿ ಸಂದೇಶಗಳನ್ನು ಸ್ವಿಗ್ಗಿಯ ಕಾರ್ಯ ನಿರ್ವಾಹಕನು ಮಹಿಳೆಯರ ಮೊಬೈಲ್ ಸಂಖ್ಯೆಗೆ ಕಳುಹಿಸಿದ್ದಾನೆ. ಇದರಿಂದ ರೋಸಿ ಹೋಗಿರುವ ಮಹಿಳೆಯು ಸ್ವಿಗ್ವಿ ಸಹಾಯವಾಣಿಗೆ ದೂರು ನೀಡಿದರು. ಪ್ರಾರಂಭದಲ್ಲಿ ಮಹಿಳೆಯ ದೂರಿನ ಬಗ್ಗೆ ತಲೆ ಕೆಡಿಸಿಕೊಳ್ಳದ ಸ್ವಿಗ್ಗಿ ಸಂಸ್ಥೆಯು, ಒಂದೇ ಒಂದು ಟ್ವೀಟ್ ನಂತರದಲ್ಲಿ ಫುಲ್ ಅಲರ್ಟ್ ಆಯಿತು.

ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ

ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ

"ಕಳೆದ ಮಂಗಳವಾರ ರಾತ್ರಿ ನಾನು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ದಿನಸಿ ವಿತರಣೆಯನ್ನು ಪಡೆದುಕೊಂಡಿದ್ದೇನೆ. ತದನಂತರದಲ್ಲಿ ಸ್ವಿಗ್ಗಿ ಕಾರ್ಯನಿರ್ವಾಹಕನು ನನ್ನ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸುವುದಕ್ಕೆ ಶುರು ಮಾಡಿದ್ದಾನೆ. ಅದು ಇದೇ ಮೊದಲಲ್ಲ, ಕೊನೆಯೂ ಅಲ್ಲ. ಮೇಲಿಂದ ಮೇಲೆ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಇಂಥ ಸಮಸ್ಯೆಗಳನ್ನು ಹಲವು ಮಹಿಳೆಯರು ಎದುರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಪ್ರಾಪ್ತಿ ಎಂಬ ಮಹಿಳೆಯು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮಹಿಳೆಗೆ ಮೆಸೇಜ್ ಮಾಡಿದ ಎಕ್ಸಿಕ್ಯೂಟಿವ್ ಅನ್ನು ತೆಗೆದು ಹಾಕಿದ ಸ್ವಿಗ್ಗಿ

ಮಹಿಳೆಗೆ ಮೆಸೇಜ್ ಮಾಡಿದ ಎಕ್ಸಿಕ್ಯೂಟಿವ್ ಅನ್ನು ತೆಗೆದು ಹಾಕಿದ ಸ್ವಿಗ್ಗಿ

ಈ ದುರದೃಷ್ಟಕರ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಅಂದಿನಿಂದ ಗ್ರಾಹಕರೊಂದಿಗೆ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ. "ಯಾವುದೇ ರೀತಿಯ ಅನುಚಿತ ವರ್ತನೆಗೆ ಸ್ವಿಗ್ಗಿ ಅವಕಾಶ ನೀಡುವುದಿಲ್ಲ. ಮಹಿಳೆಗೆ ಮೆಸೇಜ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಯ ನಂತರ ಆ ಎಕ್ಸಿಕ್ಯೂಟಿವ್ ಅನ್ನು ಸ್ವಿಗ್ಗಿಯಿಂದ ತೆಗೆದು ಹಾಕಲಾಗಿದೆ," ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

English summary
Swiggy delivery executive is Removed after sent ‘miss you lot’ messages to woman. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X