• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ವಿವಿಧ ರಾಜ್ಯಗಳಲ್ಲಿ ಮರುಭೂಮಿ ಮಿಡತೆ ದಾಳಿ: ಬೆಳೆಗಳ ನಾಶ

|

ನವದೆಹಲಿ, ಮೇ 26: ದೇಶದ ವಿವಿಧ ರಾಜ್ಯಗಳಲ್ಲಿ ಆಹಾರ ಬೆಳೆಗಳ ಮೇಲೆ ಮಿಡತೆ ದಾಳಿ ನಡೆಸಿದೆ.

ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಮಿಡತೆ ಹಾವಳಿ ಹೆಚ್ಚಾಗಿದೆ. ಕೋಟ್ಯಂತರ ಸಂಖ್ಯೆಯಲ್ಲಿ ಬಂದು , ಹಸಿರು ಹೊಲಗಳಲ್ಲಿನ ಬೆಳೆಯನ್ನು ತಿಂದುಹೋಗುವ ಮರುಭೂಮಿ ಮಿಡತೆಗಳ ಗುಂಪು ಹಲವೆಡೆ ಲಗ್ಗೆ ಇಟ್ಟಿದೆ.

ಮಧ್ಯ ಪ್ರದೇಶದ 15 ಜಿಲ್ಲೆಗಳ ವಿವಿಧ ಗ್ರಾಮಗಳ ಮೇಲೆ ದಾಳಿ ಮಾಡಿದ್ದ ಲಕ್ಷಾಂತರ ಮಿಡತೆಗಳಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಳೆದ ಮೂರು ದಿನಗಳಿಂದ ಈ ಜಿಲ್ಲೆಗಳ ಗ್ರಾಮಗಳ ಮೇಲೆ ಮರುಭೂಮಿ ಮಿಡತೆ ಜಾತಿಯ ಲಕ್ಷಾಂತರ ಗಿಡಗಳು ಏಕಕಾಲದಲ್ಲಿ ದಾಳಿ ಮಾಡಿದ್ದು, ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ.

ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ,ಇರಾನ್ ಸಹಕಾರ ಕೇಳಿದ ಭಾರತ

ಉಜ್ಜೈನಿ, ಪನ್‍ಬಿಹಾರ್, ಅಗರ್, ಮಾಲ್ವಾ, ನಿಮುಚ್, ಹನುಮಾಂಟಿಯಾ, ಗುರ್ಜರ್ ಖೇಡಿಯ, ನಯಾಗಾಂವ್ ಮೊದಲಾದ ಜಿಲ್ಲೆಗಳ ಮರ-ಗಿಡಗಳು ಮತ್ತು ಬೆಳೆಗಳ ಮೇಲೆ ದಾಳಿ ಮಾಡಿರುವ ಕೀಟಗಳು ಅವುಗಳನ್ನು ಭಕ್ಷಿಸಿ ಬರಿದು ಮಾಡಿವೆ. ಪ್ರತಿ ವರ್ಷ ಈ ಜಾತಿಯ ಮಿಡತೆಗಳು ಮಧ್ಯ ಪ್ರದೇಶದ ಮೇಲೆ ದಾಳಿ ಮಾಡುತ್ತಿದ್ದು, ಈ ಬಾರಿಯೂ ಅದು ಪುನರಾವರ್ತನೆಯಾಗಿದೆ.

ಮರುಭೂಮಿ ಮಿಡತೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ನಷ್ಟದ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಂತ್ರಣಕ್ಕೆ ಕೈಜೋಡಿಸದ ಪಾಕಿಸ್ತಾನ

ನಿಯಂತ್ರಣಕ್ಕೆ ಕೈಜೋಡಿಸದ ಪಾಕಿಸ್ತಾನ

ಪೂರ್ವ ಆಫ್ರಿಕಾ, ಇರಾನ್ ಮತ್ತು ಪಾಕಿಸ್ತಾನದಲ್ಲಿ ಮರುಭೂಮಿ ಮಿಡತೆಗಳ ದೊಡ್ಡ ಗುಂಪುಗಳು ರೂಪುಗೊಳ್ಳುತ್ತವೆ. ಮೇ ಅಂತ್ಯದ ವೇಳೆಗೆ ಇವು ಭಾರತವನ್ನು ಪ್ರವೇಶಿಸಬಹುದು. ಇವುಗಳನ್ನು ನಿಯಂತ್ರಿಸಲು ಸಂಬಂಧಿತ ಎಲ್ಲಾ ದೇಶಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ಹೇಳಿತ್ತು.

ಭಾರತ ಸರ್ಕಾರ ಇರಾನ್ ಹಾಗೂ ಪಾಕಿಸ್ತಾನಕ್ಕೆ ಪತ್ರ ಬರೆದಿತ್ತು. ಆದರೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹೇಗಿದೆ?

ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹೇಗಿದೆ?

ರಾಜ್ಯದಲ್ಲಿ 27 ವರ್ಷಗಳಲ್ಲಿ ಇದೇ ಅತ್ಯಂತ ದೊಡ್ಡ ಮಿಡತೆ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಝಾನ್ಸಿ ಜಿಲ್ಲೆಯನ್ನು ಮಾತ್ರ ಮಿಡತೆಗಳು ಪ್ರವೇಶಿಸಿವೆ. ಹತ್ತಿ ಬೆಳೆ ನಾಶವಾಗಿದೆ. ಗೋದಿ ಬೆಳೆಯು ನಾಶವಾಗುವ ಅಪಾಯದಲ್ಲಿದೆ.

ರಾಜ್ಯಸ್ಥಾನದ ಕೋಟಾ ಕಡೆಯಿಂದ ಮಿಡತೆಗಳ ಇನ್ನಷ್ಟು ಗುಂಪುಗಳು ಝಾನ್ಸಿಯತ್ತ ಬರುತ್ತವೆ. 3.5 ಕಿ.ಮೀನಷ್ಟು ಉದ್ದವಿರುವ ದೊಡ್ಡ ಗುಂಪೊಂದು ರಾಜ್ಯ ಪ್ರವೇಶಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಮಿಡತೆಯ ರಾಕ್ಷಸ ರೂಪ

ಮಿಡತೆಯ ರಾಕ್ಷಸ ರೂಪ

ಮಧ್ಯ ಮತ್ತು ಪೂರ್ವ ಆಫ್ರಿಕಾ ಮತ್ತು ಏಷ್ಯಾದ ಮರಳುಗಾಡಿನಲ್ಲಿ ಈ ಮಿಡತೆಗಳು ಕಂಡುಬರುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಇವು ಇಷ್ಟು ಅಪಾಯಕಾರಿ ಅಲ್ಲ. ಸಣ್ಣ ಸಣ್ಣ ಗುಂಪುಗಳಲ್ಲಿ ಇವು ಇರುತ್ತದೆ. ಆದರೆ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾದರೆ , ಇವು ಉಗ್ರ ಸ್ವರೂಪ ಪಡೆಯುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ತಿನ್ನುವುದಕ್ಕಿಂತ ಹೆಚ್ಚಿನ ಆಹಾರವನ್ನು ಸೇವನೆ ಮಾಡುತ್ತವೆ.

ಮಧ್ಯಪ್ರದೇಶದಲ್ಲೂ ಮಿಡತೆ ಹಾವಳಿ

ಮಧ್ಯಪ್ರದೇಶದಲ್ಲೂ ಮಿಡತೆ ಹಾವಳಿ

ಮಿಡತೆಗಳು ರಾಜಸ್ಥಾನದ ಮೂಲಕ ಮಧ್ಯಪ್ರದೇಶ ನೀಮುಚ್ ಜಿಲ್ಲೆಯನ್ನು ಪ್ರವೇಶಿಸಿವೆ. ಮಿಡತೆಗಳು ಮಾಲ್ವಾ ಜಿಲ್ಲೆ ದಾಟಿ , ಭೋಪಾಲ್‌ನತ್ತ ಲಗ್ಗೆ ಇಟ್ಟಿವೆ. ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ. ಹತ್ತಿ ಬೆಳೆ ಮತ್ತು ತರಕಾರಿ ನಾಶವಾಗಿವೆ. ಕೀಟ ನಾಶಕ ಸಿಂಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

English summary
Swarms of the desert locust, which invaded India via Pakistan in April, have made their way to at least five states, leaving a trail of destruction in their wake.Affected states are Rajasthan, MP, Gujarat, UP and Maharashtra are under locust attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more