ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವರಾಜ್‌ ಇಂಡಿಯಾ - ಹೊಸ ರಾಜಕೀಯ ಪಕ್ಷ ಉದಯ

By Mahesh
|
Google Oneindia Kannada News

ನವದೆಹಲಿ, ಅಕ್ಟೋಬರ್ 03: ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರು ಸ್ವರಾಜ್‌ ಇಂಡಿಯಾ ಅಭಿಯಾನ ಈಗ ಹೊಸ ರಾಜಕೀಯ ಪಕ್ಷವಾಗಿ ರೂಪುಗೊಂಡಿದೆ. ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನದ ಅಂಗವಾಗಿ 'ಸ್ವರಾಜ್‌ ಇಂಡಿಯಾ' ಪಕ್ಷವನ್ನು ಘೋಷಿಸಿದ್ದಾರೆ.

ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರಿಬ್ಬರನ್ನು ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಉಚ್ಚಾಟನೆ ಮಾಡಿದ ಬಳಿಕ ಇಬ್ಬರು ಸ್ವರಾಜ್ ಇಂಡಿಯಾ ಅಭಿಯಾನ ಆರಂಭಿಸಿದ್ದರು. ಮುಂದಿನ ವರ್ಷ ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಯೋಗೇಂದ್ರ ಯಾದವ್‌ ಅವರು ತಿಳಿಸಿದರು.

swaraj-abhiyan-launches-its-political-wing-swaraj-india

ಯೋಗೇಂದ್ರ ಯಾದವ್ ಅವರು ಪಕ್ಷದ ಅಧ್ಯಕ್ಷರಾಗಿದ್ದರೆ, ಅಜಿತ್ ಝಾ ಅವರು ಪ್ರಧಾನ ಕಾರ್ಯದರ್ಶಿ ಹಾಗೂ ಫಹೀಮ್ ಖಾನ್ ಖಜಾಂಜಿಯಾಗಲಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಡೆ, ನುಡಿಗೆ ಬೇಸತ್ತು ಕಿತ್ತಾಟ ಮಾಡಿಕೊಂಡ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರನ್ನು ಎಎಪಿಯಿಂದ ಉಚ್ಚಾಟಿಸಲಾಗಿದೆ. ಜೊತೆಗೆ ಅಜಿತ್ ಝಾ ಹಾಗೂ ಆನಂದ್ ಕುಮಾರ್ ಅವರು ಕೂಡಾ ಪಕ್ಷವನ್ನು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತೊರೆದಿದ್ದರು.(ಐಎಎನ್ಎಸ್)

English summary
Swaraj Abhiyan, led by former AAP leader Yogendra Yadav, on Sunday launched its political wing 'Swaraj India' on the occasion of Mahatma Gandhi's birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X