ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ವಿರುದ್ಧದ ಹೋರಾಟಕ್ಕೆ ಸ್ವಚ್ಛ ಭಾರತ ಅಭಿಯಾನ ನೆರವು: ಮೋದಿ

|
Google Oneindia Kannada News

ನವದೆಹಲಿ, ಜನವರಿ 22: ಕೊರೊನಾ ವೈರಸ್ ವಿರುದ್ಧದ ಭಾರತದ ಹೋರಾಟವು ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿನ ಲಸಿಕೆ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಸ್ಯೆಯು ಉಲ್ಬಣವಾಗುವವರೆಗೂ ಕಾಯದೆ, ಭಾರತವು ತಕ್ಷಣದ ಹಾಗೂ ಪೂರ್ವಭಾವಿ ನಿರ್ಧಾರಗಳನ್ನು ತೆಗೆದುಕೊಂಡಿತ್ತು ಎಂದರು.

Mood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನMood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನ

ಸ್ವಚ್ಛಭಾರತ ಅಭಿಯಾನವನ್ನು ಕೊಂಡಾಡಿದ ಮೋದಿ, ವೈರಸ್ ವಿರುದ್ಧದ ಹೋರಾಟಕ್ಕೆ ಸ್ವಚ್ಚತೆ ಸಹಾಯ ಮಾಡಿತು ಎಂದರು. 'ಮೇಡ್ ಇಂಡಿಯಾ ಪರಿಹಾರಗಳೊಂದಿಗೆ ನಾವು ಲಸಿಕೆ ಹರಡುವುದನ್ನು ನಿಯಂತ್ರಿಸಿದೆವು ಮತ್ತು ನಮ್ಮ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಿದೆವು' ಎಂದು ತಿಳಿಸಿದರು.

Swachh Bharat Mission Ensured Cleanliness, Helped In Fighting Virus: Narendra Modi

'ಮಾಸ್ಕ್‌ಗಳು ಮತ್ತು ಸ್ಯಾನಿಟೈಸರ್‌ನ ಸಾಮೂಹಿಕ ಉತ್ಪಾದನೆಯಿಂದ ಹಿಡಿದು ಕೊರೊನಾ ವೈರಸ್ ಲಸಿಕೆಯ ಅಭಿವೃದ್ಧಿಯವರೆಗೆ ದೇಶ ಬೆಳೆದಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಜನತೆ ಹಗಲು ರಾತ್ರಿ ಹೋರಾಡಿದ್ದಾರೆ' ಎಂದು ಮೋದಿ ಹೇಳಿದರು.

Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್‌ಡಿಎMood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್‌ಡಿಎ

ಆತ್ಮನಿರ್ಭರ ಭಾರತ ಯೋಜನೆಯು ದೇಶದ ದೈನಂದಿನ ಜೀವನದ ಭಾಗವಾಗಿದೆ. ಅದರ ಹುರುಪು ಕ್ರಿಕೆಟ್‌ನಿಂದ ಕೋವಿಡ್ ನಿರ್ವಹಣೆಯವರೆಗೂ ಹರಡಿದೆ. ಇಂದಿನ ಭಾರತ ಸಮಸ್ಯೆಗಳನ್ನು ಪರಿಹರಿಸಲು ಪ್ರಯೋಗಗಳ ಮೇಲೆ ಕೆಲಸ ಮಾಡಲು ಹಿಂಜರಿಯುತ್ತಿಲ್ಲ. ಜಗತ್ತಿನ ಅತಿ ದೊಡ್ಡ ಶೌಚಾಲಯ ಕಟ್ಟಡ, ಮನೆ ಒದಗಿಸುವುದು, ಶುದ್ಧ ಕುಡಿಯುವ ನೀರು ಮತ್ತು ಲಸಿಕೆ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಮೋದಿ ತಿಳಿಸಿದರು.

English summary
Prime Minister Narendra Modi said, the Swachh Bharat mission has ensured cleanliness and helped in fighting against Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X