ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛ ಭಾರತದ ರಾಯಭಾರಿ ಈ ಮಗು: ಮುದ್ದಾದ ವಿಡಿಯೋ ನೋಡಿದ್ದೀರಾ?

|
Google Oneindia Kannada News

Recommended Video

ಮೋದಿ ಜನಪ್ರಿಯ ಯೋಜನೆ ಸ್ವಚ್ಛ ಭಾರತ | ಮಗುವಿನ ಈ ವೈರಲ್ ವಿಡಿಯೋ ನೋಡಿ

ನವದೆಹಲಿ, ಜೂನ್ 3: ಮೊದಲ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜಾರಿಗೆ ತಂದ ಅತಿ ಮಹತ್ವದ ಯೋಜನೆಗಳಲ್ಲಿ ಸ್ವಚ್ಛ ಭಾರತ ಅಭಿಯಾನವೂ ಒಂದು. ಮನೆ ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಮಹಾತ್ಮಾ ಗಾಂಧಿ ಅವರ ಕನಸಿನ ಹೆಸರಿನಲ್ಲಿ ಬಿಜೆಪಿ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ದೇಶದೆಲ್ಲೆಡೆ ಸಂಚಲನ ಮೂಡಿಸಿತ್ತು.

ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಅನೇಕ ಮಹತ್ವದ ಕಾರ್ಯಕ್ರಮಗಳು ಜಾರಿಯಾಗಿವೆ. ಸಂಘಟನೆಗಳು, ಸಂಘ ಸಂಸ್ಥೆಗಳು, ವ್ಯಕ್ತಿಗಳು ವೈಯಕ್ತಿಕವಾಗಿ ಸ್ವಯಂಪ್ರೇರಣೆಯಿಂದ ಅನೇಕ ಕಡೆ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಹಾಗೆಯೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಿದ್ದಾರೆ.

ಆದರೆ, ಜನರಲ್ಲಿ ಸ್ವಚ್ಛತೆ ಬಗ್ಗೆ ಅಲ್ಪಮಟ್ಟಿನ ತಿಳಿವಳಿಕೆ ಹೆಚ್ಚಾಗಿದೆ ಎಂದರೂ ಸಂಪೂರ್ಣವಾಗಿ ಜಾಗೃತಿ ಮೂಡುವುದು ಇನ್ನೂ ಸಾಧ್ಯವಾಗಿಲ್ಲ. ಸ್ವಚ್ಛ ಮಾಡುವವರು ಹರಸಾಹಸ ಪಡುತ್ತಿದ್ದರೆ, ಕೊಳಕು ಮಾಡುವವರು ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಯುವಜನರು ತಂಡೋಪತಂಡವಾಗಿ ನದಿ, ರಸ್ತೆ, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದರೂ ಜನರ ಮನಸ್ಥಿತಿ ಬದಲಾಗಿಲ್ಲ.

ಗಂಗೆಗೆ ಪ್ರಾಣತ್ಯಾಗ ಮಾಡಿದ ಡಾ.ಜಿಡಿ ಅಗರ್ವಾಲ್ ಯಾರು?ಗಂಗೆಗೆ ಪ್ರಾಣತ್ಯಾಗ ಮಾಡಿದ ಡಾ.ಜಿಡಿ ಅಗರ್ವಾಲ್ ಯಾರು?

ಹಾಗೆಂದು, ಆಶಾವಾದ ಕಡಿಮೆ ಆಗುವುದಿಲ್ಲ. ಅದಕ್ಕೊಂದು ಉದಾಹರಣೆ ಇಲ್ಲಿದೆ. ಪುಟಾಣಿಯೊಬ್ಬ ಬಳಸಿ ಬಿಸಾಡಿರುವ ಕಾಗದದ ಲೋಟಗಳನ್ನು ಕಸದ ಡಬ್ಬಿಗೆ ಹಾಕುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೂರಾರು ಮಂದಿ ಹಂಚಿಕೊಂಡು ಮಗುವಿನ ಬುದ್ಧಿಮತ್ತೆಯನ್ನು ಕೊಂಡಾಡುತ್ತಿದ್ದಾರೆ.

ಸ್ವಚ್ಛ ಭಾರತದ ರಾಯಭಾರಿ

ಸ್ವಚ್ಛ ಭಾರತದ ರಾಯಭಾರಿ

ಪುಟ್ಟ ಮಗು ಒಂದೊಂದೇ ಲೋಟವನ್ನು ಎತ್ತಿ ತನಗಿಂತಲೂ ಎತ್ತರವಿರುವ ಕಸದ ಡಬ್ಬಿಗೆ ಕಷ್ಟಪಟ್ಟು ಹಾಕುತ್ತದೆ. ಆ ಮಗು ಆಟವಾಡುವುದಕ್ಕೆ ಹಾಗೆ ಮಾಡುತ್ತಿರುವುದಲ್ಲ ಎನ್ನುವುದು ವಿಡಿಯೋ ನೋಡಿದಾಗ ಸ್ಪಷ್ಟವಾಗುತ್ತದೆ. ಅದರ ಅಮ್ಮ ಸಾಕು ಬಾ ಎಂದು ಪಕ್ಕಕ್ಕೆ ಎಳೆದುಕೊಂಡರೂ ಅವರ ತೆಕ್ಕೆಯಿಂದ ಬಿಡಿಸಿಕೊಂಡು ಹೋಗಿ ಆ ಮಗು ಮತ್ತೆ ಕಸವನ್ನು ಹೆಕ್ಕಿ ಡಬ್ಬಿಗೆ ಹಾಕುವ ಕಾರ್ಯದಲ್ಲಿ ಮಗ್ನವಾಗುತ್ತದೆ. ಈ ಚೆಂದದ ವಿಡಿಯೋಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಶುದ್ಧ ಗಂಗೆ: ಉಪವಾಸ ಸತ್ಯಾಗ್ರಹ ನಡೆಸಿ ಸತ್ತರೂ, ಸ್ವಾಮಿಯ ಕನಸು ಈಡೇರಲಿಲ್ಲಶುದ್ಧ ಗಂಗೆ: ಉಪವಾಸ ಸತ್ಯಾಗ್ರಹ ನಡೆಸಿ ಸತ್ತರೂ, ಸ್ವಾಮಿಯ ಕನಸು ಈಡೇರಲಿಲ್ಲ

ಸ್ವಚ್ಛ ಭಾರತದ ಸ್ವಯಂಸೇವಕ

ಈ ವಿಡಿಯೋವನ್ನು ಹಂಚಿಕೊಂಡಿರುವ ಕ್ರೀಡಾಪಟು, ಬಿಜೆಪಿ ಸದಸ್ಯ ಮೇಜರ್ ಸುರೇಂದ್ರ ಪೂನಿಯಾ, ಮಗುವಿನ ಕಾರ್ಯವನ್ನು ಹೊಗಳಿದ್ದಾರೆ. 'ಹೃದಯಸ್ಪರ್ಶಿ! ನಿಮ್ಮ ಮಕ್ಕಳೂ ಸೇರಿದಂತೆ ಒಂದು ಯೋಜನೆ ಇಡೀ ದೇಶದ ಮೇಲೆ ಪ್ರಭಾವ ಬೀರಬಹುದು! ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಸ್ವಚ್ಛ ಭಾರತ ಅಭಿಯಾನದ ಪುಟಾಣಿ ಸ್ವಯಂಸೇವಕನನ್ನು ನೋಡಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Array

ಇದು ನಮ್ಮ ಭರವಸೆ

ಈ ವಿಡಿಯೋ ನಮಗೆ ಭರವಸೆಯನ್ನು ನೀಡುತ್ತದೆ. ಉತ್ತಮ ಭವಿಷ್ಯಕ್ಕಾಗಿ ಭರವಸೆ ಎಂದು ಈಶ್ವರ್ ಶೆಟ್ಟಿ ಎಂಬುವವರು ವಿಡಿಯೋವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

'ಸ್ವಚ್ಛ ಭಾರತ'ಕ್ಕೆ 2 ಲಕ್ಷ ಮಕ್ಕಳ ಪ್ರಾಣ ಉಳಿಸಿದ ಪುಣ್ಯ; ಇದು 'ವಿಶ್ವ' ಪ್ರಶಂಸೆ 'ಸ್ವಚ್ಛ ಭಾರತ'ಕ್ಕೆ 2 ಲಕ್ಷ ಮಕ್ಕಳ ಪ್ರಾಣ ಉಳಿಸಿದ ಪುಣ್ಯ; ಇದು 'ವಿಶ್ವ' ಪ್ರಶಂಸೆ

ಸ್ವಚ್ಛ ಭಾರತದ ಉತ್ಸಾಹ

ಎಷ್ಟು ಮುದ್ದಾಗಿದೆ. ಭಾರತದ ಸಕಾರಾತ್ಮಕ ಹೋರಾಟಗಾರ. ಆತನಿಗೆ ಇನ್ನೂ ಮಾತನಾಡಲು ಬರುವುದಿಲ್ಲ. ಆದರೆ, ಸ್ವಚ್ಛ ಭಾರತವನ್ನು ಸೃಷ್ಟಿಸುವುದರಲ್ಲಿ ಆತನ ಉತ್ಸಾಹವನ್ನು ನೋಡಿ ಎಂದು ಇಂಡಿಯಾ ಪಾಸಿಟಿವ್ ಮೂವ್‌ಮೆಂಟ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ರಾಯಭಾರಿ ಮಾಡಿ

ಈ ಮಗುವನ್ನು ಸ್ವಚ್ಛ ಭಾರತ ಚಳವಳಿಯ ರಾಯಭಾರಿಯನ್ನಾಗಿ ಮಾಡಿ ಎಂದು ಪ್ರಾಣೇಶ್ ರಂಗನ್ ಎಂಬುವವರು ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

English summary
Video of a small kid cleaning in a function putting used cups in to dustbin went viral. Many people shared the video in social media praised that kid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X