ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ

By Mahesh
|
Google Oneindia Kannada News

ನವದೆಹಲಿ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡ ಸ್ವಚ್ಛ ಭಾರತ, ಸ್ವಸ್ಥ ಭಾರತ ಕನಸನ್ನು ನನಸಾಗಿಸೋಣ. ಸ್ವಚ್ಛ ಭಾರತ ಅಭಿಯಾನ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ದೇಶದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಅಭಿಯಾನಕ್ಕೆ ಮುನ್ನಡಿ ಹಾಡಿದ್ದಾರೆ.

2019ರಲ್ಲಿ ಗಾಂಧೀಜಿ ಅವರ 150ನೇ ಜಯಂತಿ ಆಚರಣೆಯನ್ನು ಭಾರತದ ಕಸಮುಕ್ತಗೊಳಿಸುವುದರ ಮೂಲಕ ಆಚರಿಸೋಣ ಎಂದು ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ನೀಡಿದ ಭಾಷಣದಲ್ಲಿ ಮೋದಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಯೋಜನಾ ವೆಚ್ಚ ಎಷ್ಟು?]

ಯಾರು ಪಾಲ್ಗೊಳ್ಳಬಹುದು:
ಅ.2ರಂದು ಸರಿಸುಮಾರು 30.98 ಲಕ್ಷ ನೌಕರರು ಸ್ವಚ್ಛತೆಯ ಶಪಥ ಕೈಗೊಂಡಿದ್ದಾರೆ. ಈ ಅಭಿಯಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಜತೆಗೆ ಎನ್‌ಜಿಒಗಳು, ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳು, ಸ್ವಯಂ ಸೇವಾ ಸಂಸ್ಥೆಗಳು, ಯುವ ಸಂಘ-ಸಂಸ್ಥೆಗಳು, ಮಾರುಕಟ್ಟೆ ಒಕ್ಕೂಟಗಳು, ಕೈಗಾರಿಕೆ ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳು ಪಾಲ್ಗೊಳ್ಳುವುದು ಅಗತ್ಯವಾಗಿದೆ. [ಗಾಂಧಿ ಹೇಳಿ ಕೊಟ್ಟ ಮಂತ್ರ ಬೋಧಿಸಿದ ಮೋದಿ]

ಗುರುವಾರ ಮುಂಜಾನೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿ ಸ್ಥಳ ರಾಜ್ ಘಾಟ್ ಗೆ ಭೇಟಿ ನೀಡಿ ಪುಷ್ಪಗಳನ್ನು ಅರ್ಪಿಸಿ ನಮನ ಸಲ್ಲಿಸಿದರು. ನಂತರ ದೆಹಲಿಯ ವಾಲ್ಮೀಕಿ ಬಸ್ತಿಗೆ ತೆರಳಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಇಂದು ದೇಶವ್ಯಾಪ್ತಿ ಸ್ಛಚ್ಛತಾ ಅಭಿಯಾನ ಜಾರಿಯಲ್ಲಿದೆ.

ವಾರಕ್ಕೆ ಎರಡು ಗಂಟೆ ಕಾಲ ಸಮಯ ಮೀಸಲಿಡಿ

ವಾರಕ್ಕೆ ಎರಡು ಗಂಟೆ ಕಾಲ ಸಮಯ ಮೀಸಲಿಡಿ

ವಾರಕ್ಕೆ ಎರಡು ಗಂಟೆ ಕಾಲ ಸಮಯ ಮೀಸಲಿಡಿ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಕಡ್ಡಾಯವಾಗಿ ಬುಟ್ಟಿಗೆ ಹಾಕಿ ಎಂದು ಮೋದಿ ಕರೆ ನೀಡಿದ್ದಾರೆ.

ಮಕ್ಕಳಲ್ಲಿ ಸ್ವಚ್ಛ ಭಾರತ ನಿರ್ಮಾಣದ ಬಗ್ಗೆ ಅರಿವು ಮೂಡಿಸಿ

ಮಕ್ಕಳಲ್ಲಿ ಸ್ವಚ್ಛ ಭಾರತ ನಿರ್ಮಾಣದ ಬಗ್ಗೆ ಅರಿವು ಮೂಡಿಸಿ ಚಿಕ್ಕಂದಿನಿಂದಲೇ ಸ್ವಚ್ಛತೆ ಬಗ್ಗೆ ಅರಿವು ಮೂಡಿದರೆ ನಾಳಿನ ಬದುಕು ಸುಂದರವಾಗುತ್ತದೆ

ವಾಲ್ಮೀಕಿ ಬಸ್ತಿಯಲ್ಲಿ ಮೋದಿ

ವಾಲ್ಮೀಕಿ ಬಸ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಮಕ್ಕಳೊಂದಿಗೆ ಆತ್ಮೀಯ ಮಾತುಕತೆ

ಮಕ್ಕಳೊಂದಿಗೆ ಆತ್ಮೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ವಾಲ್ಮೀಕಿ ದೇಗುಲಕ್ಕೆ ಮೋದಿ ಭೇಟಿ

ವಾಲ್ಮೀಕಿ ದೇಗುಲಕ್ಕೆ ಮೋದಿ ಭೇಟಿ ನೀಡಿ ನಮನ ಸಲ್ಲಿಸಿದರು.

ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ

ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಅಭಿಯಾನದಲ್ಲಿ ಕೈಜೋಡಿಸಿದರು.

ಕಸಪೊರಕೆ ಹಿಡಿದ ಪ್ರಧಾನಿ ಮೋದಿ

ಕಸಪೊರಕೆ ಹಿಡಿದ ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.

ಸಫಾಯಿ ಕರ್ಮಚಾರಿಗಳ ಜೊತೆ ಮೋದಿ

ಸಫಾಯಿ ಕರ್ಮಚಾರಿಗಳ ಜೊತೆ ಮೋದಿ ಅವರ ಮಾತುಕತೆ

English summary
Completing his five-day tour to US, Prime Minister of India -- Narendra Modi finally kicked off his highly ambitious project Swachh Bharat on Thursday, Oct 2.Modi reached Valmiki Basti, a place in the national capital, after paying his tribute to Mahatma Gandhi at Rajghat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X