ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಿಟ್ ಫಂಡ್' ಕುನಾಲ್ ಸೂಸೈಡ್ ಯತ್ನ ಅನುಮಾನದ ಹುತ್ತ!

By Mahesh
|
Google Oneindia Kannada News

ಕೋಲ್ಕತ್ತಾ, ನ.14: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದ ಟಿಎಂಸಿಯ ಅಮಾನತುಗೊಂಡ ಸಂಸದ ಕುನಾಲ್ ಘೋಶ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾರದ ಗ್ರೂಪ್ ಚಿಟ್‌ಫಂಡ್ ಕಂಪನಿಯ ಒಡೆತನವನ್ನು ಹೊಂದಿದ್ದ ಕುನಾಲ್ ಘೋಶ್ ಅವರು ಪಶ್ಟಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ಲಕ್ಷಾಂತರ ಜನರಿಗೆ ಸುಮಾರು 25 ಸಾವಿರ ಕೋಟಿ ರು.ಗೂ ಅಧಿಕ ವಂಚನೆ ಮಾಡಿದ ಆರೋಪ ಹೊತ್ತಿದ್ದಾರೆ. ಈ ಹಗರಣದಲ್ಲಿ ಅನೇಕ ರಾಜಕೀಯ ಪ್ರತಿನಿಧಿಗಳು, ಕ್ರಿಕೆಟರ್ಸ್, ಸಿನಿಮಾ ಮಂದಿಯ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ಅದರೆ, ಸಿಬಿಐ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದರು.

ಕಳೆದ ರಾತ್ರಿ ಸುಮಾರು 50-58 ನಿದ್ದೆ ಮಾತ್ರೆಗಳನ್ನು ಸೇವಿಸಿದ ಕುನಾಲ್ ಘೋಶ್(46) ಹೊಟ್ಟೆ ಕ್ಲೀನ್ ಮಾಡಲಾಗಿದ್ದು ಈಗ ಪ್ರಾಣಾಪಯದಿಂದ ಪಾರಾಗಿದ್ದಾರೆ. ಅದರೆ, ಪ್ರೆಸಿಡೆನ್ಸಿ ಜೈಲಿನಲ್ಲಿದ್ದ ಕುನಾಲ್ ಅವರ ಸೆಲ್ ನಲ್ಲಿ ಆತ್ಮಹತ್ಯಾ ಪತ್ರವೊಂದು ಸಿಕ್ಕಿದೆ. ಇದರಲ್ಲಿ ಯಾರಾದರೂ ಗಣ್ಯರು ಹೆಸರಿದೆಯೇ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅದರೆ, ಅಂಥದ್ದೇನಿಲ್ಲ, ಎಸ್ಎಸ್ ಕೆಎಂ ಆಸ್ಪತ್ರೆಯ ಐಸಿಯುನಲ್ಲಿ ಕುನಾಲ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Suspended TMC MP Kunal Ghosh attempts suicide in jail

ವಿಚಾರಣೆ ತಪ್ಪಿಸಿಕೊಳ್ಳುವ ತಂತ್ರವೇ?: ಚಿಟ್‌ಫಂಡ್ ಹಗರಣ ಸಂಬಂಧ ಕಳೆದ ವರ್ಷ ನವೆಂಬರ್ ನಿಂದ ಜೈಲಿನಲ್ಲಿರುವ ಕುನಾಲ್ ಘೋಷ್, ಸಿಬಿಐ ತನಿಖೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರ ಪ್ರಭಾವಿ ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗುತ್ತಿಲ್ಲ ಎಂದು ಆರೋಪಿಸಿದ್ದರು. ಶುಕ್ರವಾರ(ನ.14) ಅವರ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಜೈಲಿಗೆ ಬರಬೇಕಿತ್ತು. ಅಷ್ಟರಲ್ಲಿ ಕುನಾಲ್ ಈ ರೀತಿ ಮಾಡಿಕೊಂಡಿದ್ದಾರೆ.

ಪತ್ರಕರ್ತರಾಗಿದ್ದ ಕುನಾಲ್ ಅವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರಭಾವಕ್ಕೆ ಒಳಗಾಗಿ ತೃಣಮೂಲ ಕಾಂಗ್ರೆಸ್ ಸೇರಿ ಸಂಸದರಾದವರು.

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಲ್ಪಟ್ಟ ನಂತರ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರ ಹೆಸರನ್ನು ಕುನಾಲ್ ಹೇಳಿದ್ದರು. ಅದರೆ, ಸಿಬಿಐ ತನಿಖೆ ವೇಳೆ ನಾನು ಹೇಳಿದ ಹೆಸರುಗಳು, ಕೊಟ್ಟ ಹೇಳಿಕೆಗಳು ಚಾರ್ಜ್ ಶೀಟ್ ನಲ್ಲಿ ದಾಖಲಾಗಿಲ್ಲ. ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ನನ್ನೊಬ್ಬನೇ ಬಲಿಪಶು ಮಾಡಲಾಗುತ್ತಿದೆ ಎಂದು ಕುನಾಲ್ ಆಕ್ರೋಶ ವ್ಯಕ್ತಪಡಿಸಿದ್ದರು.

ಒಟ್ಟಾರೆ, ಕುನಾಲ್ ಆತ್ಮಹತ್ಯೆ ಯತ್ನ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ತಂತ್ರದಂತೆ ಕಂಡು ಬಂದರೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರ ಗಣ್ಯರ ಪ್ರಭಾವದಿಂದ ಕುನಾಲ್ ಇನ್ನಷ್ಟು ಕಾಲ ಜೈಲಿನಲ್ಲೇ ಉಳಿಯುವ ಸಾಧ್ಯತೆಗಳು ಹೆಚ್ಚಿವೆ.

English summary
Suspended Trinamool Congress (TMC) MP Kunal Ghosh allegedly attempted suicide inside the Presidency Jail here where he has been lodged since last year in connection to the Saradha chit fund scam that surfaced last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X