ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಚ್ಚಾಟದ ವೈರಲ್ ವಿಡಿಯೋ ಸಮರ್ಥಿಸಿಕೊಂಡ ಬಿಜೆಪಿ ಶಾಸಕ

|
Google Oneindia Kannada News

ಡೆಹ್ರಾಡೂನ್, ಜುಲೈ 11: ಪಕ್ಷದಿಂದ ಅಮಾನತುಗೊಂಡಿರುವ ಉತ್ತರಾಖಂಡದ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಅವರು ಗನ್ ಹಿಡಿದು ಕುಣಿಯುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಮೊದಮೊದಲು ತಮ್ಮ ಹುಚ್ಚಾಟದ ಬಗ್ಗೆ ಸಮರ್ಥನೆ ನೀಡಿದ್ದ ಪ್ರಣವ್ ನಂತರ ವೈರಲ್ ವಿಡಿಯೋ ಯಾರೋ ಎಡಿಟಿ ಮಾಡಿದ್ದಾರೆ, ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ.

ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪ್ರಣವ್ ಅವರನ್ನು ಪಕ್ಷದಿಂದ ಮೂರು ತಿಂಗಳ ಅವಧಿಗೆ ಅಮಾನತು ಮಾಡಲಾಗಿತ್ತು. ಈಗ ಈ ವೈರಲ್ ವಿಡಿಯೋ ದೆಸೆಯಿಂದ ಪಕ್ಷದಿಂದಲೇ ಶಾಶ್ವತವಾಗಿ ಉಚ್ಚಾಟನೆಗೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?:53 ವರ್ಷ ವಯಸ್ಸಿನ ಶಾಸಕ ಅವರು ತಮ್ಮ ಫಿಟ್ನೆಸ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಈ ರೀತಿ ಪಾರ್ಟಿ ಮಾಡಿ, ಬಾಲಿವುಡ್ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ, ಎರಡು ಕೈಗಳಲ್ಲಿ ರಿವಾಲ್ವರ್ ಹಿಡಿದು ಹೆಜ್ಜೆ ಹಾಕಿದ್ದಾರೆ.

Suspended BJP MLA :‘Nothing Wrong in Dancing With Guns’, Claims Viral Clip is Edited

'ತಮ್ಮ ಬಳಿಯಿದ್ದ ರಿವಾಲ್ವರ್ ಗಳು ಲೈಸೆನ್ಸ್ ಹೊಂದಿದ್ದು, ಮನೆಯಲ್ಲಿ ಪಾರ್ಟಿ ಮಾಡುವುದು ತಪ್ಪಾ?' ಎಂದು ಪ್ರತಿಕ್ರಿಯಿಸಿದ್ದ ಪ್ರಣವ್ ಅವರು, ಪಕ್ಷದಿಂದ ಶೋಕಾಸ್ ನೋಟಿಸ್ ಬಂದ ನಂತರ ತಣ್ಣಗಾಗಿದ್ದಾರೆ. ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಭದ್ರತೆ ಒದಗಿಸಿ ಎಂಡು ಕೋರಿದ್ದಾರೆ. ಈ ವಿಡಿಯೋ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉತ್ತರಾಖಂಡ್ ಉಸ್ತುವಾರಿ ಶ್ಯಾಮ್ ಜಾಜು ಅವರು ಹೇಳಿದ್ದಾರೆ.

English summary
After a video purportedly showing him dancing to a Bollywood number with guns in hand went viral, suspended BJP MLA Kunwar Pranav Singh Champion on Wednesday claimed that the clip was edited and termed it an intrusion into his privacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X