ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ

ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ ಪೊಲೀಸರು ಮತ್ತು ಸೇನೆಯ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್​ಐ ಏಜೆಂಟ್​ನನ್ನು ಗಾಜಿಯಾಬಾದ್​ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್​ನಲ್ಲಿ ಬಂಧಿಸಿದ್ದಾರೆ.

By Mahesh
|
Google Oneindia Kannada News

ಲಕ್ನೋ, ಮೇ 04: ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ ಪೊಲೀಸರು ಮತ್ತು ಸೇನೆಯ ಗುಪ್ತಚರ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಐಎಸ್​ಐ ಏಜೆಂಟ್​ನನ್ನು ಗಾಜಿಯಾಬಾದ್​ನಿಂದ ಸುಮಾರು 120 ಕಿ.ಮೀ. ದೂರವಿರುವ ಫೈಜಾಬಾದ್​ನಲ್ಲಿ ಬಂಧಿಸಿದ್ದಾರೆ.

ಪಾಕಿಸ್ತಾನದ ಐಎಸ್​ಐ ನಿಂದ ತರಬೇತಿ ಪಡೆದಿದ್ದ ಅಫ್ತಾಬ್ ಅಲಿಯನ್ನು ಭಾರತದಲ್ಲಿ ನೆಲೆಸಿ, ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ. ಆಫ್ತಾಬ್ ಚಟುವಟಿಕೆಗಳನ್ನು ಸಾಕಷ್ಟು ಕಾಲ ಗಮನಿಸಿ, ಅತನ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್​ನ ಐಜಿ ಅಸೀಮ್ ಅರುಣ್ ತಿಳಿಸಿದ್ದಾರೆ.

Suspected ISI agent arrested by ATS in UP

ಅಫ್ತಾಬ್ ಅಲಿ ಬ್ಯಾಂಕ್ ಖಾತೆಗೆ ಅಕ್ರಮವಾಗಿ ಹಣ್ ಜಮೆಯಾಗಿರುವುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಳ್ಳಲಾಗಿದೆ. ಎಟಿಎಸ್ ಸಿಬ್ಬಂದಿಯ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಡಿಜಿಪಿ ಸುಲ್ಖಾನ್ ಸಿಂಗ್ ಅವರು, ಈ ಕಾರ್ಯಾಚರಣಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಇನಾಮು ಘೋಷಿಸಿದ್ದಾರೆ. (ಐಎಎನ್ಎಸ್)
English summary
A suspected agent of Pakistani intelligence agency ISI was arrested on Wednesday in Faizabad in Uttar Pradesh by the Anti-Terrorism Squad in coordination with Military Intelligence, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X