ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿ

|
Google Oneindia Kannada News

ಜೈಪುರ, ಜನವರಿ 27: ಮಾರಣಾಂತಿಕ ಕೊರೊನಾ ವೈರಸ್ ಭೀತಿ ಚೀನಾದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಆವರಿಸಿದೆ.

ಜೈಪುರದಲ್ಲಿ ಓರ್ವ ಶಂಕಿತ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ. ಚೀನಾದಲ್ಲಿ ಎಂಬಿಬಿಎಸ್ ಮುಗಿಸಿ ಭಾರತಕ್ಕೆ ಆತ ವಾಪಸಾಗಿದ್ದ, ಎಸ್‌ಎಂಎಸ್‌ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

ವೈದ್ಯಕೀಯ ಲೋಕದ ಹೊಸ ಪ್ರಯತ್ನ: ಸಕಲ ವೈರಸ್‌ ಸೋಂಕಿಗೂ ಒಂದೇ ಲಸಿಕೆವೈದ್ಯಕೀಯ ಲೋಕದ ಹೊಸ ಪ್ರಯತ್ನ: ಸಕಲ ವೈರಸ್‌ ಸೋಂಕಿಗೂ ಒಂದೇ ಲಸಿಕೆ

ಅವರ ಕುಟುಂಬದ ಎಲ್ಲರನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ. ಪುಣೆಯಲ್ಲಿರುವ ನ್ಯಾಷನಲ್ ವೈರಾಲಜಿ ಲ್ಯಾಬೊರೇಟರಿಗೆ ರಕ್ತದ ಸ್ಯಾಂಪಲ್ ಕಳುಹಿಸಲಾಗಿದೆ.

Suspected Case Of Coronavirus Reported In Rajasthan And Bihar

ಅದೇ ಜಿಲ್ಲೆಯ 18 ಮಂದಿ ಚೀನಾದಿಂದ ಹಿಂದಿರುಗಿದ್ದಾರೆ. ಮುಂದಿನ 28 ದಿನಗಳ ಕಾಲ ಅವರನ್ನು ತೀವ್ರ ನಿಗಾದಲ್ಲಿಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಬಿಹಾರದಲ್ಲಿ ಕೂಡ 137 ವಿಮಾನಗಳ ಒಟ್ಟು 29,700 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಬಿಹಾರದ ಛಾಪ್ರಾದ ವಿದ್ಯಾರ್ಥಿನಿಯೊಬ್ಬಳು ಚೀನಾದಿಂದ ವಾಪಸಾಗಿದ್ದಳು.ಆಕೆಯಲ್ಲಿ ಕೂಡ ಕೊರೊನಾ ವೈರಸ್ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿದೆ.

ಅವರನ್ನು ಛಾಪ್ರಾದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ರಾಜಸ್ಥಾನದ ವೈದ್ಯರೊಬ್ಬರು ಕೂಡ ಚೀನಾದಿಂದ ಮರಳಿದ್ದು ಅವರಲ್ಲೂ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಕೇರಳ ಹಾಗೂ ಮಹಾರಾಷ್ಟ್ರ ಸೇರಿ 100ಕ್ಕೂ ಹೆಚ್ಚ ಮಂದಿಯನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ.

ಮಾರಕ ಕೊರೊನಾ ವೈರಸ್‌ಗೆ ಚೀನಾದ ಬಾವಲಿ ಸೂಪ್ ಕಾರಣ?ಮಾರಕ ಕೊರೊನಾ ವೈರಸ್‌ಗೆ ಚೀನಾದ ಬಾವಲಿ ಸೂಪ್ ಕಾರಣ?

ಚೀನಾದಲ್ಲಿ ಇದುವರೆಗೆ 80 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ, 2800 ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಚೀನಾ ತಿಳಿಸಿದೆ.

English summary
A suspected case of coronavirus has been reported in Rajasthan and Bihar following which the patient has been kept in isolation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X