ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನ ಕೊನೆಯ ಆಸೆ ಈಡೇರಿಸಿದ ಸುಷ್ಮಾ ಸ್ವರಾಜ್ ಮಗಳು

|
Google Oneindia Kannada News

Recommended Video

ಸುಷ್ಮಾ ಸ್ವರಾಜ್ ಕೊನೆಯ ಆಸೆ ಏನಾಗಿತ್ತು ಗೊತ್ತಾ | Oneindia Kannada

ನವದೆಹಲಿ, ಸೆಪ್ಟೆಂಬರ್ 27: ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಜನಪ್ರಿಯ ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಮ್ಮನ್ನು ಅಗಲಿ ಎರಡು ತಿಂಗಳಾಗುತ್ತಾ ಬಂದಿದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಸುಷ್ಮಾ ಅವರ ಅನುಪಸ್ಥಿತಿ ತೀವ್ರವಾಗಿ ಕಾಡುತ್ತಿದೆ ಎಂಬ ಅಭಿಪ್ರಾಯವನ್ನು ಅನೇಕರು ಹೊರಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಷ್ಮಾ ಅವರನ್ನು ಮತ್ತೆ ನೆನಪಿಸುವ ಮೂಲಕ ಅವರ ಮಗಳು ಹಾಗೂ ಪತಿ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಅವರ ಮಗಳು ಬಾನ್ಸುರಿ ಶುಕ್ರವಾರ ಈಡೇರಿಸಿದ್ದಾರೆ. ಈ ಸಂಗತಿಯನ್ನು ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಹೃದಯಸ್ಪರ್ಶಿ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.

ಸಾವಿನ ಕೊನೆಯ ಕ್ಷಣದಲ್ಲೂ ವೃತ್ತಿಪರತೆ ಮೆರೆದ ಸುಷ್ಮಾ ಸ್ವರಾಜ್ಸಾವಿನ ಕೊನೆಯ ಕ್ಷಣದಲ್ಲೂ ವೃತ್ತಿಪರತೆ ಮೆರೆದ ಸುಷ್ಮಾ ಸ್ವರಾಜ್

ಸುಷ್ಮಾ ಅವರು ಕೊನೆಯುಸಿರೆಳೆಯುವ ಕೆಲವೇ ಗಂಟೆಗಳ ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದರು. ಈ ದಿನಕ್ಕಾಗಿ ಜೀವಮಾನವಿಡೀ ಕಾದಿದ್ದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದರು. ದುರಂತವೆಂದರೆ ಹೀಗೆ ಟ್ವೀಟ್ ಮಾಡಿದ್ದ ಕೆಲವೇ ಗಂಟೆಗಳಲ್ಲಿ ಸುಷ್ಮಾ ನಿಧನರಾಗಿದ್ದರು. ಹೀಗಾಗಿ ಈ ಟ್ವೀಟ್ ಅನ್ನೇ ಅನೇಕರು ಸುಷ್ಮಾ ಅವರ ಕೊನೆಯ ಆಸೆ ಎಂದು ಭಾವಿಸಿದ್ದರು. ಆದರೆ ಅವರ ಪತಿ ಸುಷ್ಮಾ ಅವರ ಕೊನೆಯ ಆಸೆ ಬೇರೆಯದೇ ಇತ್ತು ಎಂದು ತಿಳಿಸಿದ್ದಾರೆ.

ಒಂದು ರೂಪಾಯಿ ಕೊನೆ ಆಸೆ!

ಒಂದು ರೂಪಾಯಿ ಕೊನೆ ಆಸೆ!

ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್ ಸಾಳ್ವೆ ಅವರು, ತಮ್ಮ ವಾದ ಮಂಡನೆಗೆ ಕೇವಲ 1 ರೂ. ಶುಲ್ಕ ನೀಡುವಂತೆ ಸುಷ್ಮಾ ಸ್ವರಾಜ್ ಅವರಿಗೆ ಹೇಳಿದ್ದರು. ಸಾಳ್ವೆ ಅವರಿಗೆ ಈ ಒಂದು ರೂಪಾಯಿಯನ್ನು ನೀಡುವುದು ಸುಷ್ಮಾ ಕೊನೆಯ ಆಸೆಯಾಗಿತ್ತು.

ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?

ನಿನ್ನ ಮಗಳು ಆಸೆ ಈಡೇರಿಸಿದ್ದಾಳೆ

ನಿನ್ನ ಮಗಳು ಆಸೆ ಈಡೇರಿಸಿದ್ದಾಳೆ

'ನಿನ್ನ ಕೊನೆಯ ಆಸೆಯನ್ನು ನಿನ್ನ ಮಗಳು ಬಾನ್ಸುರಿ ಇಂದು ಈಡೇರಿಸಿದ್ದಾಳೆ. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಾದಿಸಿದ್ದ ಹರೀಶ್ ಸಾಳ್ವೆ ಅವರಿಗೆ ನೀನು ನೀಡಬೇಕಿದ್ದ 1 ರೂ. ಹಣವನ್ನು ಆಕೆ ಅವರಿಗೆ ಪಾವತಿಸಿದ್ದಾಳೆ' ಎಂದು ಫೋಟೋದೊಂದಿಗೆ ಸ್ವರಾಜ್ ಕೌಶಲ್ ಟ್ವೀಟ್ ಮಾಡಿದ್ದಾರೆ.

ಕರೆ ಮಾಡಿದ್ದ ಹತ್ತೇ ನಿಮಿಷದಲ್ಲಿ...

ಕರೆ ಮಾಡಿದ್ದ ಹತ್ತೇ ನಿಮಿಷದಲ್ಲಿ...

ಸುಷ್ಮಾ ಸ್ವರಾಜ್ ಅವರು ಆಗಸ್ಟ್ 6ರಂದು ಮೃತಪಟ್ಟಿದ್ದರು. ಅದಕ್ಕೂ ಕೆಲವೇ ಗಂಟೆಗಳ ಮುನ್ನ ಹರೀಶ್ ಸಾಳ್ವೆ ಅವರಿಗೆ ಕರೆ ಮಾಡಿದ್ದ ಸುಷ್ಮಾ ಅವರ 1 ರೂ. ಶುಲ್ಕವನ್ನು ಸ್ವೀಕರಿಸುವಂತೆ ಕೋರಿದ್ದರು. ಆದರೆ, ಅದಾಗಿ ಹತ್ತೇ ನಿಮಿಷಗಳಲ್ಲಿ ಸುಷ್ಮಾ ಹೃದಯಾಘಾತಕ್ಕೆ ಒಳಗಾಗಿದ್ದರು.

ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳುನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು

ಸಂಜೆ 6 ಗಂಟೆಗೆ ಬರುವಂತೆ ಹೇಳಿದ್ದ ಸುಷ್ಮಾ

ಸಂಜೆ 6 ಗಂಟೆಗೆ ಬರುವಂತೆ ಹೇಳಿದ್ದ ಸುಷ್ಮಾ

''ಸುಷ್ಮಾ ಸ್ವರಾಜ್ ಅವರು ರಾತ್ರಿ 8.50ರ ಸುಮಾರಿಗೆ ಕರೆ ಮಾಡಿದ್ದರು. ಅದು ಅವರೊಂದಿಗಿನ ಭಾವನಾತ್ಮಕ ಸಂಭಾಷಣೆಯಾಗಿತ್ತು. 'ನೀವು ಇಲ್ಲಿಗೆ ಬಂದು ನನ್ನನ್ನು ಭೇಟಿಯಾಗಬೇಕು. ನೀವು ಗೆದ್ದಿರುವ ಪ್ರಕರಣಕ್ಕೆ ನಿಮಗೆ ಒಂದು ರೂಪಾಯಿಯನ್ನು ನಾನು ಕೊಡಬೇಕಿದೆ' ಎಂದು ಹೇಳಿದ್ದರು. ಅದಕ್ಕೆ ನಾನು 'ಖಂಡಿತಾ, ಆ ಅಮೂಲ್ಯ ಶುಲ್ಕವನ್ನು ಪಡೆದುಕೊಳ್ಳಲು ನಾನು ಬರುತ್ತೇನೆ' ಎಂದಿದ್ದೆ. ಮರುದಿನ ಸಂಜೆ 6 ಗಂಟೆಗೆ ಬನ್ನಿ ಎಂದು ಸುಷ್ಮಾ ಹೇಳಿದ್ದರು'' ಎಂಬುದಾಗಿ ಸಾಳ್ವೆ ನೆನಪಿಸಿಕೊಂಡಿದ್ದರು.

English summary
Former external affairs minister Sushma Swaraj's daugther Bansuri has fulfilled her mother's last wish on Friday. She hand over advocate Harish Salve Rs 1 fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X