ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್: ಇಂದಿರಾ ವಿರುದ್ದ ಪ್ರಚಾರ, ಸೋನಿಯಾ ವಿರುದ್ದ ಸ್ಪರ್ಧೆ

|
Google Oneindia Kannada News

ವಿದೇಶಾಂಗ ಇಲಾಖೆಗೆ ವಿಶೇಷ ಛಾಪು ಮೂಡಿಸಿದ್ದ, ಇಲಾಖೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ (67) ಇನ್ನು ನೆನಪು ಮಾತ್ರ. ವರಮಹಾಲಕ್ಷ್ಮೀ ಹಬ್ಬಕ್ಕೆ ಎರಡು ದಿನ ಮುನ್ನ, ಸುಷ್ಮಾ ನವದೆಹಲಿಯಲ್ಲಿ ಮಂಗಳವಾರ (ಆ 6) ತಡರಾತ್ರಿ ವಿಧಿವಶರಾಗಿದ್ದಾರೆ.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ವಿದ್ಯಾರ್ಥಿ ಜೀವನದಲ್ಲೇ ಹಿಂದೂ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿದ್ದ ಸುಷ್ಮಾ ಅವರದ್ದು ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ವ್ಯಕ್ತಿತ್ವ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯ ಜೊತೆ ಉತ್ತಮ ಒಡನಾಟವನ್ನೂ ಹೊಂದಿದ್ದ ಸುಷ್ಮಾ, ರಾಜಕೀಯದ ವಿಚಾರಕ್ಕೆ ಬಂದಾಗ ಅವರ ವಿರುದ್ದ ಪ್ರಚಾರವನ್ನು ಮಾಡಿದ್ದರು.

ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳುನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು

ಸುಷ್ಮಾ ಸ್ವರಾಜ್ ಗೆ ಕರ್ನಾಟಕದ ಜೊತೆ ವಿಶೇಷ ನಂಟು. ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದಾಗ, ಸುಷ್ಮಾ ಇಲ್ಲಿಗೆ ಬಂದು ಪ್ರಚಾರ ನಡೆಸುತ್ತಿದ್ದರು. ಇಂದಿರಾ ಪ್ರಚಾರ ಮಾಡಿ ಬಂದು ಹೋದ ನಂತರ, ಅದೇ ವೇದಿಕೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದ್ದರು.

Sushma Swaraj No More: She Was Campaigned Against Indira Gandhi, Contested Against Sonia Gandhi

1980ರಲ್ಲಿ ಇಂದಿರಾ ಗಾಂಧಿ ರಾಯ್ ಬರೇಲಿಯಿಂದ ಸ್ಪರ್ಧಿಸಿದಾಗಲೂ, ಅಲ್ಲೂ ಹೋಗಿ ಪಕ್ಷದ ಪರವಾಗಿ ಸುಷ್ಮಾ ಪ್ರಚಾರ ನಡೆಸಿದ್ದರು. ಇನ್ನು, ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್, ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ವಿರುದ್ದ ಸ್ಪರ್ಧಿಸಿದ್ದರು.

ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸೋನಿಯಾ, ಸುಷ್ಮಾ ವಿರುದ್ದ ಸುಮಾರು 56 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರೂ, ಕಡಿಮೆ ಅವಧಿಯಲ್ಲಿ ತಕ್ಕಮಟ್ಟಿಗೆ ಕನ್ನಡ ಕಲಿತು, ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

ಇಂದಿರಾ ವಿರುದ್ದ ಪ್ರಚಾರ ಮತ್ತು ಸೋನಿಯಾ ವಿರುದ್ದ ಸ್ಪರ್ಧೆ ನಡೆಸಿದ್ದರೂ, ಇವರ ನಡುವಣ ವ್ಯಕ್ತಿಗತ ಸಂಬಂಧ ಉತ್ತಮವಾಗಿಯೇ ಇತ್ತು. ಅನಾರೋಗ್ಯದ ಕಾರಣ 2019 ರ ಲೋಕಸಭೆ ಚುನಾವಣೆಗೂ ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿರಲಿಲ್ಲ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸರ್ಕಾರದ ಕ್ರಮವನ್ನು ಶ್ಲಾಘಿಸಿ, ಕೊನೆಯದಾಗಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು. ಕೇಂದ್ರ ಸಚಿವೆಯಾಗಿ, ಪ್ರತಿಪಕ್ಷದ ನಾಯಕಿಯಾಗಿ, ಸಂಸದೀಯ ಪಟುವಾಗಿ, ಮಹಿಳಾ ನಾಯಕಿಯಾಗಿ ಅವರ ಸೇವೆಯನ್ನು ದೇಶ ಸದಾ ಸ್ಮರಿಸುತ್ತದೆ.

English summary
Sushma Swaraj (67) No More: She Was Campaigned Against Indira Gandhi, Contested Against Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X