ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್ ನಿಧನಕ್ಕೆ 'ರೆಸ್ಟ್ ಇನ್ ಹೆಲ್' ಎಂದ ಪಾಕ್ ನಟಿ

|
Google Oneindia Kannada News

ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬಿನಿ ಮಿಡಿಯುತ್ತಿದ್ದರೆ, ಪಾಕಿಸ್ತಾನದ ನಟಿಯೊಬ್ಬಳು ಟ್ವಿಟ್ಟರ್ ನಲ್ಲಿ ಲೇವಡಿ ಮಾಡಿದ್ದಾರೆ.

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

ಯಾರಾದರೂ ನಿಧನ ಹೊಂದಿದಾಗ, RIP (ರೆಸ್ಟ್ ಇನ್ ಪೀಸ್) ಎಂದು ಕಾಮೆಂಟ್ ಮಾಡುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ನಟಿ ವೀಣಾ ಮಲಿಕ್. RIH (ರೆಸ್ಟ್ ಇನ್ ಹೆಲ್) ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ, ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬಿಳಿಬಟ್ಟೆ ಉಟ್ಟು, ತಲೆ ಬೋಳಿಸಿಕೊಳ್ಳುವೆ: ಕಾಂಗ್ರೆಸ್ಸಿಗರಿಗೆ ಬೆದರಿಸಿದ್ದ ಸುಷ್ಮಾ ಸ್ವರಾಜ್ಬಿಳಿಬಟ್ಟೆ ಉಟ್ಟು, ತಲೆ ಬೋಳಿಸಿಕೊಳ್ಳುವೆ: ಕಾಂಗ್ರೆಸ್ಸಿಗರಿಗೆ ಬೆದರಿಸಿದ್ದ ಸುಷ್ಮಾ ಸ್ವರಾಜ್

ಪಾಕಿಸ್ತಾನದ ನಟಿ, ಟಿವಿ ನಿರೂಪಕಿ, ಮಾಡೆಲ್ ಆಗಿರುವ ವೀಣಾ ಮಲಿಕ್, 2012ರಲ್ಲಿ 'ಗಲಿ ಗಲೀ ಮೇ ಚೋರ್ ಹೇ' ಎನ್ನುವ ಬಾಲಿವುಡ್ ಐಟಂ ಸಾಂಗಿಗೆ ಹೆಜ್ಜೆಹಾಕಿದ್ದರು.

Sushma Swaraj Death, Pakistan Actress Veena Malik Controversial Tweet

ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಆರ್ಟಿಕಲ್ 370 ರದ್ದತಿ ವಿಚಾರದಲ್ಲೂ, ಭಾರತದ ವಿರುದ್ದ ವೀಣಾ ಆಕ್ರೋಶ ಹೊರಹಾಕಿದ್ದರು. 'ಇದು ಜಿನಿವಾ ಒಪ್ಪಂದದ ಉಲ್ಲಂಘನೆ, ಕಾಶ್ಮೀರವನ್ನು ಬಲಾತ್ಕಾರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ' ಎಂದು ವೀಣಾ ಟ್ವೀಟ್ ಮಾಡಿದ್ದಳು.

'ಕೆಲಸ ಬೇಡಿಕೊಂಡು ಮತ್ತೆ ಬಾಲಿವುಡ್ ಗೆ ಬರಬೇಡ', 'ಬಲೂಚಿಸ್ಥಾನ್ ನಲ್ಲಿ ಪಾಕಿಸ್ತಾನದ ಆರ್ಮಿ ಮಾಡುತ್ತಿರುವುದು ಏನು, ಎನ್ನುವುದನ್ನು ಮೊದಲು ಅರಿತುಕೊ', 'ಗೃಹಸಚಿವರೇ ಇಂತವರಿಗೆ ಭಾರತದ ವೀಸಾ ಯಾಕೆ ನೀಡುತ್ತೀರಾ' ಎಂದು ನೆಟ್ಟಿಗರು ಪ್ರತ್ಯುತ್ತರ ನೀಡಿದ್ದರು.

ಸುಷ್ಮಾ ಸ್ವರಾಜ್: ಇಂದಿರಾ ವಿರುದ್ದ ಪ್ರಚಾರ, ಸೋನಿಯಾ ವಿರುದ್ದ ಸ್ಪರ್ಧೆಸುಷ್ಮಾ ಸ್ವರಾಜ್: ಇಂದಿರಾ ವಿರುದ್ದ ಪ್ರಚಾರ, ಸೋನಿಯಾ ವಿರುದ್ದ ಸ್ಪರ್ಧೆ

ಸುಷ್ಮಾ ಸ್ವರಾಜ್ ನಿಧನದ ಬಗ್ಗೆ ವೀಣಾ ಮಾಡಿರುವ ಟ್ವೀಟಿಗೆ, ಟ್ವಿಟ್ಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ಬಂದಿದೆ. 'ಸುಷ್ಮಾ ಮೇಡಂ ಸ್ವರ್ಗದಲ್ಲಿ ಇರುತ್ತಾರೆ, ನೀನು ಯಾವತ್ತಿದ್ದರೂ ನರಕಕ್ಕೇ ಹೋಗುವುದು', 'ಕಡಿಮೆಯೆಂದರೂ ಹದಿನೈದು ಪಾಕಿಸ್ತಾನಿಗಳಿಗೆ ಸುಷ್ಮಾ ಮೆಡಿಕಲ್ ವೀಸಾ ಕೊಡಿಸಿದ್ದರು, ಈಗ, ಕೆಲವರು ಅವರ ನಿಧನಕ್ಕೆ ಕುಹುಕವಾಡುತ್ತಿರುವುದು ವಿಷಾದನೀಯ', ಈ ರೀತಿಯ ರಿಪ್ಲೈಗಳು ವೀಣಾ ಮಲಿಕ್ ಟ್ವೀಟಿಗೆ ಬಂದಿವೆ.

English summary
Former External Affairs Minister Sushma Swaraj Death, Pakistan Actress Veena Malik Controversial Tweet. In her tweet, she is without mentioning any name, she said 'RIH' (Rest in Hell).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X