ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅಧಿಕಾರ ಸ್ವೀಕಾರ!
ನವದೆಹಲಿ, ಫೆಬ್ರವರಿ 15: ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್ ಚಂದ್ರ ಅವರು ಶುಕ್ರವಾರದಂದು ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಚುನಾವಣಾ ಆಯುಕ್ತ ಅಶೋಕ್ಲಾವಾಸ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
CBDT Chairman and 1980 batch IRS officer Sushil Chandra appointed as Election Commissioner. pic.twitter.com/cvEAN3xKiS
— Satya Pinisetty (@SatyaPinisetty) February 14, 2019
1957ರ ಮೇ 15ರಂದು ಜನಿಸಿರುವ ಸುಶಿಲ್ ಚಂದ್ರ ಅವರು ಭಾರತೀಯ ಕಂದಾಯ ಸೇವೆಯ (ಐಆರ್ಎಸ್) 1980ನೇ ಬ್ಯಾಚಿಗೆ ಸೇರಿದವರು. ಐಆರ್ಎಸ್ ಅಧಿಕಾರಿಯಾಗಿ ಇವರು ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್ಮತ್ತು ಮಹಾರಾಷ್ಟ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಲೋಕಸಭೆ ಚುನಾವಣೆ: ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ?
ರೂರ್ಕಿ ವಿಶ್ವವಿದ್ಯಾಲಯದಿಂದ ಪದವಿ, ಡೆಹ್ರಾಡೂನ್ ಡಿಎವಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ. ಇಂಟರ್ನ್ಯಾಷನಲ್ಟ್ಯಾಕ್ಸೇಷನ್ ಮತ್ತು ಇನ್ವೆಸ್ಟಿಗೇಷನ್ವಿಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಭಾರತ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಸುಶಿಲ್ ಚಂದ್ರ ಅವರು ಕೇಂದ್ರೀಯ ನೇರ ತೆರಿಗೆಗಳ ನಿಗಮ(ಸಿಬಿಡಿಟಿ)ದ ಚೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂಬೈ, ಗುಜರಾತಿನ ಡಿಜಿ ತನಿಖಾ ವಿಭಾಗದಲ್ಲಿದ್ದರು. ಸಿಂಗಪುರ ವಾರ್ಟನ್, ಐಐಎಂ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.