ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಾರ ಭಾರತಿಗೆ ಕನ್ನಡದ ಸೂರ್ಯ ಪ್ರಕಾಶ

|
Google Oneindia Kannada News

ನವದೆಹಲಿ, ಅ. 29: ಕನ್ನಡಿಗ, ಹಿರಿಯ ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್‌ ಪ್ರಸಾರ ಭಾರತಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಉಪರಾಷ್ಟ್ರಪತಿ ಎಂ.ಹಮೀದ್‌ ಅನ್ಸಾರಿ ಅವರ ನೇತೃತ್ವದ ಸಮಿತಿ ಮೂರು ವರ್ಷಗಳ ಅವಧಿಗೆ ಸೂರ್ಯಪ್ರಕಾಶ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ದೆಹಲಿ ಮೂಲದ ಚಿಂತಕರ ಕೂಟವಾದ ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನದಲ್ಲಿ ತೊಡಗಿಕೊಂಡಿರುವ ಪ್ರಕಾಶ್‌ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮ ಕ್ಷೇತ್ರದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ.[ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಧನ್ಯವಾದ]

prasara bharati

ಪ್ರಸಾರ ಭಾರತಿ ಅಧ್ಯಕ್ಷೆಯಾಗಿದ್ದ ಹಿರಿಯ ಪತ್ರಕರ್ತೆ ಮೃಣಾಲ್ ಪಾಂಡೆ ಅವರ ಅಧಿಕಾರಾವಧಿ ಏ.30ಕ್ಕೆ ಮುಕ್ತಾಯವಾಗಿತ್ತು. ಹುದ್ದೆ ಖಾಲಿಯಾದ ಆರು ತಿಂಗಳ ವಿಳಂಬದ ಬಳಿಕ ಹೊಸ ಅಧ್ಯಕ್ಷರ ನೇಮಕವಾಗಿದೆ.

ಜೀ ನ್ಯೂಸ್, ದಿ ಪಯೋನಿರ್, ಏಷ್ಯಾ ಟೈಮ್ಸ್, ಇಂಡಿಯಾ ಎಡಿಟರ್, ಈ ನಾಡು ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದ ಅನುಭವ ಸೂರ್ಯ ಪ್ರಕಾಶ್ ಬಳಿಯಿದೆ. ಅಲ್ಲದೇ ದೆಹಲಿಯ ಪಯೋನೀರ್ ಮೀಡಿಯಾ ಶಾಲೆಗಳ ಸಂಸ್ಥಾಪಕ-ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.[ದಿನಪತ್ರಿಕೆಗಳ ಮುಖಪುಟದಲ್ಲಿ 'ಮಂಗಳಯಾನ']

ಎರಡನೇ ಕನ್ನಡಿಗ
ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸೂರ್ಯ ಪ್ರಕಾಶ್ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಎರಡನೇ ಕನ್ನಡಿಗ. ಈ ಮೊದಲು ಹಿರಿಯ ಪತ್ರಕರ್ತ ಎಂ.ವಿ.ಕಾಮತ್ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಸಾರ ಭಾರತಿ ವ್ಯಾಪ್ತಿ ಎಷ್ಟು?
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವ್ಯಾಪ್ತಿಯಲ್ಲಿನ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊ ನಿರ್ವಹಣೆ ಹೊಣೆಗಾರಿಕೆಯನ್ನು ಪ್ರಸಾರ ಭಾರತಿ ಹೊಂದಿದೆ. ಪ್ರಸಾರ ಭಾರತಿ ಮಂಡಳಿಯು ಅಧ್ಯಕ್ಷ, ಕಾರ್ಯನಿರ್ವಾಹಕ ಸದಸ್ಯ, ಇಬ್ಬರು ಸದಸ್ಯರು ಮತ್ತು ಆರು ಮಂದಿ ಅರೆಕಾಲಿಕ ಸದಸ್ಯರನ್ನು ಒಳಗೊಂಡಿರುತ್ತದೆ. ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಹೊಣೆಗಾರಿಕೆ ಇವರ ಮೇಲಿರುತ್ತದೆ.

English summary
Author-journalist A Surya Prakash was appointed the chairman of public broadcaster Prasar Bharati for a full term of three years. Prakash, who has worked with an array of media organisations in the past is currently consulting editor at The Pioneer and a Fellow at Vivekananda International Foundation, a New Delhi-based think-tank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X