ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೋಧಕ ಲಸಿಕೆಗಳ ಬಗ್ಗೆ 43% ವಯಸ್ಕರಿಗೆ ಅರಿವಿಲ್ಲ : ಸಮೀಕ್ಷೆ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 10: ನಿರೋಧಕ ಲಸಿಕೆಗಳ ಬಗ್ಗೆ ತಮಗೆ ಅರಿವಿಲ್ಲ ಎಂದು 43% ವಯಸ್ಕರು ಹೇಳಿದ್ದಾರೆ. ರುಬೆಲ್ಲಾ, ಎಬೋಲಾ, ಎಚ್ 1 ಎನ್ 1, ಡೆಂಗ್ಯೂ ಸೇರಿದಂತೆ ಅನೇಕ ಲಸಿಕೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಹೊಸ ಸಮೀಕ್ಷೆಯಿಂದ ತಿಳಿದು ಬಂದಿದೆ.

ಸಾರ್ವಜನಿಕ ಆರೋಗ್ಯದಲ್ಲಿ ಪ್ರತಿರಕ್ಷಣೆಯು(immunity) ಅತ್ಯಂತ ಶಕ್ತಿಶಾಲಿ ಹಾಗು ದುಬಾರಿಯಲ್ಲದ ಪರಿಹಾರಗಳಲ್ಲಿ ಒಂದೆಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದ್ದರೂ, ಇಪ್ಸೋಸ್ ಮೋರಿ ನಡೆಸಿದ ಹಾಗು ಜಿಎಸ್‍ಕೆ ಪ್ರಾಯೋಜಿಸಿದ ಹೊಸ ಸರ್ವೇಕ್ಷಣೆಯು ಶೇಕಡ 68 ವಯಸ್ಕರು ಅವರಿಗೆ ಶಿಫಾರಸು ಮಾಡಿರುವ ಲಸಿಕೆಗಳನ್ನು ಪೂರ್ಣವಾಗಿ ಪಡೆಯುತ್ತಿಲ್ಲ ಎಂದು ಕಂಡುಹಿಡಿದಿದೆ.

Survey 43% of adults feel that they lack knowledge about adult vaccines

18 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ವಯಸ್ಕರಲ್ಲಿ ಜೀವನಪರ್ಯಂತದ ಲಸಿಕೆಯ ಬಗ್ಗೆ ಜಾಗೃತಿ ಮತ್ತು ಮನೋಭಾವಗಳನ್ನು ವಿಶ್ಲೇಷಿಸಲು ಈ ಸರ್ವೇಕ್ಷಣೆಯನ್ನು ಕೈಗೊಳ್ಳಲಾಗಿತ್ತು.

ಜುಲೈ 6ರಿಂದ ಸೆಪ್ಟೆಂಬರ್ 14ರವರೆಗಿನ ಅವಧಿಯಲ್ಲಿ ಭಾರತದ 6 ನಗರಗಳಲ್ಲಿ (ದೆಹಲಿ, ಕೊಲ್ಕತ್ತಾ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ) ಸುಮಾರು 2002 ವಯಸ್ಕರ ಮೇಲೆ ನಡೆಸಿದ ಸರ್ವೇಕ್ಷಣೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

ಬ್ರೆಜಿಲ್, ಭಾರತ, ಯುನೈಟೆಡ್ ಸ್ಟೇಟ್ಸ್, ಜರ್ಮನಿ ಹಾಗು ಇಟಲಿ ದೇಶಗಳಲ್ಲಿ 6002ಕ್ಕಿಂತ ಹೆಚ್ಚಿನ ವಯಸ್ಕರಿಗಾಗಿ ನಡೆಸಿದ ಜೀವನಕ್ಕಾಗಿ ಲಸಿಕೆ ಹಾಕಿಸಿಕೊಳ್ಳಿಯ ಸರ್ವೇಕ್ಷಣೆಯು ಕೆಳಕಂಡ ಅಂಶಗಳನ್ನು ಹೊರಪಡಿಸಿದೆ:

15 ಶೇಕಡ ವಯಸ್ಕರು ಲಸಿಕೆಗಳು ಮಕ್ಕಳಿಗೆ ಮತ್ತು/ಅಥವಾ ಶಿಶುಗಳಿಗೆ ಮಾತ್ರ ಶಿಫಾರಸು ಮಾಡಲ್ಪಡುತ್ತವೆ ಎಂದು ತಿಳಿದಿದ್ದರೆ 21 ಶೇಕಡ ವಯಸ್ಕರು ಪ್ರವಾಸ ಮಾಡುವ ಉದ್ದೇಶಗಳಿಗಾಗಿ ಮಾತ್ರ ಅವು ಅಗತ್ಯವಾಗುತ್ತವೆ ಎಂದು ನಂಬಿದ್ದಾರೆ.

ಕಳೆದ ಐದು ವರ್ಷಗಳೊಳಗೆ ತಮಗೆ ಸಂಭಾವ್ಯವಾಗಿ ಸಂಬಂಧಿಸುವಂಥ ಯಾವುದೇ ರೀತಿಯ ಲಸಿಕೆಯನ್ನು ತಾವು ಹಾಕಿಸಿಕೊಂಡಿಲ್ಲ ಎಂದು 10ರಲ್ಲಿ 3 ಮಂದಿ ತಿಳಿಸಿದ್ದಾರೆ.

Survey 43% of adults feel that they lack knowledge about adult vaccines

ವಯಸ್ಕ ಲಸಿಕೆಗಳ ಪ್ರಾಮುಖ್ಯತೆಯ ಬಗ್ಗೆ ಸರ್ಕಾರ ಒದಗಿಸಿರುವ ಯಾವುದೇ ಮಾಹಿತಿಯನ್ನು ತಾವು ಸ್ವೀಕರಿಸಿಲ್ಲ ಎಂದು ಶೇಕಡ 60 ವಯಸ್ಕರು ತಿಳಿಸಿದ್ದಾರೆ.

ಇತರ ಆರೋಗ್ಯ ಸೇವೆಗಳ ಆದ್ಯತೆ: ಸರ್ವೇಕ್ಷಣೆ ಮಾಡಿದ 53 ಶೇಕಡ ವಯಸ್ಕರು ಆರೋಗ್ಯಕರ ಜೀವನಶೈಲಿಯನ್ನು ಪಡೆಯುವುದು ಮುಖ್ಯವಾದರೂ ಲಸಿಕೆಗಳಿಗಿಂತ ಇತರ ಆರೋಗ್ಯ ಸೇವೆಗಳಿಗೇ ತಾವು ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.

English summary
Despite the World Health Organization (WHO) citing immunisation as one of the most powerful and cost-effective interventions in public health1, a new survey conducted by Ipsos MORI and sponsored by GSK finds that 68 percent of adults are not up-to-date with the vaccines recommended for them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X