ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಫಲ್ಯ ಮುಚ್ಚಿಡಲು ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆ: ಮಾಯಾವತಿ ಕಿಡಿ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 29: ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಿಡುಗಡೆ ಮಾಡಿದ ಕೇಂದ್ರ ಸರಕಾರದ ತೀರ್ಮಾನವನ್ನು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಟೀಕಿಸಿದ್ದಾರೆ.

ಕೇಂದ್ರ ಸರಕಾರ ತನ್ನ ಻ವೈಫಲ್ಯಗಳನ್ನು ಮುಚ್ಚಿಹಾಕಲು ಈ ವಿಡಿಯೋ ಬಿಡುಗಡೆ ಮಾಡಿದೆ. ಈ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಮಾತ್ರವಲ್ಲ; ಇಡೀ ಮೋದಿ ಸರ್ಕಾರವೇ ಫೇಕು: ನಿರುಪಮ್ಸರ್ಜಿಕಲ್ ಸ್ಟ್ರೈಕ್ ಮಾತ್ರವಲ್ಲ; ಇಡೀ ಮೋದಿ ಸರ್ಕಾರವೇ ಫೇಕು: ನಿರುಪಮ್

"2019ಕ್ಕೂ ಮೊದಲ ತಮ್ಮ ಎಲ್ಲಾ ವೈಫಲ್ಯಗಳನ್ನು ಮುಚ್ಚಿ ಹಾಕಲು ಈ ಸರಕಾರ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ಬಿಡುಗಡೆ ಮಾಡಿದೆ," ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮಾಯಾವತಿ ಕಿಡಿಕಾರಿದ್ದಾರೆ.

Surgical Strike video released to distract people from failures, says Mayawati

ಒಂದೊಮ್ಮೆ ಪುರಾವೆ ನೀಡುವ ಉದ್ದೇಶಕ್ಕೇ ಈ ವಿಡಿಯೋ ಬಿಡುಗಡೆ ಮಾಡಿದ್ದರೆ, ಸರ್ಜಿಕಲ್ ಸ್ಟ್ರೈಕ್ ನಡೆದಾಗಲೇ ಯಾಕೆ ವಿಡಿಯೋ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

'ಸರ್ಜಿಕಲ್ ಸ್ಟ್ರೈಕ್ ನಿಜ, ಆದರೆ 56 ಇಂಚಿನ ಎದೆ ಇದರ ಲಾಭ ಪಡೆಯಬಾರದು!''ಸರ್ಜಿಕಲ್ ಸ್ಟ್ರೈಕ್ ನಿಜ, ಆದರೆ 56 ಇಂಚಿನ ಎದೆ ಇದರ ಲಾಭ ಪಡೆಯಬಾರದು!'

ಎರಡು ವರ್ಷದ ಕೆಳಗೆ ಅಂದರೆ 29 ಸೆಪ್ಟೆಂಬರ್ 2016ರಲ್ಲಿ ಕೇಂದ್ರ ಸರಕಾರ ಪಾಕಿಸ್ತಾನದ ನೆಲದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು. ಇದರ ವಿಡಿಯೋ ಬುಧವಾರ ರಾತ್ರಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.

English summary
"Releasing video of Surgical Strike is nothing but an attempt by this Govt to distract people from their enormous failures before 2019. If they did it with intention of showing proof, then why did they not release video when strike was carried out?" asks BSP Chief Mayawati,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X