ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈನ ಸನ್ಯಾಸಿಯಾದ ವಜ್ರದ ವ್ಯಾಪಾರಿಯ 12 ವರ್ಷದ ಮಗ

By Mahesh
|
Google Oneindia Kannada News

ಸೂರತ್, ಏಪ್ರಿಲ್ 19: ಆತ ಇನ್ನೂ 12 ವರ್ಷ ಬಾಲಕ. ಎಲ್ಲರಂತೆ ಸಹಪಾಠಿಗಳ ಜತೆ ಆಡಿ ನಲಿದು ಬೆಳೆಯುವ ವಯಸ್ಸು. ಐಷಾರಾಮಿ ಜೀವನ, ಸುಖ ಸುಪ್ಪತ್ತಿಗೆಯನ್ನು ಕಂಡಿದ್ದರೂ, ಆತನ ಮನಸ್ಸು ಮಾತ್ರ ಸನ್ಯಾಸ ಜೀವನ ಬಯಸಿತು.

ಸೂರತ್ ನ ಶ್ರೀಮಂತ ವಜ್ರದ ವ್ಯಾಪಾರಿಯ 12 ವರ್ಷದ ಮಗ ಭವ್ಯ ಶಾ ಜೈನ ಧರ್ಮದ ಸನ್ಯಾಸತ್ವ ಸ್ವೀಕಾರಕ್ಕೆ ನಿರ್ಧರಿಸಿದ್ದಾರೆ. ಆತನ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಕುಟುಂಬ ವರ್ಗ, ಸಂಭ್ರಮಾಚರಣೆಯಲ್ಲಿ ತೊಡಗಿದೆ.

Surat boy, son of a diamond merchant, becomes Jain monk

ಸೂರತ್‌ನ ಬಾಲಕ ಭವ್ಯ ಷಾ, ದೇವರು ತೋರಿರುವ ಸತ್ಯದ ದಾರಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನನಗೆ ಸಂತೋಷವಿದೆ. ನನ್ನ ತಂದೆ ತಾಯಿಯನ್ನು ನಾನು ತೊರೆದು ಹೋಗುತ್ತಿದ್ದು, ಅವರು ಕಲಿಸಿಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದೇನೆ. ಮುಂದೊಂದು ದಿನ ನನ್ನ ತಂದೆ ತಾಯಿಯು ಇದೇ ಹಾದಿಯಲ್ಲಿ ಬರಲಿದ್ದಾರೆ ಎಂದು ತಿಳಿಸಿದ್ದಾನೆ.

ನೂರು ಕೋಟಿ ಆಸ್ತಿ, ಮುದ್ದಾದ ಮಗಳು ತ್ಯಜಿಸಿ ದಂಪತಿ ಸನ್ಯಾಸನೂರು ಕೋಟಿ ಆಸ್ತಿ, ಮುದ್ದಾದ ಮಗಳು ತ್ಯಜಿಸಿ ದಂಪತಿ ಸನ್ಯಾಸ

ನನ್ನ ಮಗ ಸನ್ಯಾಸತ್ವ ಸ್ವೀಕರಿಸುತ್ತಿರುವುದಕ್ಕೆ ನಮ್ಮ ಕುಟುಂಬಕ್ಕೆ ಸಂತೋಷವಾಗಿದೆ. ನಮ್ಮನ್ನೆಲ್ಲ ತೊರೆಯುತ್ತಿರುವುದಕ್ಕಿಂತ ಸನ್ಯಾಸತ್ವ ಸ್ವೀಕರಿಸುತ್ತಿರುವುದಕ್ಕೆ ನಮಗೆ ಸಂತಸವಿದೆ. ನನ್ನ ಮಗಳು ಕಳೆದ ನಾಲ್ಕು ವರ್ಷಗಳ ಹಿಂದೆ 12 ವರ್ಷದವಳಾಗಿದ್ದಾಗಲೇ ಸನ್ಯಾಸತ್ವ ಸ್ವೀಕರಿಸಿದ್ದಳು ಎಂದಿದ್ದಾರೆ.

ಹೊಸದಾಗಿ ಸನ್ಯಾಸತ್ವ ಸ್ವೀಕರಿಸಿದವರು ಮುಖ್ಯವಾಗಿ ಮಹಾವ್ರತ ಎಂಬ 5 ಪ್ರತಿಜ್ಞೆಗಳನ್ನು ಕೈಗೊಳ್ಳುತ್ತಾರೆ. ಸುಮಾರು 7 ಸಾವಿರ ಜನರ ಸಮ್ಮುಖದಲ್ಲಿ 400ಕ್ಕೂ ಅಧಿಕ ಜೈನಮುನಿಗಳ ಉಪಸ್ಥಿತಿಯಲ್ಲಿ ಭವ್ಯಶಾ ಸನ್ಯಾಸ ದೀಕ್ಷೆ ಸಮಾರಂಭ ನಡೆಯಿತು.

English summary
Son of a millionaire diamond merchant from Surat a twelve-year-old Bhavya Shah becomes Jain monk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X