ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್‌ಚಿಟ್: ಜಫ್ರಿ ಅರ್ಜಿ ವಿಚಾರಣೆ ಏ.14ಕ್ಕೆ ನಿಗದಿ

|
Google Oneindia Kannada News

ನವದೆಹಲಿ, ಫೆಬ್ರವರಿ 4: ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವ ಎಸ್‌ಐಟಿ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏಪ್ರಿಲ್ 14ಕ್ಕೆ ನಿಗದಿಗೊಳಿಸಿದೆ.

ಹತ್ಯಾಕಾಂಡದಲ್ಲಿ ಮೃತಪಟ್ಟ ಕಾಂಗ್ರೆಸ್ ಸಂಸದ ಎಹ್ಸಾನ್ ಜಫ್ರಿ ಪತ್ನಿ ಝಾಕಿಯಾ ಜಫ್ರಿ, ಮೋದಿ ಅವರಿಗೆ ಕ್ಲೀನ್ ಟಿಚ್ ನೀಡಿರುವುದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಹಲವು ಬಾರಿ ಮುಂದೂಡಲಾಗಿದೆ. ಒಂದಲ್ಲ ಒಂದು ದಿನ ವಿಚಾರಣೆ ನಡೆಸುವುದಾಗಿ ಹೇಳಿದ ಸುಪ್ರೀಂಕೋರ್ಟ್, ಏ. 14ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

61ನೇ ಮನ್ ಕೀ ಬಾತ್: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? 61ನೇ ಮನ್ ಕೀ ಬಾತ್: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಮತ್ತು ಹೋಳಿ ರಜೆಯ ಬಳಿಕ ಅದರ ವಿಚಾರಣೆಯನ್ನು ನಿಗದಿಗೊಳಿಸುವಂತೆ ಝಾಕಿಯಾ ಪರ ವಕೀಲರು ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ನ್ಯಾಯಪೀಠ, ಏಪ್ರಿಲ್‌ಗೆ ಮುಂದೂಡಿತು.

ಒಂದಲ್ಲ ಒಂದು ದಿನ ವಿಚಾರಣೆ ನಡೆಸಬೇಕು

ಒಂದಲ್ಲ ಒಂದು ದಿನ ವಿಚಾರಣೆ ನಡೆಸಬೇಕು

ಝಾಕಿಯಾ ಜಫ್ರಿ ಪರ ಹಾಜರಾಗಿದ್ದ ವಕೀಲೆ ಅಪರ್ಣಾ ಭಟ್, ಈ ವಿಷಯ ಬಹಳ ವಿವಾದಾತ್ಮಕವಾಗಿದೆ ಎಂದು ತಿಳಿಸಿದರು. 'ಈ ಪ್ರಕರಣವನ್ನು ಅನೇಕ ಬಾರಿ ಮುಂದೂಡಲಾಗಿದೆ. ಅದೇನೇ ಇದ್ದರೂ ನಾವು ಒಂದು ದಿನ ಅದನ್ನು ವಿಚಾರಣೆ ನಡೆಸಲೇಬೇಕು. ಒಂದು ದಿನವನ್ನು ನಿಗದಿಮಾಡಿಕೊಂಡು ಅಂದು ನಿಮ್ಮ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಿ' ಎಂದು ನ್ಯಾಯಪೀಠ ಸಲಹೆ ನೀಡಿತು.

2002ರ ಫೆ. 27ರಿಂದ ಮೇ ವರೆಗಿನ ಈ ಘಟನೆ ಬೃಹತ್ ಸಂಚಿನದ್ದಾಗಿದೆ. ಹೀಗಾಗಿ ಅರ್ಜಿಯ ಸಂಬಂಧ ನೋಟಿಸ್‌ಗಳನ್ನು ಹೊರಡಿಸಬೇಕಿದೆ ಎಂದು ಅಪರ್ಣಾ ಭಟ್ ಹೇಳಿದರು.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ

2002ರ ಫೆ. 28ರಂದು ನಡೆದ ಗುಲ್ಬರ್ಗ್ ಸೊಸೈಟಿ ಹಿಂಸಾಚಾರದಲ್ಲಿ 68 ಮಂದಿ ಮೃತಪಟ್ಟಿದ್ದರು. ಅದರಲ್ಲಿ ಎಹ್ಸಾನ್ ಜಫ್ರಿ ಕೂಡ ಸೇರಿದ್ದರು. ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್‌-6 ಬೋಗಿಗೆ ಬೆಂಕಿ ಹಚ್ಚಿ 59 ಮಂದಿಯನ್ನು ಕೊಂದ ಘಟನೆಯ ಮರುದಿನವೇ ಉಂಟಾದ ಗಲಭೆಯಲ್ಲಿ ಈ ಹತ್ಯಾಕಾಂಡ ನಡೆದಿತ್ತು.

ಗೋಧ್ರಾ ಗಲಭೆ: ಜಾಮೀನು ಸಿಕ್ಕರೂ 17 ಮಂದಿ ಗುಜರಾತ್ ಗೆ ಕಾಲಿಡುವಂತಿಲ್ಲಗೋಧ್ರಾ ಗಲಭೆ: ಜಾಮೀನು ಸಿಕ್ಕರೂ 17 ಮಂದಿ ಗುಜರಾತ್ ಗೆ ಕಾಲಿಡುವಂತಿಲ್ಲ

ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ

ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ

2012ರ ಫೆ. 8ರಂದು ಪ್ರಕರಣದ ಅಂತಿಮ ವರದಿ ಸಲ್ಲಿಸಿದ್ದ ವಿಶೇಷ ತನಿಖಾ ತಂಡ, ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಇತರೆ 63 ಮಂದಿಗೆ ಕ್ಲೀನ್‌ಚಿಟ್ ನೀಡಿತ್ತು. ಅವರ ವಿರುದ್ಧ ಯಾವುದೇ ವಿಚಾರಣೆಗೆ ಅರ್ಹವಾದ ಸಾಕ್ಷ್ಯಗಳು ಇಲ್ಲ ಎಂದು ಪೊಲೀಸರು ಹೇಳಿದ್ದರು.

ಎಸ್‌ಐಟಿ ನಿರ್ಧಾರವನ್ನು ಪ್ರಶ್ನಿಸಿ ಝಾಕಿಯಾ ಜಫ್ರಿ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ 2017ರ ಅಕ್ಟೋಬರ್ 5ರಂದು ತಿರಸ್ಕರಿಸಿತ್ತು. ಆ ಆದೇಶವನ್ನು 2018ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

 ಬಿಲ್ಕಿಸ್ ಬಾನೊಗೆ 50 ಲಕ್ಷ ಪರಿಹಾರ ನೀಡಲು ಗುಜರಾತ್ ಸರಕಾರಕ್ಕೆ ಸುಪ್ರೀಂ ಆದೇಶ ಬಿಲ್ಕಿಸ್ ಬಾನೊಗೆ 50 ಲಕ್ಷ ಪರಿಹಾರ ನೀಡಲು ಗುಜರಾತ್ ಸರಕಾರಕ್ಕೆ ಸುಪ್ರೀಂ ಆದೇಶ

ಹೆಚ್ಚಿನ ವಿಚಾರಣೆಗೆ ಅವಕಾಶ

ಹೆಚ್ಚಿನ ವಿಚಾರಣೆಗೆ ಅವಕಾಶ

2017ರಲ್ಲಿ ತೀರ್ಪು ನೀಡುವ ವೇಳೆ ಹೈಕೋರ್ಟ್, ಎಸ್‌ಐಟಿ ನಡೆಸಿದ ತನಿಖೆ ಮೇಲೆ ಸುಪ್ರೀಂಕೋರ್ಟ್ ನಿಗಾವಹಿಸಿತ್ತು ಎಂದಿತ್ತು. ಆದರೆ ಝಾಕಿಯಾ ಜಫ್ರಿ ಅರ್ಜಿಯ ಕೋರಿಕೆಯಂತೆ ಹೆಚ್ಚಿನ ತನಿಖೆಗೆ ಅವಕಾಶ ನೀಡಿತ್ತು. ಈ ಪ್ರಕರಣದ ಹೆಚ್ಚಿನ ವಿಚಾರಣೆಗೆ ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್, ಹೈಕೋರ್ಟ್‌ ವಿಭಾಗೀಯ ಪೀಠ ಅಥವಾ ಸುಪ್ರೀಂಕೋರ್ಟ್‌ನಂತಹ ಸೂಕ್ತ ವೇದಿಕೆಗೆ ಮನವಿ ಸಲ್ಲಿಸಬಹುದು ಎಂದು ಸಲಹೆ ನೀಡಿತ್ತು.

ಅಂಶಗಳನ್ನು ಪರಿಗಣಿಸಿಲ್ಲ

ಅಂಶಗಳನ್ನು ಪರಿಗಣಿಸಿಲ್ಲ

ಎಸ್‌ಐಟಿಯು ಪ್ರಕರಣದ ಕುರಿತಾಗಿ ವಿಚಾರಣಾ ನ್ಯಾಯಾಧೀಶರ ಮುಂದೆ ತನ್ನ ಮುಕ್ತಾಯದ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ ಬಳಿಕ, ಮಹತ್ವದ ಅಂಶಗಳನ್ನು ಪರಿಗಣಿಸದೆಯೇ ತಾವು ಸಲ್ಲಿಸಿದ್ದ ಪ್ರತಿಭಟನಾತ್ಮಕ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ವಜಾಗೊಳಿಸಿದ್ದರು. ಮೇಘಾನಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುಲ್ಬರ್ಗ್ ಸೊಸೈಟಿ ಪ್ರಕರಣದಲ್ಲಿ ಸ್ವತಂತ್ರ ದೂರುದಾರನಾಗಿರುವ ಅರ್ಜಿದಾರರ ಹೋರಾಟವನ್ನು ಪರಿಗಣಿಸುವಲ್ಲಿ ಹೈಕೋರ್ಟ್ ವಿಫಲವಾಗಿದೆ ಎಂದು ಝಾಕಿಯಾ ಜಫ್ರಿ ಸುಪ್ರೀಂಕೋರ್ಟ್‌ಗೆ ಹೇಳಿದ್ದಾರೆ.

English summary
The Supreme Court on Tuesday has fixed April 14 for hearing the plea by Zakia Jafri, challenging SIT's clean chit to Modi in the Gujarat riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X