ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ: ಸುಪ್ರೀಂನಿಂದ ಐತಿಹಾಸಿಕ ತೀರ್ಪು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ: ಸುಪ್ರೀಂಕೋರ್ಟ್ ತೀರ್ಪು ಯಾರ ಪರ?ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ: ಸುಪ್ರೀಂಕೋರ್ಟ್ ತೀರ್ಪು ಯಾರ ಪರ?

ಅಕ್ಟೋಬರ್ 2 ರಂದು ನಿವೃತ್ತರಾಗುತ್ತಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಒಂದಾಗಲಿದೆ.

ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ

ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?

Supreme court verdict on Women entry to Sabarimala

ಆದರೆ ಇದರಿಂದ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ವಿವಾದ ಎದ್ದಿತ್ತು.

Newest FirstOldest First
11:22 AM, 28 Sep

ಧಾರ್ಮಿಕ ಆಚರಣೆಗಳನ್ನು ಸಮಾನತೆಯ ಹಕ್ಕಿನ ಆಧಾರದಮೇಲೆ ನಿರ್ಧರಿಸುವುದಕ್ಕಾಗುವುದಿಲ್ಲ, ಅದು ಭಕ್ತರಿಗೆ ಬಿಟ್ಟಿದ್ದು. ಅತ್ಯಗತ್ಯ ಧಾರ್ಮಿಕ ಆಚರಣೆಗಳನ್ನು ಕೋರ್ಟು ನಿರ್ಧರಿಸುವುದು ಸರಿಯಲ್ಲ- ನ್ಯಾ.ಇಂದು ಮಲ್ಹೋತ್ರಾ, ಪಂಚ ಸದಸ್ಯ ಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ
11:11 AM, 28 Sep

ನಾವು ಕೆಲವು ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿ, ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸುತ್ತೇವೆ-ಎ.ಪದ್ಮಕುಮಾರ್, ಶಬರಿಮಲೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ
11:09 AM, 28 Sep

ನನಗೆ ತುಂಬಾ ಸಂತೋಷವಾಗಿದೆ. ನನಗೆ ನ್ಯಾಯಾಂಗ, ಈ ದೇಶದ ಕಾನೂನು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಸಾಕಷ್ಟು ಗೌರವವಿದೆ. ಈ ತೀರ್ಪು ಸಾಕಷ್ಟು ಸಂತಸವನ್ನುಂಟುಮಾಡಿದೆ. ಇದು ಮಹಿಳೆಯರ ಹೋರಾಟಕ್ಕೆ ಸಂದ ಗೆಲುವು- ಜಯಮಾಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ
11:06 AM, 28 Sep

ದೇವಾಲಯದ ನಿಯಮಗಳು ಸಂವಿಧಾನ ವಿಧಿ 14 ಮತ್ತು 25 ಅನ್ನು ಉಲ್ಲಂಘಿಸುತ್ತದೆ- ಸುಪ್ರೀಂ ಕೋರ್ಟ್
11:04 AM, 28 Sep

ದೇವಾಲಯದ ಆಡಳಿತ ಮಂಡಳಿ ಹೇರಿದ ನಿರ್ಬಂಧವನ್ನು ಅತ್ಯಗತ್ಯ ಧಾರ್ಮಿಕ ನಿಯಮ ಎಂದು ಪರಿಗಣಿಸುವುದಕ್ಕಾಗುವುದಿಲ್ಲ - ದೀಪಕ್ ಮಿಶ್ರಾ
11:01 AM, 28 Sep

ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರನ್ನು ಶಬರಿಮಲೆ ದೇವಾಲಯ ಪ್ರವೇಶದಿಂದ ಹೊರಗಿಟ್ಟಿದ್ದು ಸಂವಿಧಾನದ ತತ್ತ್ವಗಳನ್ನು ಗಾಳಿಗೆ ತೂರಿದಂತೆ- ದೀಪಕ್ ಮಿಶ್ರಾ
11:00 AM, 28 Sep

ಪೂಜಿಸುವ ಹಕ್ಕು ಎಲ್ಲ ಭಕ್ತರಿಗೂ ಇದೆ. ಅದರಲ್ಲಿ ಯಾವುದೇ ತಾರತಮ್ಯವಿಲ್ಲ- ದೀಪಕ್ ಮಿಶ್ರಾ
Advertisement
10:58 AM, 28 Sep

ಮಹಿಳೆಯರನ್ನು ದುರ್ಬಲರಂತೆ ನೋಡಬಾರದು-ದೀಪಕ್ ಮಿಶ್ರಾ
10:55 AM, 28 Sep

ಮಹಿಳೆಯರು ಪುರುಷರು ಇಬ್ಬರೂ ಸಮಾನರು-ದೀಪಕ್ ಮಿಶ್ರಾ
10:53 AM, 28 Sep

ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆದ ಸುಪ್ರೀಂ ಕೋರ್ಟ್
10:52 AM, 28 Sep

ತೀರ್ಪನ್ನು ವಿರೋಧಿಸಿದ್ದ ಪೀಠದ ಏಕೈಕ ಮಹಿಳಾ ಸದಸ್ಯರಾದ ನ್ಯಾ.ಇಂದು ಮಲ್ಹೋತ್ರಾ
10:52 AM, 28 Sep

4:1 ಅನುಪಾತದದಲ್ಲಿ ಮಹಿಳೆಯರ ಪರ ಬಹುಮತದ ತೀರ್ಪು.
Advertisement
10:52 AM, 28 Sep

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ: ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು
10:46 AM, 28 Sep

ನ್ಯಾ.ಮಿಶ್ರಾ ಮತ್ತು ನ್ಯಾ. ಖಾನ್ವಿಲ್ಕರ್ ರಿಂದ ಜಂಟಿ ತೀರ್ಪು
10:46 AM, 28 Sep

ಮಹಿಳೆಯರಿಗೆ ಭಾರತದಲ್ಲಿ ದೇವತೆಯ ಸ್ಥಾನ ನೀಡಲಾಗಿದೆ.
10:45 AM, 28 Sep

ಮಹಿಳೆಯರು ಎಂದಿಗೂ ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ- ದೀಪಕ್ ಮಿಶ್ರಾ
10:44 AM, 28 Sep

ಮಹಿಳೆಯರನ್ನು ದೀರ್ಘಕಾಲದಿಂದ ತಾರತಮ್ಯದಲ್ಲಿ ನೋಡಲಾಗುತ್ತಿದೆ-ದೀಪಕ್ ಮಿಶ್ರಾ
10:43 AM, 28 Sep

ತೀರ್ಪು ಓದುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ
10:39 AM, 28 Sep

ನಾಲ್ವರು ನ್ಯಾಯಮೂರ್ತಿಗಳಿಂದ ಪ್ರತ್ಯೇಕ ತೀರ್ಪು
10:38 AM, 28 Sep

ಕೋರ್ಟ್ ಹಾಲ್ ಗೆ ಆಗಮಿಸಿದ ನ್ಯಾಯಮೂರ್ತಿಗಳು
10:18 AM, 28 Sep

ಧಾರ್ಮಿಕವಾಗಿ ತೀರಾ ಸೂಕ್ಷ್ಮ ವಿಚಾರವಾದ ಶಬರಿಮಲೆ ಪ್ರಕರಣದಲ್ಲಿ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ದೇವಾಲಯದ ಆಡಳಿತ ಮಂಡಳಿಯ ಹೇಳಿಕೆಯನ್ನೂ ಪರಿಗಣಿಸಬೇಕು ಎಂದು ಆಡಳಿತ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ.
10:11 AM, 28 Sep

800 ವರ್ಷಗಳಿಂದ ಇದ್ದ ಈ ನಿಯಮವನ್ನು ಇಂಡಿಯನ್ ಯಂಗ್ ಅಸೋಸಿಯೇಷನ್ ಪ್ರಶ್ನಿಸಿತ್ತು.
10:01 AM, 28 Sep

ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ಧಾರ್ಮಿಕ ಹಕ್ಕಿದೆ. ಅದನ್ನು ನೆರವೇರಿಸಲು ಅವಕಾಶ ನೀಡಬೇಕು, ಇದಕ್ಕಾಗಿ ಕಾನೂನಿನ ಮೊರೆಹೋಗುವ ಅಗತ್ಯವಿಲ್ಲ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಚಂದ್ರಚೂಡ ಹೇಳಿದ್ದರು.
9:59 AM, 28 Sep

'ದೇವಾಲಯ ಖಾಸಗೀ ಸ್ವತ್ತಲ್ಲ, ಅದು ಸಾರ್ವಜನಿಕ ಆಸ್ತಿ. ನಿಮಗೆ ಬೇಕಾದಂತೆ ನಿಯಮ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಕಳೆದ ಜುಲೈ ನಲ್ಲಿ ಖಕಡಕ್ಕಾಗಿ ಹೇಳಿತ್ತು.
9:58 AM, 28 Sep

ಆದರೆ ದೇವಾಲಯದ ಆಡಳಿತ ಮಂಡಳಿ, 'ತಾನು ತಲತಲಾಂತರಗಳಿಂದ ಈ ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದು, ಇದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ' ಎಂದಿತ್ತು.
9:57 AM, 28 Sep

ಶಬರಿಮಲೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಕೇಳಿತ್ತು. ಆದರೆ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲು ತನ್ನ ಅಭ್ಯಂತರವೇನೂ ಇಲ್ಲ ಎಂದು ಕೇರಳ ಸರ್ಕಾರ ಹೇಳಿತ್ತು.
9:48 AM, 28 Sep

ಅಯ್ಯಪ್ಪ ದೇವಾಲಯದೊಳಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ 2006 ರಲ್ಲೇ ಪ್ರಕರಣ ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ 2016 ರಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
9:48 AM, 28 Sep

ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ ಪಂಚ ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ದೀಪಕ್ ಮಿಶ್ರಾ, ನ್ಯಾ. ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ ಮತ್ತು ನ್ಯಾ. ಇಂದು ಮಲ್ಹೋತ್ರಾ ಅವರಿದ್ದಾರೆ.

English summary
A Constitutional bench of Supreme Court to pronounce it's verdict on an important case of women entry into Sabarimala Temple in Kerala on Sep 28. LIVE:ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿಗೆ ಕ್ಷಣಗಣನೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X