ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.26ರಿಂದ ಸಂವಿಧಾನದ ವಿಧಿ 35(ಎ) ಕುರಿತ ಅರ್ಜಿ ವಿಚಾರಣೆ

|
Google Oneindia Kannada News

ನವದೆಹಲಿ, ಫೆಬ್ರವರಿ 26: ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಹಕ್ಕು, ಸವಲತ್ತುಗಳನ್ನು ಒದಗಿಸುವ ಸಂವಿಧಾನದ ವಿಧಿ 35(ಎ) ತೆಗೆದು ಹಾಕುವಂತೆ ಸಲ್ಲಿಸಿರುವ ಅರ್ಜಿ ವಿಚಾರಣೆಯು ಸುಪ್ರೀಂಕೋರ್ಟಿನಲ್ಲಿ ನಡೆಯಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠದಲ್ಲಿ ದೈನಂದಿನ ವಿಚಾರಣೆಗೆ ನಿರ್ಧರಿಸಲಾಗಿದೆ. ಫೆಬ್ರವರಿ 26 ರಿಂದ 28ರ ತನಕ ವಿಚಾರಣೆ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ವಿಶೇಷಾಧಿಕಾರ ಕಲಂ 35ಎ ಎಂದರೇನು? ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ ವಿಶೇಷಾಧಿಕಾರ ಕಲಂ 35ಎ ಎಂದರೇನು?

ಜಮ್ಮು-ಕಾಶ್ಮೀರದ ವಿಧಾನಸಭೆಗೆ ವಿಶೇಷ ಅಧಿಕಾರ ನೀಡಿ, ದೇಶದ ಸಂವಿಧಾನ ಹಾಗೂ ಕಾನೂನಿಗೆ ವ್ಯತಿರಿಕ್ತ ಕಾನೂನು ಜಾರಿಗೆ ಅವಕಾಶ ನೀಡಲಾಗಿದೆ. ಈ ವಿಧಿಯು ಸಂವಿಧಾನ ವಿರೋಧಿಯಾಗಿದೆ ಎಂದು ಪಶ್ಚಿಮ ಪಾಕಿಸ್ತಾನ ನಿರಾಶ್ರಿತರ ಕ್ರಿಯಾ ಸಮಿತಿ, ಡಾ ಚಾರು ವಾಲಿ ಖನ್ನ, ಕಾಳಿ ದಾಸ್ ಹಾಗೂ ರಾಧಿಕಾ ಗಿಲ್ ಅವರು ಅರ್ಜಿ ಸಲ್ಲಿಸಿದ್ದಾರೆ.

Supreme Court to hear Article 35A case between February 26 and 28

ಕಣಿವೆ ರಾಜ್ಯದಲ್ಲಿ ಸರ್ಕಾರಿ ನೇಮಕಾತಿ, ಸ್ಥಿರಾಸ್ತಿ ಖರೀದಿ, ಸರ್ಕಾರಿ ಯೋಜನೆಗಳ ಸೌಲಭ್ಯ, ಸಾರ್ವಜನಿಕ ಕಲ್ಯಾಣಭಿವೃದ್ಧಿ ಯೋಜನೆಗೆ ಲಾಭ ಖಾಯಂ ಆಗಿ ನೆಲೆಸಿರುವವರಿಗೆ ಸಿಕ್ಕಿತು. ಹೊರ ರಾಜ್ಯದಿಂದ ಬಂದು ನೆಲೆಸಿದವರಿಗೆ ಈ ಲಾಭ ಸಿಗುತ್ತಿರಲಿಲ್ಲ.

ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ. ಆದ್ದರಿಂದ, ಕಲಂ 35-ಎ ಸಿಂಧುತ್ವ ಪ್ರಶ್ನಿಸಿ, ಕಲಂ 35-ಎ ಅನ್ವಯ ಕಣಿವೆ ರಾಜ್ಯದಲ್ಲಿನ ಕೆಲವು ಜನರಿಗೆ ಆ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದನ್ನು ಹಿಂಪಡೆಯುವುದು ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲೂ ಇದೆ. ಈ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚುವರಿ 100 ಅರೆಸೇನಾ ತುಕಡಿಗಳನ್ನು ಆಯೋಜಿಸಲಾಗಿದೆ.

English summary
The Supreme Court (SC) to hear the petitions against Article 35A sometime between February 26 and 28 as per the weekly list of the apex court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X