ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ರೈತರ ಸಾಲ ಮನ್ನಾ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ತಮಿಳುನಾಡು ರೈತರ ಸಾಲ ಮನ್ನಾಕ್ಕೆ ತಡೆ. ಸುಪ್ರೀಂ ಕೋರ್ಟ್ ಆದೇಶ. ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ.

|
Google Oneindia Kannada News

ನವದೆಹಲಿ, ಜುಲೈ 3: ತಮಿಳುನಾಡು ರೈತರ ಸಾಲ ಮನ್ನಾ ವಿಚಾರವಾಗಿ ಅಲ್ಲಿನ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ವೈದ್ಯಕೀಯ ಪರೀಕ್ಷೆಗೆ ಅಮೆರಿಕಕ್ಕೆ ತೆರಳಿದ ನಟ ರಜನೀಕಾಂತ್ವೈದ್ಯಕೀಯ ಪರೀಕ್ಷೆಗೆ ಅಮೆರಿಕಕ್ಕೆ ತೆರಳಿದ ನಟ ರಜನೀಕಾಂತ್

ನ್ಯಾಯಾಲಯದ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತಡೆಯಾಜ್ಞೆಯನ್ನು ಜಾರಿಗೊಳಿಸಿದೆ.

Supreme Court stays Madras HC order to waive off farmer loans in Tamilnadu

ಇತ್ತೀಚೆಗೆ, ತಮಿಳುನಾಡಿನ ರೈತರು ನವದಹೆಲಿಯಲ್ಲಿ ಪ್ರತಿಭಟನೆ ನಡೆಸಿದ ಸಾಲಮನ್ನಾಗಿ ಆಗ್ರಹಿಸಿದ್ದರು. ಕೇಂದ್ರ ಸರ್ಕಾರವನ್ನು ಸೆಳೆಯುವ ಉದ್ದೇಶದಿಂದ ಅವರು ಪ್ರತಿಭಟನೆಯ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣವೊಂದು ದಾಖಲಾಗಿತ್ತು.

ಬೆತ್ತಲೆಯಾಗಿ ಪ್ರತಿಭಟಿಸಿ ತಮಿಳುನಾಡು ರೈತರ ಆಕ್ರೋಶಬೆತ್ತಲೆಯಾಗಿ ಪ್ರತಿಭಟಿಸಿ ತಮಿಳುನಾಡು ರೈತರ ಆಕ್ರೋಶ

ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಮಿಳುನಾಡಿನ ಬರಪೀಡಿತ ಪ್ರದೇಶಗಳ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕೆಂದು ಆದೇಶ ನೀಡಿತ್ತು. ಅಲ್ಲದೆ, ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಕೂಡ ಸಹಕಾರಿ ಬ್ಯಾಂಕ್ ಗಳು ಹಾಗೂ ಇತರ ಬ್ಯಾಂಕ್ ಗಳು ರೈತರ ಸಾಲ ಮನ್ನಾ ಮಾಡಬೇಕೆಂದು ಸೂಚನೆ ನೀಡಿತ್ತು.

ಆದರೆ, ನ್ಯಾಯಾಲಯದ ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಪಾರ ಹೊರೆಯಾಗಲಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸೋಮವಾರ, ತಮಿಳುನಾಡು ಸರ್ಕಾರದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ಹಾಗೂ ಮಧುರೈ ಪೀಠ ನೀಡಿದ್ದ ಆದೇಶಗಳಿಗೆ ತಡೆಯಾಜ್ಞೆ ನೀಡಿದೆ.

English summary
In a big setback to Tamil Nadu farmers, Supreme Court on Monday put a stay on a Madras High Court order directing E Palanisami government to waive farmers’ loans, irrespective of their land holding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X