ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದಿತ ಪತ್ನಿಗೆ ಪತಿಯ ವೇತನದ ಶೇ.25ರಷ್ಟು ಜೀವನಾಂಶ: ಸುಪ್ರೀಂ

|
Google Oneindia Kannada News

ನವದೆಹಲಿ, ಏಪ್ರಿಲ್ 21 : ಪತ್ನಿಗೆ ವಿಚ್ಛೇದನ ನೀಡುವ ಪತಿಯು ತನ್ನ ಸಂಬಳದಲ್ಲಿ ಶೇಕಡಾ 25ರಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಿಚ್ಛೇದಿತ ಮಹಿಳೆ ಘನತೆಯಿಂದ ಬದುಕಲು ಬೇಕಾಗುವಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ ಅಥವಾ ಶಾಶ್ವತ ಜೀವನಾಂಶವಾಗಿ ಪತಿಯ ಸಂಬಳದ ಶೇ. 25ರಷ್ಟು ಹಣವನ್ನು ನೀಡುವುದು ಉತ್ತಮ ಎಂದು ಕೋರ್ಟ್ ಹೇಳಿದೆ.

Supreme Court sets alimony benchmark: 25% of ex-husband’s net salary

2003ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದ ಪಶ್ಚಿಮ ಬಂಗಾಳದ ಹೂಗ್ಲಿಯ ಕಲ್ಯಾಣ್ ದೇ ಚೌಧರಿ ಅವರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಪರಮೋಚ್ಛ ನ್ಯಾಯಾಲಯ ಶುಕ್ರವಾರ ಈ ಆದೇಶ ನೀಡಿದೆ.

ಸದ್ಯ 95 ಸಾವಿರ ರೂಪಾಯಿ ಸಂಬಳ ಪಡೆಯೋ ಕಲ್ಯಾಣ್, ವಿಚ್ಛೇದಿತ ಪತ್ನಿ ರೀಟಾ ಹಾಗೂ ಮಗನಿಗೆ 23 ಸಾವಿರ ರೂಪಾಯಿ ಜೀವನಾಂಶ ಕೊಡಬೇಕೆಂದು ಕೋಲ್ಕತ್ತಾ ಹೈಕೋರ್ಟ್ ಆದೇಶ ಮಾಡಿತ್ತು.

ಇದರ ವಿರುದ್ಧ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಲ್ಯಾಣ್ ಅವರು ಮತ್ತೊಂದು ಮದುವೆಯಾಗಿದ್ದು, ಹೊಸ ಕುಟುಂಬದ ನಿರ್ವಹಣೆ ಮಾಡಬೇಕಿರುವ ಕಾರಣ 3 ಸಾವಿರ ರು. ಕಡಿತಗೊಳಿಸಿ 20 ಸಾವಿರ ರು. ಜೀವನಾಂಶ ನೀಡಲು ಆದೇಶಿಸಿದೆ.

English summary
The Supreme Court has set a benchmark for maintenance to be paid by a husband to his estranged wife, stating that 25% of his net salary might constitute a "just and proper" amount as alimony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X