ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ: ಸುಪ್ರೀಂ

|
Google Oneindia Kannada News

ನವದೆಹಲಿ, ಜುಲೈ 26: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.

ಇನ್ನುಮುಂದೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ರಾಜ್ಯದಲ್ಲಿ ಮದ್ಯ ಖರೀದಿಗೆ ಸಮಯ ವಿಸ್ತರಿಸಿದ ಸಿಎಂ ಯಡಿಯೂರಪ್ಪರಾಜ್ಯದಲ್ಲಿ ಮದ್ಯ ಖರೀದಿಗೆ ಸಮಯ ವಿಸ್ತರಿಸಿದ ಸಿಎಂ ಯಡಿಯೂರಪ್ಪ

ಹೆದ್ದಾರಿಗಳಿಂದ 500 ಮೀಟರ್ ಅಂತರದೊಳಗೆ ಯಾವುದೇ ಮದ್ಯದಂಗಡಿಗಳೂ ಇರುವಂತಿಲ್ಲ ಎಂದು ಆದೇಶಿಸಲಾಗಿದೆ. ಅಂತೆಯೇ, ಸ್ಥಳೀಯ ಆಡಳಿತದ ವ್ಯಾಪ್ತಿಯಲ್ಲಿರುವ ಹಾಗೂ 20,000ಕ್ಕಿಂತ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದ 220 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮದ್ಯವನ್ನು ಮಾರಾಟ ಮಾಡುವಂತಿಲ್ಲ ಎಂದೂ ತಿಳಿಸಿದೆ.

Supreme Court Says No More Liquor Shops Along National And State Highways

ಹೀಗಾಗಿ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಎಷ್ಟು ಮದ್ಯದಂಗಡಿಗಳಿವೆ, ಎಷ್ಟು ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ಬಗ್ಗೆ ಯಾವುದೇ ಅಂಕಿ-ಅಂಶಗಳನ್ನು ಕಲೆಹಾಕಿಲ್ಲ. ಈ ಕೆಲಸವನ್ನು ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಲಿವೆ.

ಸುಪ್ರೀಂ ಕೋರ್ಟ್​ನಿಂದ ಈ ಆದೇಶ ಘೋಷಣೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಆದೇಶವನ್ನು ಕಳುಹಿಸಿದೆ.

ಮದ್ಯದಂಗಡಿಗಳಿಗೆ ಪರವಾನಗಿ ನೀಡುವಾಗ ಸುಪ್ರೀಂ ಕೋರ್ಟ್​ ನೀಡಿರುವ ನಿರ್ದೇಶನವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದೆ.

ಹಾಗೆಯೇ, ಕುಡಿದು ವಾಹನ ಚಲಾಯಿಸುವವರಿಗೆ ನೀಡಲಾಗುವುದನ್ನು ತಡೆಯಲು ಸೂಕ್ತ ಅಭಿಯಾನಗಳನ್ನು ನಡೆಸಲು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಈ ಕುರಿತು ಪತ್ರಿಕೆಗಳು ಹಾಗೂ ಚಾನೆಲ್​ಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮುಂದಾಗಿದೆ.

English summary
The Supreme Court issued directions regarding stopping the grant of licenses for the sale of liquor along national and state highways and over a distance of 500 metres from the outer edge of the national or state highways or of a service lane along the highway..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X