ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದರಲ್ಲಿ ಹಲ್ಲೇ ಇಲ್ಲವಲ್ಲ?: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

|
Google Oneindia Kannada News

ನವದೆಹಲಿ, ಮಾರ್ಚ್ 5: ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ ವಿಡಿಯೋದಂತಹ ಓವರ್ ದಿ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಮಾರ್ಗಸೂಚಿಗೆ ಹಲ್ಲೇ ಇಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಟೀಕಿಸಿದೆ. ಈ ಮಾರ್ಗಸೂಚಿಯ ಪ್ರಕಾರ ತಪ್ಪಿತಸ್ಥ ಸಂಸ್ಥೆಗಳು ಅಥವಾ ವ್ಯಕ್ತಿಗಳಳ ಮೇಲೆ ಕಾನೂನು ಕ್ರಮ ಜರುಗಿಸುವ ಅವಕಾಶವನ್ನೇ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಒಟಿಟಿ ವೇದಿಕೆಗಳನ್ನು ನಿಯಂತ್ರಿಸಲು ಇಂತಹ ಸಾಮಾನ್ಯ ಮಾರ್ಗಸೂಚಿಗಳ ಬದಲು ಸೂಕ್ತ ವ್ಯವಸ್ಥೆಯನ್ನು ಸ್ಥಾಪಿಸಲು ಕಠಿಣವಾದ ಕಾನೂನು ರೂಪಿಸುವ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಒಟಿಟಿಯಲ್ಲಿ ಪೊರ್ನೊಗ್ರಫಿಯೂ ಪ್ರಸಾರವಾಗುತ್ತಿದೆ, ಹೀಗಾಗಿ ನಿಯಂತ್ರಣ ಅಗತ್ಯ: ಸುಪ್ರೀಂಕೋರ್ಟ್ಒಟಿಟಿಯಲ್ಲಿ ಪೊರ್ನೊಗ್ರಫಿಯೂ ಪ್ರಸಾರವಾಗುತ್ತಿದೆ, ಹೀಗಾಗಿ ನಿಯಂತ್ರಣ ಅಗತ್ಯ: ಸುಪ್ರೀಂಕೋರ್ಟ್

ಶುಕ್ರವಾರ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್, ವೆಬ್ ಸರಣಿ 'ತಾಂಡವ್' ವಿವಾದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ಗೆ ಒಳಗಾಗಿರುವ ಅಮೇಜಾನ್ ಪ್ರೈಂ ವಿಡಿಯೋದ ಭಾರತೀಯ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಅವರಿಗೆ ಬಂಧನದಿಂದ ರಕ್ಷಣೆಯನ್ನು ನೀಡಿತು.

ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದಿಂದ ನೀತಿ ಸಂಹಿತೆ, ಕರಡು ನಿಯಮ ಸಿದ್ಧಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರದಿಂದ ನೀತಿ ಸಂಹಿತೆ, ಕರಡು ನಿಯಮ ಸಿದ್ಧ

ಸಚಿವಾಲಯದ ಸೂಚನೆಯಂತೆ ಈಗಾಗಲೇ ಆ ಎರಡು ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕಲಾಗಿದೆ ಎಂದು ಅಮೇಜಾನ್ ಪ್ರೈಂ ವಿಡಿಯೋ ಹಾಗೂ ಅಪರ್ಣಾ ಪುರೋಹಿತ್ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ತಿಳಿಸಿದರು.

ಪೋರ್ನೊಗ್ರಫಿ ಪ್ರಸಾರ ಮಾಡುತ್ತಿಲ್ಲ

ಪೋರ್ನೊಗ್ರಫಿ ಪ್ರಸಾರ ಮಾಡುತ್ತಿಲ್ಲ

'ನ್ಯಾಯಮೂರ್ತಿಗಳು ನಿನ್ನ ಹಂಚಿಕೊಂಡ ಅಭಿಪ್ರಾಯವು ಎಲ್ಲೆಡೆಯೂ ಸುದ್ದಿಯಾಗಿದೆ. ನಾವು ಪೋರ್ನೊಗ್ರಫಿ ತೋರಿಸುವುದಿಲ್ಲ. ಅಮೇಜಾನ್ ಮತ್ತು ನೆಟ್‌ಫ್ಲಿಕ್ಸ್‌ಗಳು ಜಗತ್ತಿನಾದ್ಯಂತ ಪ್ರಸಾರವಾಗುತ್ತಿವೆ. ಅದರಲ್ಲಿ ಯಾವುದೇ ಪೋರ್ನೊಗ್ರಫಿ ಇಲ್ಲ. ಈ ವೇದಿಕೆಗಳಲ್ಲಿ ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗುತ್ತವೆ' ಎಂದು ರೋಹಟಗಿ ಹೇಳಿದರು.

ಬರಿ ಮಾರ್ಗಸೂಚಿಯಷ್ಟೇ ಇದೆ

ಬರಿ ಮಾರ್ಗಸೂಚಿಯಷ್ಟೇ ಇದೆ

ಕೇಂದ್ರ ಸರ್ಕಾರವು ರೂಪಿಸಿರುವ ಮಾರ್ಗಸೂಚಿಯು ಸಮಸ್ಯೆಗಳನ್ನು ಎದುರಿಸುವಷ್ಟು ಪ್ರಬಲ ಹಲ್ಲುಗಳನ್ನು ಹೊಂದಿಲ್ಲ. ಅದು ಕೇವಲ ಮಾರ್ಗಸೂಚಿ ರೂಪದಲ್ಲಷ್ಟೇ ಇದೆ ಎಂದು ಹೇಳಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ, ಕಠಿಣ ಕಾನೂನು ರೂಪಿಸುವುದನ್ನು ಪರಿಗಣಿಸುವಂತೆ ಸೂಚಿಸಿತು.

ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿ

ಸರ್ಕಾರದಿಂದ ಪರಿಗಣನೆ

ಸರ್ಕಾರದಿಂದ ಪರಿಗಣನೆ

ನಿಯಮಗಳನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶ ಇರಬೇಕು. ಹೀಗಾಗಿ ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಿಯಂತ್ರಣ ಕಾನೂನಿನ ಅಗತ್ಯವಿದೆ ಎಂಬ ಸುಪ್ರೀಂಕೋರ್ಟ್ ಸಲಹೆಗಳನ್ನು ಒಪ್ಪಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಠಿಣ ಕಾನೂನುಗಳನ್ನು ತಯಾರಿಸುವುದನ್ನು ಸರ್ಕಾರ ಖಂಡಿತವಾಗಿಯೂ ಪರಿಗಣಿಸಲಿದೆ. ಕರಡು ಕಾನೂನನ್ನು ನ್ಯಾಯಾಲಯದ ಮುಂದೆ ಇರಿಸಲಿದೆ ಎಂದು ತಿಳಿಸಿದರು.

ಪೋರ್ನೊಗ್ರಫಿ ಪ್ರಸಾರ

ಪೋರ್ನೊಗ್ರಫಿ ಪ್ರಸಾರ

ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ವೆಬ್ ಕಾರ್ಯಕ್ರಮಗಳು, ಸಿನಿಮಾಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಕೆಲವು ಪ್ರಕರಣಗಳಲ್ಲಿ, ಅಂತಹ ವೇದಿಕೆಗಳಲ್ಲಿ ಪೋರ್ನೊಗ್ರಫಿಯನ್ನೂ ಪ್ರಸಾರ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿತ್ತು. ಸಾಮಾಜಿಕ ಮಾಧ್ಯಮಗಳು ಹಾಗೂ ಒಟಿಟಿಯನ್ನು ನಿಯಂತ್ರಿಸಲು ಸರ್ಕಾರ ರೂಪಿಸಿರುವ ಮಾರ್ಗಸೂಚಿಯನ್ನು ತನಗೆ ತೋರಿಸುವಂತೆ ಸೂಚಿಸಿತ್ತು. ಜತೆಗೆ ಅಪರ್ಣಾ ಪುರೋಹಿತ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕಾಯ್ದಿರಿಸಿತ್ತು.

English summary
The Supreme Court on Friday said, the Centre's guidelines for social media and OTT platforms have no teeth as there is no provision of prosecution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X