ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bullet Point ಸುದ್ದಿ: ಲಸಿಕೆ ನೀತಿ ಬಗ್ಗೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಜೂನ್ 01: ಕೊರೊನೊವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಎಡವಿದ್ದೆಲ್ಲಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ಸೋಮವಾರ ಸುಮೋಟೋ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಎಸ್.ರವೀಂದ್ರ ಭಟ್ ಮತ್ತು ಎಲ್ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿದೆ.

ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್

ಕೊರೊನಾವೈರಸ್‌ಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣ, ಔಷಧಿ ಹಾಗೂ ಲಸಿಕೆ ಪೂರೈಸುವಲ್ಲಿ ಸರ್ಕಾರ ಮಾಡಿರುವ ತಪ್ಪುಗಳೇನು ಎಂಬುದರ ಬಗ್ಗೆ ಹಲವು ಪ್ರಶ್ನೆಗಳನ್ನು ಹಾಕಿದೆ. ಮುಂದಿನ ಎರಡು ವಾರಗಳಲ್ಲಿ ಸುಪ್ರೀಂಕೋರ್ಟ್ ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಖಡಕ್ ಸೂಚನೆಯನ್ನು ನೀಡಿದೆ. ಹಾಗಿದ್ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೇಳಿರುವ ಪ್ರಶ್ನೆಗಳೇನು ಎಂಬುದರ ಪಟ್ಟಿ ಇಲ್ಲಿದೆ ಓದಿ.

Supreme Court resumed hearing suo motu case on COVID-19 crisis in the country

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆಗಳು:

* ಕಡ್ಡಾಯ ನೋಂದಣಿ: "ಜಾರ್ಖಂಡ್‌ನ ಅನಕ್ಷರಸ್ಥ ಕಾರ್ಮಿಕನೊಬ್ಬ ರಾಜಸ್ಥಾನದಲ್ಲಿ ಹೇಗೆ ತಾನೇ ಹೆಸರು ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತದೆ? ಈ ಡಿಜಿಟಲ್ ವಿಭಜನೆಯನ್ನು ನೀವು ಹೇಗೆ ಪರಿಹರಿಸುತ್ತೀರಿ ಎಂಬುದನ್ನು ತಿಳಿಸಿ?"

* ತಾರತಮ್ಯ: ದೇಶದ ಜನಸಂಖ್ಯೆಯಲ್ಲಿ 45 ವರ್ಷ ಮೇಲ್ಪಟ್ಟವರಿಗಾಗಿ ಲಸಿಕೆ ಸಂಗ್ರಹಿಸಲಾಗುತ್ತಿದ್ದು, 18-44 ವಯೋಮಾನದವರನ್ನು ವಿಭಜಿಸಲಾಗಿದೆ. ಇದಕ್ಕೆ ಆಧಾರವೇನು?. ನಿಮ್ಮ ವಾದದ ಪ್ರಕಾರ, 45 ವರ್ಷ ಮೇಲ್ಪಟ್ಟವರಿಗೆ ಸಾವಿನ ಅಪಾಯ ಹೆಚ್ಚಾಗಿರುತ್ತದೆ. ಆದರೆ ಎರಡನೇ ಅಲೆಯಲ್ಲಿ ಈ ಗುಂಪಿನವರಿಗೆ ಅಷ್ಟಾಗಿ ಅಪಾಯ ಎದುರಾಗಿಲ್ಲ. 18-44 ವರ್ಷದವರಿಗೆ ಅಪಾಯ ಹೆಚ್ಚಾಗಿದೆ. ನಿಮ್ಮ ಉದ್ದೇಶ ಲಸಿಕೆ ಸಂಗ್ರಹಿಸುವುದೇ ಆಗಿದ್ದರೆ, ಅದು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಏಕೆ ನೀಡಬೇಕು.

* ನೀತಿ: ಇದು ರಾಜ್ಯ ಸರ್ಕಾರ ಅಥವಾ ಮಹಾನಗರ ಪಾಲಿಕೆಗಳು ಲಸಿಕೆ ಸಂಗ್ರಹಿಸುವ ನೀತಿಯೇ ಅಥವಾ ಕೇಂದ್ರ ಸರ್ಕಾರವೇ ಅವುಗಳ ಪಾಲಿಗೆ ನೋಡಲ್ ಏಜೆನ್ಸಿಯಂತೆ ಲಸಿಕೆ ಸಂಗ್ರಹಿಸಲಿದೆಯೇ? ಈ ನೀತಿಯ ಹಿಂದಿನ ಸ್ಪಷ್ಟತೆ ಮತ್ತು ತಾರ್ಕಿಕತೆಯನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ".

* ಕೇಂದ್ರದ ಪಾತ್ರ: ಸಂವಿಧಾನದ 1ನೇ ವಿಧಿಯ ಪ್ರಕಾರ, ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಹೇಳುತ್ತದೆ. ಯಾವಾಗ ಸಂವಿಧಾನವು ಈ ಬಗ್ಗೆ ಹೇಳುತ್ತದೆಯೋ ಅಂದಿನಿಂದ ನಾವು ಸಂಯುಕ್ತ ರಾಷ್ಟ್ರಗಳ ನಿಯಮವನ್ನು ಪಾಲನೆ ಮಾಡಬೇಕು. ಸರ್ಕಾರವೇ ಲಸಿಕೆಯನ್ನು ಸಂಗ್ರಹಿಸಿ ಅದನ್ನು ಹಂಚಿಕೆ ಮಾಡಬೇಕು. ವೈಯಕ್ತಿಕ ರಾಜ್ಯಗಳೇ ಎಲ್ಲರಿಗಿಂತ ಮುಂದಿರುವಂತೆ ಬಿಡುವುದಲ್ಲ. ನಿಮ್ಮನ್ನು ನೀವು ಒಂದು ರಾಷ್ಟ್ರೀಯ ಸಂಸ್ಥೆ ಎಂದು ಭಾವಿಸಿ ಲಸಿಕೆಯನ್ನು ರಾಜ್ಯಗಳಿಗಾಗಿ ಸಂಗ್ರಹಿಸುತ್ತಿರೋ ಅಥವಾ ರಾಜ್ಯಗಳನ್ನು ಅದರಿಷ್ಟಕ್ಕೆ ಬಿಡುತ್ತೀರೋ?

* ಲಸಿಕೆ ಬೆಲೆ: "ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಕೊರೊನಾವೈರಸ್ ಲಸಿಕೆಯನ್ನು ಖರೀದಿಸುವುದರಿಂದ ಅದರ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳುತ್ತದೆ. ಇದು ತಾರ್ಕಿಕವಾಗಿದ್ದರೆ, ರಾಜ್ಯಗಳು ಏಕೆ ಹೆಚ್ಚಿನ ಬೆಲೆಯನ್ನು ನೀಡಿ ಲಸಿಕೆಯನ್ನು ಖರೀದಿಸಬೇಕು. ದೇಶಾದ್ಯಂತ ಲಸಿಕೆಗಳಿಗೆ ಒಂದು ಬೆಲೆ ಇರಬೇಕಲ್ಲವೇ?."

* ಸಾಮರ್ಥ್ಯ: 18 ರಿಂದ 45 ವಯೋಮಾನದ ಶೇ.50ರಷ್ಟು ಜನರಿಗೆ ಲಸಿಕೆಯನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನಾವು ಹೇಳಬಹುದೇ? ಇಲ್ಲ. ಹಾಗಿದ್ದಲ್ಲಿ ಈ ವಯೋಮಾನದ ಉಳಿದ ಲಸಿಕೆ ಪಡೆಯಲಾಗದ ಜನರನ್ನು ನಾವು ಹೇಗೆ ನೋಡುತ್ತೇವೆ.

English summary
The Supreme Court resumed hearing in the suo motu case on Covid-19 crisis management in the country. Some of the questions it asked the Centre also highlights why its vaccination policy has come under criticism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X