• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ ವರ್ಷ ವಲಸೆ ಕಾರ್ಮಿಕರ ವಿಷಯದಲ್ಲೂ ಸುಪ್ರೀಂ ಹೀಗೆಯೇ ಮಾಡಿತ್ತು

|

ನವದೆಹಲಿ, ಏಪ್ರಿಲ್ 23: ಹೈಕೋರ್ಟ್‌ಗಳು ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ಸರ್ಕಾರಗಳ ಬಗೆಗೆ ವಿಮರ್ಶಾತ್ಮಕ ಅವಲೋಕನ ಮಾಡಿವೆ.

ಏಪ್ರಿಲ್ 16 ರಂದು ಬಾಂಬೆ ಹೈಕೋರ್ಟ್ ನಾಗ್ಪುರ ನ್ಯಾಯಪೀಠವು ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಲಭ್ಯತೆಯ ಕೊರತೆ ಬಗ್ಗೆ ತಿಳಿದುಕೊಂಡಿದೆ. ಕೋವಿಡ್ 19 ಬಿಕ್ಕಟ್ಟನ್ನು ನಿಭಾಯಿಸುವ ಕುರಿತು 2020ರಲ್ಲಿ ಆದ ಘಟನೆಯನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ.

ಏಪ್ರಿಲ್ 20 ರಂದು ದೆಹಲಿ ಹೈಕೋರ್ಟ್ ವಿಶೇಷ ಪೀಠವನ್ನು ಸ್ಥಾಪಿಸಿದೆ. ಇದು ಕೋವಿಡ್ 19ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಆರಂಭಿಸಿದೆ. ವಿಶೇಷವಾಗಿ ಆಮ್ಲಜನಕ ಕೊರತೆ ವಿಚಾರವಾಗಿ ಭಿಕ್ಷೆ ಬೇಡಿ, ಕಳ್ಳತನ ಮಾಡಿ ಹೇಗಾದರೂ ಆಮ್ಲಜನಕ ಹೊಂದಿಸಿ ಎಂದು ಸರ್ಕಾರಕ್ಕೆ ಛಾಟಿ ಬೀಸಿದೆ.

ಆಮ್ಲಜನಕವನ್ನು ಭಿಕ್ಷೆ ಬೇಡುತ್ತೀರೋ, ಸಾಲಕ್ಕೆ ತರುತ್ತೀರೋ, ಕದ್ದು ತರುತ್ತೀರೋ ತನ್ನಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ದೇಶದ ಜನರು ಆಕ್ಸಿಜನ್ ಸಿಗದೆ ಸಾಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಿಜಕ್ಕೂ ಖೇದದ ಸಂಗತಿ. ಜನರ ಜೀವಕ್ಕೆ ಬೆಲೆ ಇಲ್ಲವೆ? ನೀವು ದೊಡ್ಡ ದುರಂತದತ್ತ ಸಾಗುತ್ತಿದ್ದೀರಿ ಎಂದು ನ್ಯಾಯಾಧೀಶರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಆಮ್ಲಜನಕವನ್ನು ಕೈಗಾರಿಕೆಗಳಿಗೆ ಬಳಸಲು ಅವಕಾಶ ನೀಡಿರುವುದಕ್ಕೆ ಆಕ್ರೋಶಗೊಂಡಿರುವ ದೆಹಲಿ ಹೈಕೋರ್ಟ್ ವಾಸ್ತವ ಅರ್ಥ ಮಾಡಿಕೊಳ್ಳಲು ನಿಮಗೇನು ದಾಡಿ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಹಾಗೆಯೇ ಅಲಹಾಬಾದ್ ಹೈಕೋರ್ಟ್ ಏಪ್ರಿಲ್ 13 ರಂದು ಉತ್ತರ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಕಾರಣ ಐದು ಜಿಲ್ಲೆಗಳಿಗೆ ಲಾಕ್‌ಡೌನ್ ಮಾಡಿ ಎಂದು ಸಲಹೆ ನೀಡಿದ್ದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಇನ್ನು ಅಲಹಾಬಾದ್ ಹೈಕೋರ್ಟ್ ಹೊರತಾಗಿಯೂ ಕರ್ನಾಟಕ ಹಾಗೂ ಮದ್ರಾಸ್ ಹೈಕೋರ್ಟ್‌ಗಳು ಕೂಡ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ಆಲಿಸುತ್ತಿವೆ.

ಪ್ರಕರಣ ವಿಚಾರಣೆ ಕೊರೊನಾ ಸೋಂಕಿನಿಂದಾಗಿ ಹುಟ್ಟಿಕೊಂಡ ವಲಸೆ ಬಿಕ್ಕಟ್ಟಿಗೆ ಹೋಲುತ್ತದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹಲವಾರು ಕೋರ್ಟ್‌ಗಳು ಹಾಗೂ ಅಧಿಕಾರಿಗಳು ಸರ್ಕಾರಗಳ ವಿರುದ್ಧ ಪ್ರಶ್ನೆ ಮಾಡಿದ ಹಲವು ವಾರಗಳ ಬಳಿಕ ಸುಪ್ರೀಂಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಂಡಿತ್ತು.

ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವುದು, ಕಾರ್ಮಿಕರ ನೋಂದಣಿ, ಕಾರ್ಮಿಕರ ಸಂಖ್ಯೆ ಕುರಿತ ಹಲವು ಮಾಹಿತಿಗಳನ್ನು ರಾಜ್ಯ ಸರ್ಕಾರ ಇನ್ನೂ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

English summary
The High Courts have issued a slew of orders and made critical observations on the way the crisis is being managed by governments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X