ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣಗಳ ಮೇಲೆ ಕಡಿವಾಣಕ್ಕೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಅದಿರಂದಾಗುತ್ತಿರುವ ಋಣಾತ್ಮಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಜಾಲತಾಣಗಳ ಮೇಲೆ ಕಡಿವಾಣ ಹಾಕಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಸ್ಪಷ್ಟ ಮಾನದಂಡಗಳನ್ನು ಕೇಂದ್ರ ಸರ್ಕಾರ ರಚಿಸಬೇಕು ಎಂದು ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿತು. ಮಾನದಂಡಗಳನ್ನು ರಚಿಸಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಮೂರು ವಾರದೊಳಗೆ ಕೋರ್ಟ್‌ಗೆ ತಿಳಿಸಬೇಕು ಎಂದು ಸುಪ್ರೀಂ ಹೇಳಿದೆ.

ವೈರಲ್ ವಿಡಿಯೋ: ಕೇಳಲೇ ಬೇಕಾದ ಪಿಯುಸಿ ವಿದ್ಯಾರ್ಥಿಯ ಭಾಷಣವೈರಲ್ ವಿಡಿಯೋ: ಕೇಳಲೇ ಬೇಕಾದ ಪಿಯುಸಿ ವಿದ್ಯಾರ್ಥಿಯ ಭಾಷಣ

ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಅದರ ನಕಾರಾತ್ಮಕ ಬಳಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಹರಿಯಬಿಡಲಾದ ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಮೂಲ ಪತ್ತೆಹಚ್ಚಿಕೊಡುವಂತೆ ಸರ್ಕಾರವು ಫೇಸ್‌ಬುಕ್ ಮತ್ತಿತರ ಸಂಬಂಧಿತ ಸಂಸ್ಥೆಗಳನ್ನೇಕೆ ಕೇಳುತ್ತಿಲ್ಲ ಎಂದು ಸುಪ್ರೀಂ ಪ್ರಶ್ನೆ ಮಾಡಿದೆ.

Supreme Court Indicates Central Government To Frame Guidlines For Social Media

ಕೇಂದ್ರ ಸರ್ಕಾರವು ಕೂಡಲೇ ಸಕ್ರಿಯಯಾಗಿ ಸಾಮಾಜಿಕ ಜಾಲತಾಣ ದುರ್ಬಳಕೆಗೆ ಕಡಿವಾಣ ಹಾಕಬೇಕು ಎಂದ ಸುಪ್ರೀಂ, ಹೈಕೋರ್ಟ್ ಆಗಲಿ ಸುಪ್ರೀಂಕೋರ್ಟ್ ಆಗಲಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿತು.

ಮೆಕ್ಸಿಕೊ ತಲುಪಿದ ಬಾದಲ್ ನಂಜುಂಡಸ್ವಾಮಿ ಸೃಜನಶೀಲತೆಮೆಕ್ಸಿಕೊ ತಲುಪಿದ ಬಾದಲ್ ನಂಜುಂಡಸ್ವಾಮಿ ಸೃಜನಶೀಲತೆ

ಕೇವಲ ಅರ್ಧಗಂಟೆಯಲ್ಲಿ ಆನ್‌ಲೈನ್‌ನಲ್ಲಿ ಎಕೆ 47 ಬಂದೂಕು ಖರೀದಿಸಬಹುದು ಎನ್ನಲಾಗುತ್ತಿದೆ. ಭಯೋತ್ಪಾದನೆ, ದ್ವೇಷ ಭಾಷಣ, ಲೈಂಗಿಕತೆ ಪ್ರಚೋದಿಸುವ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ, ಟ್ರಾಲ್ ಹೆಸರಲ್ಲಿ ವ್ಯಕ್ತಿಯ ವೈಯಕ್ತಿಕ ಘನತೆಗೆ ಧಕ್ಕೆ ತರುವುದು ಸಹಿಸುವುದು ಹೇಗೆ ಸಾಧ್ಯ ಎಂದು ಸುಪ್ರೀಂಕೋರ್ಟ್‌ನ ದ್ವಿದಸ್ಯ ಪೀಠವು ಅಭಿಪ್ರಾಯಪಟ್ಟಿತು.

ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?

ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ದೀಪಕ್ ಗುಪ್ತಾ ಆದೇಶ ನೀಡುತ್ತಾ, 'ಸ್ಮಾರ್ಟ್‌ ಫೋನ್ ತ್ಯಜಿಸಿ ಬೇಸಿಕ್ ಫೋನ್‌ ಇಟ್ಟುಕೊಳ್ಳೋಣ ಎಂದುಕೊಳ್ಳುತ್ತಿದ್ದೇನೆ' ಎಂದು ಅಭಿಪ್ರಾಯಪಟ್ಟರು.

English summary
Supreme court yesterday ask central government to frame guidelines for social media. Supreme court express its fear about negative use of social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X