ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್-ಜೆಡಿಎಸ್ ಗೆ ಮುಖಭಂಗ : ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಕೆ

By Prasad
|
Google Oneindia Kannada News

Recommended Video

ಬೋಪಯ್ಯ ಟ್ರ್ಯಾಕ್ ರೆಕಾರ್ಡ್ ಕೆಟ್ಟದಾಗಿದೆಯಂತ ಸುಪ್ರೀಂ ಮೊರೆ ಹೋದ್ರು | Oneindia Kannada

ನವದೆಹಲಿ, ಮೇ 19 : ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರನ್ನಾಗಿ ಮುಂದುವರಿಯಲು ಬಿಡಬಾರದು ಎಂಬ ಕಾಂಗ್ರೆಸ್-ಜೆಡಿಎಸ್ ವಾದಕ್ಕೆ ಸುಪ್ರೀಂಕೋರ್ಟಿನಲ್ಲಿ ಸೋಲಾಗಿದ್ದು, ಬೋಪಯ್ಯ ಅವರೇ ಮುಂದುವರಿಯಲಿದ್ದಾರೆ. ಇದು ಬಿಜೆಪಿಗೆ ಸಿಕ್ಕ ಜಯ.

ಕಾನೂನುಬದ್ಧವಾಗಿ ನೇಮಕವಾದ ಕೆಜಿ ಬೋಪಯ್ಯ ಅವರ ನೇಮಕಾತಿಯನ್ನು ರದ್ದುಪಡಿಸಬೇಕೆಂದರೆ ವಿಶ್ವಾಸಮತವನ್ನೂ ಮುಂದೂಡಬೇಕಾಗುತ್ತದೆ ಎಂದು ಸಿಬಲ್ ಅವರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ವಿಶ್ವಾಸಮತವನ್ನು ಲೈವ್ ಪ್ರಸಾರ ಮಾಡಿದರೆ ಪಾರದರ್ಶಕತೆಯನ್ನು ಕಾಪಾಡಬಹುದು ಎಂದೂ ಸೂಚನೆ ನೀಡಿದೆ.

ಹಿಂದಿನ ಸುದ್ದಿ : ಹಂಗಾಮಿ ವಿಧಾನ ಸಭಾಧ್ಯಕ್ಷರನ್ನಾಗಿ ಕೆಜಿ ಬೋಪಯ್ಯ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಿಕ್ರಿ, ಬೊಬ್ಡೆ ಮತ್ತು ಅಶೋಕ್ ಭೂಷಣ ಅವರ ವಿಭಾಗೀಯ ಪೀಠ ಆರಂಭಿಸಿದೆ.

ಬಿಜೆಪಿ ಪರವಾಗಿ ಅಟಾರ್ನಿ ಜನರಲ್ ವೇಣುಗೋಪಾಲ್ ಮತ್ತು ಮುಕುಲ್ ರೋಹಟ್ಗಿ ಅವರು ವಾದ ಮಂಡಿಸುತ್ತಿದ್ದರೆ, ಕಾಂಗ್ರೆಸ್-ಜೆಡಿಎಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಮತ್ತು ರಾಮ್ ಜೇಠ್ಮಲಾನಿ ಅವರು ವಾದ ಮಂಡಿಸುತ್ತಿದ್ದಾರೆ.

ಹಂಗಾಮಿ ಸ್ಪೀಕರಾಗಿ ಬೋಪಯ್ಯ : ಸುಪ್ರೀಂನಲ್ಲಿ ವಿಚಾರಣೆಹಂಗಾಮಿ ಸ್ಪೀಕರಾಗಿ ಬೋಪಯ್ಯ : ಸುಪ್ರೀಂನಲ್ಲಿ ವಿಚಾರಣೆ

ಬೋಪಯ್ಯ ಅವರ ಟ್ರಾಕ್ ರೆಕಾರ್ಡ್ ಸರಿಯಾಗಿಲ್ಲದ ಕಾರಣ ಅವರನ್ನು ಹಂಗಾಮಿ ಸ್ಪೀಕರ್ ಅನ್ನಾಗಿ ನೇಮಕ ಮಾಡಬಾರದು. ಅಲ್ಲದೆ ರಾಜ್ಯಪಾಲ ವಜುಭಾಯಿ ವಾಲಾ ಅವರು ತಮ್ಮ ಇತಿಮಿತಿಯನ್ನು ಮೀರಿದ್ದಾರೆ ಆರೋಪಿಸಿ ಎಂದು ಎಚ್ ಡಿ ಕುಮಾರಸ್ವಾಮಿ ಪರವಾಗಿ ಕಪಿಲ್ ಸಿಬಲ್ ಅವರು ವಾದ ಮಾಡುತ್ತಿದ್ದಾರೆ.

Supreme Court hearing on interim speaker KG Bopaiah

ಹದಿನಾರು ಶಾಸಕರನ್ನು 2010ರಲ್ಲಿ ಅನರ್ಹಗೊಳಿಸಿದ್ದಾಗ ಸರ್ವೋಚ್ಚ ನ್ಯಾಯಾಲಯ ಆ ಆದೇಶವನ್ನು ವಜಾಗೊಳಿಸಿತ್ತು ಮತ್ತು ಬೋಪಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಎರಡು ಬಾರಿ ಅವರ ವಿರುದ್ಧವೇ ತೀರ್ಪು ಬಂದಿದೆ. ಅಲ್ಲದೆ ಅವರಿಗಿಂತ ಹಿರಿಯರಿದ್ದಾರೆ ಎಂದು ಕಪಿಲ್ ಸಿಬಲ್ ಕೋರ್ಟಿಗೆ ತಿಳಿಸಿದರು.

ಹಿಂದೆ ಕೂಡ ಕಿರಿಯ ರಾಜಕಾರಣಿಯನ್ನು ಹಂಗಾಮಿ ಸ್ಪೀಕರನ್ನಾಗಿ ನೇಮಕ ಮಾಡಲಾಗಿತ್ತು ಎಂದಿರುವ ನ್ಯಾ. ಬೊಬ್ಡೆ ಅವರು, ಸಭಾಧ್ಯಕ್ಷರನ್ನು ನೇಮಕ ಮಾಡುವುದು ನ್ಯಾಯಾಲಯದ ಕೆಲಸವಲ್ಲ, ಅದು ರಾಜ್ಯಪಾಲರ ಕೆಲಸ ಎಂದು ಸಿಬಲ್ ವಾದವನ್ನು ತಳ್ಳಿಹಾಕಿದ್ದಾರೆ.

ಮೇ 17ರಂದು ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪನವರು, ಎರಡೇ ದಿನಗಳಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕಾಗಿದೆ. ಅಧಿವೇಶನ 11 ಗಂಟೆಗೆ ಆರಂಭವಾಗಲಿರುವುದರಿಂದ ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತದೋ ಎಂಬ ಕುತೂಹಲ ಎಲ್ಲರಲ್ಲಿದೆ.

ಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣುಕರ್ನಾಟಕ ವಿಶ್ವಾಸಮತ LIVE: ವಿಧಾನಸೌಧದ ಮೇಲೆ ಎಲ್ಲರ ಕಣ್ಣು

ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿರುವುದೇಕೆಂದರೆ, ಹಂಗಾಮಿ ಸ್ಪೀಕರ್ ಅವರು ಕಟ್ಟಾ ಯಡಿಯೂರಪ್ಪ ಬೆಂಬಲಿಗ. 2010ರಲ್ಲಿ ಯಡಿಯೂರಪ್ಪನವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿದ್ದಾಗ, ಅವರ ವಿರುದ್ಧ ತಿರುಗಿಬಿದ್ದಿದ್ದ 11 ಬಿಜೆಪಿ ಶಾಸಕರು ಮತ್ತು 5 ಪಕ್ಷೇತ್ರ ಅಭ್ಯರ್ಥಿಗಳನ್ನು ಬೋಪಯ್ಯ ಅನರ್ಹಗೊಳಿಸಿದ್ದರು.

English summary
Before trust vote Supreme Court of India hearing the application filed by Congress questioning the appointment of KG Bopaiah as pro tem speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X