ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಷ್ ವೈದ್ಯರು 'ರೋಗಕ್ಕೆ ಈ ಔಷಧ ಪರಿಹಾರ' ಎನ್ನುವ ಜಾಹೀರಾತು ನೀಡುವಂತಿಲ್ಲ: ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಆಯುಷ್ ವೈದ್ಯರು ಈ ರೋಗಕ್ಕೆ ಈ ಔಷಧ ಪರಿಹಾರ ಎನ್ನುವ ಯಾವುದೇ ಜಾಹೀರಾತು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಆಯುಷ್ ಮತ್ತು ಹೋಮಿಯೋಪಥಿ ವೈದ್ಯರು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರದಿಂದ ಅನುಮೋದಿತ ಮಾತ್ರೆಗಳು ಅಥವಾ ಮಿಶ್ರಣಗಳನ್ನು ರೋಗನಿರೋಧಕ ವರ್ಧಕಗಳಾಗಿ ಸೂಚಿಸಬಹುದು. ಆದರೆ, ಸಾಂಕ್ರಾಮಿಕ ರೋಗಕ್ಕೆ ಪರಿಹಾರ ಎಂದು ಅವುಗಳ ಪ್ರಚಾರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ತೆಲಂಗಾಣ: ಜನವರಿ ಮಧ್ಯದಿಂದ 80 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಣೆತೆಲಂಗಾಣ: ಜನವರಿ ಮಧ್ಯದಿಂದ 80 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಣೆ

ಈ ಔಷಧಿಗಳ ಬದಲಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪರ್ಯಾಯ ಔಷಧಿ ಬಳಸುವಂತೆ ಹೈಕೋರ್ಟ್‌ ಆದೇಶ ನೀಡಿತ್ತು. ಕೋವಿಡ್ ಅಪಾಯವನ್ನು ಕಡಿಮೆ ಮಾಡಲು ಹೋಮಿಯೋಪತಿ, ಆಯುರ್ವೇದ, ಸಿದ್ಧ, ಯುನಾನಿ ಮತ್ತು ಪ್ರಕೃತಿಚಿಕಿತ್ಸೆಯನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

 Supreme Court Forbids AYUSH Doctors From Advertising COVID-19 Immunity Boosters As Cure

Recommended Video

ಬೆಂಗಳೂರು:ಟ್ರಾಫಿಕ್ ಕ್ಲಿಯರ್ ಮಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ | Oneindia Kannada

ಆಯುಷ್‌ ವೈದ್ಯರು ಕೋವಿಡ್‌ಗೆ ಔಷಧಿಗಳನ್ನು ನೀಡುವುದನ್ನು ನಿರ್ಬಂಧಿಸಿ ಕೇರಳ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಡಾ.ಎಕೆಬಿ ಸದ್ಭಾವನ ಮಿಷನ್‌ ಸ್ಕೂಲ್‌ ಆಫ್‌ ಹೋಮಿಯೋ ಫಾರ್ಮಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ಅವರ ಪೀಠ ಈ ಆದೇಶ ನೀಡಿದೆ.

English summary
The Supreme Court on Tuesday held that AYUSH doctors cannot prescribe or advertise government-approved tablets or mixtures as a 'cure' for COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X