• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಮಾರುಕಟ್ಟೆಗೆ ಒಂದೇ ಸಾರಿಡಾನ್, ನಿಮ್ಮ ತಲೆನೋವಿಗೆ ಪರಿಹಾರ

|

ನವದೆಹಲಿ, ಫೆಬ್ರವರಿ 21: ನಿಷೇಧಿತ ಮಾತ್ರೆಗಳ ಪಟ್ಟಿಯಿಂದ ನೋವು ನಿವಾರಕ ಸ್ಯಾರಿಡಾನ್ ಹೊರಬಿದ್ದಿದೆ ಎಂದು ಮಾತ್ರೆ ಉತ್ಪಾದನಾ ಸಂಸ್ಥೆ ಪಿರಾಮಲ್ ಎಂಟರ್ಪ್ರೈಸಸ್ ಲಿಮಿಡೆಟ್ ತಿಳಿಸಿದೆ. ಸುಪ್ರೀಂಕೋರ್ಟಿನಲ್ಲಿ ಸ್ಯಾರಿಡಾನ್ ಪರವಾಗಿ ತೀರ್ಪು ನೀಡಿದೆ ಎಂದು ಕಂಪನಿ ಬಿಎಸ್ಇ ಗೆ ಮಾಹಿತಿ ನೀಡಿದೆ.

ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯ

ಸ್ಯಾರಿಡಾನ್ ಸೇರಿ 328 ಔಷಧಿಗಳ ಮೇಲೆ ಕೇಂದ್ರ ಸರ್ಕಾರವು ಈ ಹಿಂದೆ ನಿಷೇಧ ಹೇರಿತ್ತು. ಸ್ಯಾರಿಡನ್ ಸೇರಿದಂತೆ 328 ಡ್ರಗ್ಸ್ ನಿಷೇಧಿಸಿದ್ದರೆ, 6 ಡ್ರಗ್ಸ್ ಮೇಲೆ ನಿರ್ಬಂಧ ವಿಧಿಸಿ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿತ್ತು. ಔಷಧಿಯಲ್ಲಿ ಅತಿ ಹೆಚ್ಚು ಆ್ಯಂಟಿ ಬಯಾಟಿಕ್ ಅಂಶವಿರುವುದು ನಿಷೇಧಕ್ಕೆ ಕಾರಣವಾಗಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ, ಮೇಲ್ವಿಚಾರಣೆ ನಂತರ ಸ್ಯಾರಿಡಾನ್ ಮಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ. ನೋವು ನಿವಾರಕಾ ಮಾತ್ರೆ ಸ್ಯಾರಿಡಾನ್, ಚರ್ಮದ ಕೀಮ್ ಪ್ಯಾಂಡರ್ಮ್ ಸೇರಿದಂತೆ 328 ಔಷಧಿ- ಎಫ್ ಡಿಸಿ ಡ್ರಗ್ಸ್ ಮೇಲೆ ಆರೋಗ್ಯ ಇಲಾಖೆ ನಿಷೇಧ ಹೇರಲಾಗಿತ್ತು. ಇದಕ್ಕೂ ಮುನ್ನ ಮಾರ್ಚ್ 10, 2016ರಂದು 344ಎಫ್ ಡಿ ಸಿಗಳನ್ನು ನಿಷೇಧಿಸಿ ಸರ್ಕಾರವು ಆದೇಶಿಸಿತ್ತು. ಡಿಸೆಂಬರ್ 15, 2017ರಂದು ಸುಪ್ರೀಂಕೋರ್ಟ್, ಈ ಬಗ್ಗೆ ಪರೀಕ್ಷಿಸುವಂತೆ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ಗೆ ಸೂಚಿಸಿತ್ತು.

ಭಾರತದಲ್ಲಿ ಸುಮಾರು 50 ವರ್ಷಗಳಿಂದ ಸ್ಯಾರಿಡಾನ್ ಮಾತ್ರೆಯನ್ನು ಬಳಸಲಾಗುತ್ತಿದ್ದು, ಸುಪ್ರೀಂ ಕೋರ್ಟ್ ನಿರ್ಧಾರದಿಂದ ನಮಗೆ ಖುಷಿಯಾಗಿದೆ ಎಂದು ಪಿರಾಮಲ್ ಕಂಪನಿ ಹೇಳಿದೆ.

English summary
The Supreme Court has ruled in favour of headache drug Saridon, exempting its formulation from the list of banned fixed dose combination (FDCs) drugs, Piramal Enterprises said on Thursday. Following this development, shares of Piramal Enterprises rose as much as 1.62 per cent to touch an intraday high of Rs. 2,231.80 on the Bombay Stock Exchange (BSE).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X