ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಹಂತಕರಿಗೆ ಗಲ್ಲುಶಿಕ್ಷೆ ಇಲ್ಲ : ಸುಪ್ರೀಂಕೋರ್ಟ್

By Mahesh
|
Google Oneindia Kannada News

ನವದೆಹಲಿ, ಜುಲೈ 29: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೈದಿದ್ದ ನಳಿನಿ ಶ್ರೀಹರನ್ ಹಾಗೂ ಇತರರಿಗೆ ಗಲ್ಲುಶಿಕ್ಷೆ ನೀಡಲು ಸಾಧ್ಯವಿಲ್ಲ ಜೀವಾವಾಧಿ ಶಿಕ್ಷೆಯನ್ನು ಅನುಭವಿಸಲಿ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಬುಧವಾರ ಮತ್ತೊಮ್ಮೆ ಆದೇಶ ನೀಡಿದೆ.

ರಾಜೀವ್ ಹಂತಕರು ಅವಧಿಗೆ ಮುನ್ನ ಬಿಡುಗಡೆ ಬಯಸಿ ಸಲ್ಲಿಸಿದ್ದ ಅರ್ಜಿ ಹಾಗೂ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ಯೂರೇಟರ್ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಕೊಲ್ಲಲು ವಿದೇಶಿ ನೆರವು ಪಡೆದುಕೊಂಡು ಸಂಚು ರೂಪಿಸಲಾಗಿತ್ತು. ಹೀಗಾಗಿ ಇಂಥವರಿಗೆ ಕ್ಷಮಾದಾನ ನೀಡುವುದಾಗಲಿ, ಅವಧಿಗೆ ಮುನ್ನ ಬಿಡುಗಡೆ ಮಾಡುವುದಾಗಲಿ ಸರಿಯಾದ ಕ್ರಮವಲ್ಲ ಎಂದು ಏಳು ಜನ ಅಪರಾಧಿಗಳ ವಿರುದ್ಧ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. [ರಾಜೀವ್ ಹಂತಕರಿಗೆ ಜೀವಾವಧಿ ಶಿಕ್ಷೆ]

Supreme Court dismisses curative petition on Rajiv Gandhi's killers

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು, ಜಸ್ಟೀಸ್ ಫಕೀರ್ ಮೊಹಮ್ಮದ್ ಇಬ್ರಾಹಿಂ ಕಾಲಿಫುಲ್ಲ, ಜಸ್ಟೀಸ್ ಪಿನಾಕಿ ಚಂದ್ರ ಘೋಶ್, ಜಸ್ಟೀಸ್ ಅಭಯ್ ಮನೋಹರ್ ಸಪ್ರೆ ಹಾಗೂ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. [ರಾಜೀವ್ ಗಾಂಧಿ ಹಂತಕಿಗೆ ಬಿಡುಗಡೆ ಭಾಗ್ಯವಿಲ್ಲ]

ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್ ಸೇರಿದಂತೆ ಸಂತನ್, ಮುರಗನ್ ಮತ್ತು ಪೆರಾರಿವೇಲನ್ ಅವರ ಗಲ್ಲುಶಿಕ್ಷೆಯನ್ನು ಫೆ.18ರಂದು ಸುಪ್ರೀಂಕೋರ್ಟ್ ಜೀವಾವಧಿಗೆ ಇಳಿಸಿತ್ತು.

ತಮಿಳುನಾಡಿನ ವೆಲ್ಲೂರಿನ ಜೈಲಿನಲ್ಲಿರುವ ನಳಿನಿ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವಧಿ ಪೂರ್ವ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.ಅದರೆ, ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಂತನ್, ಮುರಗನ್ ಮತ್ತು ಪೆರಾರಿ ವೇಲನ್ ಅವರುಗಳು ಪ್ರಸ್ತುತ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ (1991ರಿಂದ). ಉಳಿದ ನಾಲ್ವರು ಶ್ರೀಪೆರಂಬದೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 1991ರ ಮೇ 21ರಂದು ಶ್ರೀಪೆರಂಬದೂರು ಸಮೀಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು. ಆ ಬಾಂಬ್ ಸ್ಫೋಟದಲ್ಲಿ ಇನ್ನೂ 14 ಮಂದಿ ಪ್ರಾಣ ತೆತ್ತಿದ್ದರು.

English summary
Despite Centre's opposition, the Supreme Court on Wednesday dismissed curative petition on its verdict that converted former Prime Minister Rajiv Gandhi's killers' death sentences into life terms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X