ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ಕರ್ನಾಟಕದ ಅರ್ಜಿ ವಜಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಇದರಿಂದ, ಜಯಲಲಿತಾ ಮೃತಪಟ್ಟಿದ್ದರೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಂದ ವಸೂಲಿಯಾಗಬೇಕಿದ್ದ ದಂಡದ ಮೊತ್ತವನ್ನು ಸಂಗ್ರಹಿಸುವ ಕರ್ನಾಟಕ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆ.

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್

ಮರುಪರಿಶೀಲನಾ ಅರ್ಜಿಯನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿದರೆ, ಅದನ್ನು ಮತ್ತೆ ಪರಿಶೀಲಿಸುವಂತೆ ಕೋರುವ (ಕ್ಯುರೇಟಿವ್ ಅರ್ಜಿ) ಅವಕಾಶದಡಿ ಕರ್ನಾಟಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

supreme court dismissed disproportionate assets case against jayalalithaa by karnataka

ಅಕ್ರಮ ಆಸ್ತಿ ಸಂಪಾದನೆಯ ಆರೋಪದ ವಿಚಾರಣೆ ಎದುರಿಸುತ್ತಿದ್ದ ಜಯಲಲಿತಾ ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ 2014ರ ಸೆಪ್ಟೆಂಬರ್‌ನಲ್ಲಿ ದೋಷಿ ಎಂದು ಪರಿಗಣಿಸಿ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡ ವಿಧಿಸಿತ್ತು.

2015ರ ಜನವರಿ 5ರಂದು ಮೇಲ್ಮನವಿ ಅರ್ಜಿಯ ಕುರಿತು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್, ಸ್ಥಳೀಯ ನ್ಯಾಯಾಲದ ತೀರ್ಪನ್ನು ವಜಾಗೊಳಿಸಿತ್ತು. ಜಯಲಲಿತಾ ಸೇರಿದಂತೆ ನಾಲ್ವರು ಆರೋಪಿಗಳು ನಿರ್ದೋಷಿಗಳು ಎಂದು ಅದು ಆದೇಶದಲ್ಲಿ ತಿಳಿಸಿತ್ತು.

'ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ''ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ'

ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2016ರ ಡಿಸೆಂಬರ್ 5ರಂದು ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 2017ರ ಫೆಬ್ರುವರಿಯಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಜಯಲಲಿತಾ ಆಪ್ತರಾಗಿದ್ದ ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿತ್ತು.

ಉಳಿದ ಆರೋಪಿಗಳಿಗೆ ಶಿಕ್ಷೆಯಾದರೂ, ಜಯಲಲಿತಾ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದೋಷಮುಕ್ತಗೊಳಿಸುವುದು ಸರಿಯಲ್ಲ. ಅವರಿಂದ 100 ಕೋಟಿ ರೂ. ದಂಡ ವಸೂಲಿ ಮಾಡಬೇಕಿದೆ. ಹೀಗಾಗಿ ಅವರನ್ನು ದೋಷಿ ಎಂದು ಪರಿಗಣಿಸಬೇಕು ಎಂಬುದಾಗಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ

ಈ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪುನಃ ಕ್ಯುರೆಟಿವ್ ಅರ್ಜಿ ಅವಕಾಶದಡಿ ಕರ್ನಾಟಕ ಪುನಃ ಪ್ರಶ್ನಿಸಿತ್ತು.

English summary
Supreme Court on Friday dismissed a curative petition by Karnataka government regarding Disproportionate Assets (DA) against Tamilnadu former Chief Minister J Jayalalithaa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X