ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬುಲೆನ್ಸ್ ಸೇವೆಗೆ ಸೂಕ್ತ ದರ ನಿಗದಿ: ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ಕೋವಿಡ್-19 ರೋಗಿಗಳಿಗೆ ಸೇವೆ ಒದಗಿಸಲು ಆಂಬುಲೆನ್ಸ್ ಪೂರೈಕೆದಾರರು ಅತಿ ಹೆಚ್ಚಿನ ದರ ಕೇಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಆಂಬುಲೆನ್ಸ್ ಸೇವೆಗಳಿಗೆ ಸಮಂಜಸವಾದ ದರ ನಿಗದಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ದೇಶದಲ್ಲಿ ಕೋವಿಡ್ ಪಾಸಿಟಿವ್ ಬಂದ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸೇವೆ ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಆಂಬುಲೆನ್ಸ್ ಸೌಲಭ್ಯವನ್ನು ಹೆಚ್ಚಿಸುವಂತೆ ಸೂಚಿಸಲು ಅಥವಾ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಈ ಸೂಚನೆ ನೀಡಿದೆ.

ಬೆಂಗಳೂರಲ್ಲಿ ಅಂಬ್ಯುಲೆನ್ಸ್ ಹತ್ತಿದ ಯುವತಿ ದೆಹಲಿಯಲ್ಲಿ ಪತ್ತೆ!ಬೆಂಗಳೂರಲ್ಲಿ ಅಂಬ್ಯುಲೆನ್ಸ್ ಹತ್ತಿದ ಯುವತಿ ದೆಹಲಿಯಲ್ಲಿ ಪತ್ತೆ!

ಕೋವಿಡ್ ರೋಗಿಗಳಿಗೆ ಆಂಬುಲೆನ್ಸ್ ಪೂರೈಕೆದಾರರು ಅತಿ ಹೆಚ್ಚಿನ ದರ ವಿಧಿಸುತ್ತಿರುವುದರ ನಿದರ್ಶನಗಳ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಸಮಂಜಸ ಪ್ರಮಾಣದ ದರ ನಿಗದಿ ಮಾಡುವಂತೆ ರಾಜ್ಯಗಳಿಗೆ ನಿರ್ದೇಶಿಸಿತು.

 Supreme Court Directs States To Fix Reasonable Ambulance Charge For Covid Patients

ಕೋವಿಡ್ ರೋಗಿಗಳು ಅಲ್ಪ ದೂರಕ್ಕೂ ಸಾವಿರಗಟ್ಟಲೆ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಅನೇಕ ಕಡೆ ವರದಿಯಾಗಿದೆ. ಇತ್ತೀಚೆಗೆ ಪುಣೆಯಲ್ಲಿ ಜೂನ್ 25ರಂದು ಕೇವಲ ಏಳು ಕಿ.ಮೀ. ದೂರಕ್ಕೆ ಕೋವಿಡ್ ರೋಗಿಯೊಬ್ಬರಿಂದ ಆಂಬುಲೆನ್ಸ್ ಸೇವಾದಾರರು 8,000 ರೂ ದರ ವಿಧಿಸಿದ್ದಕ್ಕಾಗಿ ಜಿಲ್ಲಾಡಳಿತ ಪ್ರಕರಣ ದಾಖಲಿಸಿತ್ತು.

ಬೆಂಗಳೂರಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್ ಬೆಂಗಳೂರಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್

Recommended Video

Zameer Ahmed ಗರಂ Sambargi ವಿರುದ್ಧ ಬಿತ್ತು ಸಿಕಾಪಟ್ಟೆ ಸೆಕ್ಷನ್ | Oneindia Kannada

ಈ ಪಿಡುಗಿನ ಸಮಯದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹೊರಡಿಸಿರುವ ಮಾರ್ಗದರ್ಶಿಗಳಿಗೆ ರಾಜ್ಯಗಳು ಬದ್ಧವಾಗಿರಬೇಕು. ಸಾಕಷ್ಟು ಪ್ರಮಾಣದಲ್ಲಿ ಆಂಬುಲೆನ್ಸ್ ಸೌಲಭ್ಯ ಇದೆ ಎಂಬುದನ್ನು ಎಲ್ಲ ರಾಜ್ಯ ಸರ್ಕಾರಗಳೂ ಖಚಿತಪಡಿಸಿಕೊಳ್ಳಲೇಬೇಕು ಎಂದು ನ್ಯಾಯಪೀಠ ಹೇಳಿತು.

English summary
The Supreme Court has ordered all the state governments to fix reasonable ambulance charge for Covid patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X