ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ.ಡಿ ಎದುರು ಹಾಜರಾಗಲು ಚಿದಂಬರಂ ಮಗನಿಗೆ ಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ಜನವರಿ 30: ಏರ್ಸೆಲ್-ಮ್ಯಾಕ್ಸಿಸ್ ತರಂಗಾಂತರ ಹಂಚಿಕೆ ಒಪ್ಪಂದದಲ್ಲಿ ಲಾಭ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದ ಮತ್ತು ಐಎನ್‌ಎಕ್ಸ್ ಮೀಡಿಯಾ ಪ್ರಕರಣಗಳಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಣೆ ನಿಡಲು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಮಾರ್ಚ್ 5, 6, 7 ಮತ್ತು 12ರಂದು ಹಾಜರಾಗುವಂತೆ ಸುಪ್ರೀಂಕೋರ್ಟ್ ಬುಧವಾರ ನಿರ್ದೇಶಿಸಿದೆ.

ಐಎನ್ಎಕ್ಸ್ ಮೀಡಿಯಾ ಲಂಚ ಹಗರಣ : ಇಡಿ ಮುಂದೆ ಪಿ ಚಿದಂಬರಂ ಹಾಜರುಐಎನ್ಎಕ್ಸ್ ಮೀಡಿಯಾ ಲಂಚ ಹಗರಣ : ಇಡಿ ಮುಂದೆ ಪಿ ಚಿದಂಬರಂ ಹಾಜರು

ಅಲ್ಲದೆ, ಕಾರ್ತಿ ಬಯಸಿದ್ದಲ್ಲಿ ವಿದೇಶಕ್ಕೆ ತೆರಳಲು ಸಹ ಷರತ್ತುಬದ್ಧ ಅವಕಾಶ ನೀಡಿದೆ.

supreme court directed karti chidambaram to appear before ed in aircel-maxis and inx media case

ವಿದೇಶಕ್ಕೆ ಹೋಗಬೇಕೆಂದಿದ್ದರೆ ನ್ಯಾಯಾಲಯದಲ್ಲಿ 10 ಕೋಟಿ ರೂ. ಠೇವಣಿ ಇರಿಸಬೇಕು ಎಂದು ಸೂಚಿಸಿದೆ.

ಏರ್‌ ಸೆಲ್-ಮ್ಯಾಕ್ಸಿಸ್ ಹಗರಣ: ಚಿದಂಬರಂ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಏರ್‌ ಸೆಲ್-ಮ್ಯಾಕ್ಸಿಸ್ ಹಗರಣ: ಚಿದಂಬರಂ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ

'ನೀವು ಎಲ್ಲಿಗೆ ಬೇಕಾದರೂ ತೆರಳಬಹುದು. ನೀವು ಬಯಸಿದ್ದನ್ನು ಮಾಡಬಹುದು. ಆದರೆ, ಕಾನೂನಿನ ಜೊತೆ ಆಟವಾಡಬಾರದು. ಒಂದು ವೇಳೆ ನೀವು ವಿಚಾರಣೆಗೆ ಅಸಹಕಾರ ತೋರಿದ್ದಲ್ಲಿ ಅದಕ್ಕೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಕಾರ್ತಿಗೆ ಎಚ್ಚರಿಕೆ ನೀಡಿದ್ದಾರೆ.

English summary
Supreme Court on Wednesday directed Karti Chidambaram to appear before the ED for interrogation with respect to his role in the Aircel-Maxis deal and INX Media case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X