ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿ ಕಣ್ಣಿಗೆ ಗಾಯ: ರಾಜ್ಯದ ಶಾಲಾ ಶಿಕ್ಷಕನಿಗೆ ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಎರಡನೆಯ ತರಗತಿ ವಿದ್ಯಾರ್ಥಿಗೆ ಥಳಿಸಿ ಆತನ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳಲು ಕಾರಣರಾಗಿದ್ದ ರಾಜ್ಯದ ಶಿಕ್ಷಕರಿಗೆ ಸುಪ್ರೀಂಕೋರ್ಟ್‌ನ ಮಹಿಳಾ ಪೀಠ ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ, ಎರಡನೆಯ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಆತನ ದೃಷ್ಟಿ ಕಳೆದುಕೊಳ್ಳಲು ಕಾರಣರಾದ ಪ್ರಕರಣದ ವಿಚಾರಣೆ ನಡೆಸಿತು.

ರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷ

ಸಮವಸ್ತ್ರದ ಶೂಗಳನ್ನು ಧರಿಸಿದ ಕಾರಣಕ್ಕೆ ಶಾಲಾ ಶಿಕ್ಷಕ ಸಿ.ಆರ್. ಕಾರಿಯಪ್ಪ, ಕೋಲಿನಿಂದ ವಿದ್ಯಾರ್ಥಿಗೆ ಥಳಿಸಿದ್ದರು. ಇದರಿಂದ ಆ ವಿದ್ಯಾರ್ಥಿಯ ಎಡಗಣ್ಣಿಗೆ ಚಿಕ್ಕ ಗಾಯವಾಗಿತ್ತು. ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಬಳಿಕವೂ ಆತ ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿದ್ದ.

Supreme court convicts Karnataka Teacher for assault of student

ಆರೋಪಿ ಶಿಕ್ಷಕರ ವಿರುದ್ಧದ ಆರೋಪಗಳನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಬಳಿಕ ಆರೋಪ ಎತ್ತಿಹಿಡಿದಿದ್ದ ಹೈಕೋರ್ಟ್, ಐಪಿಸಿ ಸೆಕ್ಷನ್ 326ರ ಅಡಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಪಡಿಸಿತ್ತು.

ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರಿ ಶಾಲೆಯ ಮಾದರಿ ಪದ್ಧತಿ! ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರಿ ಶಾಲೆಯ ಮಾದರಿ ಪದ್ಧತಿ!

ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಮಹಿಳಾ ಪೀಠ ಹಿಂದಿನ ತೀರ್ಪುಗಳನ್ನು ತಿರಸ್ಕರಿಸಿತು. ಹೊಸದಾಗಿ ವಿಚಾರಣೆ ಆರಂಭಿಸಿದ ಪೀಠ, ಗಾಯಗೊಂಡ ವಿದ್ಯಾರ್ಥಿಯ ಹೇಳಿಕೆಗಳನ್ನು ಪರಿಗಣಿಸಿತು.

English summary
All woman Bench of the Supreme Court has convicted a teacher from Karnataka for assaulting a 2nd standard student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X