ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪೂರ್‌ ಶರ್ಮಾ ಪ್ರಕರಣ ನಿರ್ವಹಿಸಿದ ಪೊಲೀಸರಿಗೂ ಸುಪ್ರೀಂ ತರಾಟೆ

|
Google Oneindia Kannada News

ನವದೆಹಲಿ, ಜು.1: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಭಾರತದ ಸರ್ವೋಚ್ಚ ನ್ಯಾಯಾಲಯ ಕೆಂಡಕಾರಿದ್ದು, ಶರ್ಮಾ ಇಡೀ ದೇಶದ ಕ್ಷಮೆ ಕೇಳಬೇಕು ಎಂದಿತಲ್ಲದೆ ಅವರ ಪ್ರಕರಣ ನಿರ್ವಹಿಸಿದ ಪೊಲೀಸರಿಗೂ ತರಾಟೆ ತರಾಟೆ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು, ನೀವು ಇತರರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದಾಗ ಅವರನ್ನು ತಕ್ಷಣವೇ ಬಂಧಿಸಲಾಗುತ್ತದೆ. ಆದರೆ ಅದು ನಿಮ್ಮ ವಿರುದ್ಧವಾದಾಗ ಯಾರೂ ನಿಮ್ಮನ್ನು ಮುಟ್ಟಲು ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.

ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್‌ ಛೀಮಾರಿಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್‌ ಛೀಮಾರಿ

ಶರ್ಮಾ ಅವರ ವಕೀಲ ಮಣಿಂದರ್ ಸಿಂಗ್ ಅವರು, ಸುದ್ದಿ ವಾಹಿನಿಯೊಂದರಲ್ಲಿ ಹೇಳಿಕೆ ನೀಡಿದ ನಂತರ ಶರ್ಮಾ ವಿರುದ್ಧ ಎಫ್‌ಐಆರ್ ಅನ್ನು ಮೊದಲು ದೆಹಲಿ ಪೊಲೀಸರು ದಾಖಲಿಸಿದ್ದಾರೆ ಎಂದು ಹೇಳಿದರು.

ಅದಕ್ಕೆ ಗರಂ ಆದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, "ದೆಹಲಿ ಪೊಲೀಸರು ಏನು ಮಾಡಿದ್ದಾರೆ? ನಮ್ಮನ್ನು ಬಾಯಿ ತೆರೆಯುವಂತೆ ಮಾಡಬೇಡಿ. ಟಿವಿ ಚರ್ಚೆ ಏನು? ಅವರು ನ್ಯಾಯಾಲಯದ ವಿಷಯವನ್ನು ಏಕೆ ಆಯ್ಕೆ ಮಾಡಿದರು? ಅವರು ಪಕ್ಷದ ವಕ್ತಾರರಾಗಿದ್ದರೆ ಏನೀಗಾ? ಆಕೆಗೆ ಅಧಿಕಾರದ ಬಲ ಇದೆ ಎಂದು ದೇಶದ ಕಾನೂನಿಗೆ ಗೌರವವಿಲ್ಲದೇ ಯಾವುದೇ ಹೇಳಿಕೆ ನೀಡಬಹುದೆಂದು ಭಾವಿಸಿದ್ದಾರೆಯೇ?" ಎಂದು ಕೇಳಿದರು. ಅದಕ್ಕೆ ನೂಪೂರ್‌ ಪರ ವಕೀಲರು ನೂಪೂರ್‌ ಶರ್ಮಾ ಅವರು ಟಿವಿ ನಿರೂಪಕರು ಕೇಳಿದ ಪ್ರಶ್ನೆಗಷ್ಟೆ ಉತ್ತರ ನೀಡಿದ್ದಾರೆ ಎಂದು ಹೇಳಿದರು. ಅದಕ್ಕೆ ನ್ಯಾರ್ಯಮೂರ್ತಿ ಹಾಗಾದರೆ ಪ್ರಕರಣ ಟಿವಿ ನಿರೂಪಕರ ವಿರುದ್ಧ ಇರಬೇಕಿತ್ತಲ್ಲವೆ ಎಂದು ಹೇಳಿದರು.

ನೂಪುರ್ ಶರ್ಮಾ ವಿರುದ್ಧ ಕ್ರಮ ಕೋರಿ ಹೈಕೋರ್ಟ್‌ಗೆ ಪಿಐಎಲ್ನೂಪುರ್ ಶರ್ಮಾ ವಿರುದ್ಧ ಕ್ರಮ ಕೋರಿ ಹೈಕೋರ್ಟ್‌ಗೆ ಪಿಐಎಲ್

 ಶರ್ಮಾ ಕೋರಿಕೆ ನಿರಾಕರಿಸಿದ ಕೋರ್ಟ್‌

ಶರ್ಮಾ ಕೋರಿಕೆ ನಿರಾಕರಿಸಿದ ಕೋರ್ಟ್‌

ನೂಪುರ್ ಶರ್ಮಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಭದ್ರತಾ ಸಮಸ್ಯೆಯನ್ನು ಉಲ್ಲೇಖಿಸಿ ಅನೇಕ ರಾಜ್ಯಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲು ಕೋರಿರುವ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿತು. ನ್ಯಾಯಾಲಯವು ಆಕೆಯ ಅರ್ಜಿಯನ್ನು ಆಲಿಸಲು ನಿರಾಕರಿಸಿತು. ಅವರು ದೇಶಾದ್ಯಂತ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ನಂತರ ಆಕೆಯ ವಕೀಲರು ಅದನ್ನು ಹಿಂತೆಗೆದುಕೊಂಡರು.

 ರಾಜಸ್ತಾನದ ಉದಯಪುರದಲ್ಲಿ ಟೈಲರ್‌ ಹತ್ಯೆ

ರಾಜಸ್ತಾನದ ಉದಯಪುರದಲ್ಲಿ ಟೈಲರ್‌ ಹತ್ಯೆ

ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಕೊಲ್ಲಿ ರಾಷ್ಟ್ರಗಳು ಭಾರತವನ್ನು ಟೀಕಿಸಿದ್ದವು. ವಿವಿಧ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಪರ ಪೋಸ್ಟ್‌ ಹಾಕಿದ್ದ ಒಬ್ಬ ಟೈಲರ್‌ ವ್ಯಕ್ತಿಯನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ತಲೆ ಕಡಿದು ಕೊಂದು ಕ್ಯಾಮರಾದಲ್ಲಿ ಅದನ್ನು ಸೆರೆಹಿಡಿದಿದ್ದರು. ಈ ಎಲ್ಲವೂ ಪ್ರವಾದಿಯ ಬಗ್ಗೆ ನುಪೂರ್‌ ಶರ್ಮಾ ಅವರ ಹೇಳಿಕೆ ನಂತರ ನಡೆದಿವೆ. ಆದರೆ ಉದಯಪುರ ಪ್ರಕರಣವನ್ನು ಭಯೋತ್ಪಾದಕ ದಾಳಿ ಎಂದು ಕರೆಯಲಾಗಿದ್ದು, ದೇಶದ ಮುಂಚೂಣಿಯ ಭಯೋತ್ಪಾದನಾ ವಿರೋಧಿ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.

 ಇದು ನಾಚಿಕೆಗೇಡಿನ ಸಂಗತಿಯಾಗಿದೆ

ಇದು ನಾಚಿಕೆಗೇಡಿನ ಸಂಗತಿಯಾಗಿದೆ

ನೂಪುರ್ ಶರ್ಮಾ ಬೆದರಿಕೆಗಳನ್ನು ಎದುರಿಸುತ್ತಿದ್ದಾಳೆ. ದೇಶಾದ್ಯಂತ ಭಾವನೆಗಳನ್ನು ಕೆರಳಿಸಿದ ರೀತಿ ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಅವಳು ಏಕಾಂಗಿಯಾಗಿ ಜವಾಬ್ದಾರಳು. ಅವಳನ್ನು ಹೇಗೆ ಪ್ರಚೋದಿಸಲಾಯಿತು ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವಳು ಹೇಗೆ ಇದೆಲ್ಲವನ್ನೂ ಹೇಳಿದಳು ಎಂದು ಅವರ ವಕೀಲರು ಎಂದು ಹೇಳುತ್ತಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಶರ್ಮಾ ಅವರ ಅರ್ಜಿಯಲ್ಲಿ ಅವರ ಹೆಸರು ಏಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿ ಅಕೆ ಏಕೆ ವಂಚನೆಯ ಹೆಸರಿನಲ್ಲಿ ಇಲ್ಲಿದ್ದಾರೆ?" ಎಂದು ತರಾಟೆಗೆ ತೆಗೆದುಕೊಂಡಿತು.

 ದೇಶಾದ್ಯಂತ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ

ದೇಶಾದ್ಯಂತ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ

ಬಿಜೆಪಿಯಿಂದ ಅಮಾನತುಗೊಂಡಿರುವ ನುಪೂರ್‌ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿರುವ ರಾಜ್ಯಗಳ ಸುದೀರ್ಘ ಪಟ್ಟಿಯನ್ನು ಉಲ್ಲೇಖಿಸಿದ ಆಕೆಯ ವಕೀಲರು ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳೀದರು. ಅಲ್ಲದೆ ಇದು ದೆಹಲಿ, ಮುಂಬೈ, ನಾಗಪುರದಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಇತರ ರಾಜ್ಯಗಳಲ್ಲಿ ಪ್ರಕರಣ ವ್ಯಾಪಿಸಿದೆ ಎಂದು ಸಿಂಗ್ ಹೇಳಿದರು. ಇದು ಪತ್ರಿಕೋದ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಎತ್ತಿ ತೋರಿಸಲು ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಅವರ ಪ್ರಕರಣವನ್ನು ಉಲ್ಲೇಖಿಸಿ ಪ್ರತಿಯೊಬ್ಬ ನಾಗರಿಕರಿಗೂ ಕಾನೂನು ರೂಪಿಸಲಾಗಿದೆ ಎಂದರು.

 2018ರ ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣದಲ್ಲಿ ಜಾಮೀನು

2018ರ ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣದಲ್ಲಿ ಜಾಮೀನು

ಅದಕ್ಕೆ ಪ್ರತಿಯೊಬ್ಬ ನಾಗರಿಕನಲ್ಲ. ಪತ್ರಕರ್ತನಿಗೆ ಕೆಲವು ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ನವೆಂಬರ್ 2020 ರಲ್ಲಿ ಸುಪ್ರೀಂ ಕೋರ್ಟ್‌ನಿಂದ 2018ರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅರ್ನಬ್‌ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಯಿತು. ಇದು ಟಿವಿ ಆಂಕರ್ ವಿರುದ್ಧದ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ನಿರ್ದಿಷ್ಟ ವಿಷಯದ ಬಗ್ಗೆ ತನ್ನ ಹೇಳಿಕೆಗಳನ್ನು ವ್ಯಕ್ತಪಡಿಸುವ ಪತ್ರಕರ್ತನ ಪ್ರಕರಣವು ಪರಿಣಾಮಗಳ ಬಗ್ಗೆ ಯೋಚಿಸದೆ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಇತರರನ್ನು ದೂಷಿಸುವ ವಕ್ತಾರರಿಗಿಂತ ಭಿನ್ನವಾಗಿ ಪೀಠದಲ್ಲಿದೆ ಎಂದು ನುಪೂರ್‌ ಶರ್ಮಾ ಅವರ ವಕೀಲರಿಗೆ ಸುಪ್ರೀಂ ಕೋರ್ಟ್ ಹೇಳಿತು.

Recommended Video

ಈ ಪುಟ್ಟ ಬಾಲಕ ಮಾಡ್ತಿರೋ ಮ್ಯಾಜಿಕ್ ಗೆ ಮಿಲಿಯನ್ ಗಟ್ಟಲೆ ವೀಕ್ಷಣೆ: ನೀವು ನೋಡಿ ಫಿದಾ ಆಗಿ | *Viral | OneIndia

English summary
The Supreme Court of India has issued a verdict against Nupur Sharma, who had made a derogatory statement against Prophet Mohammad, and said that Sharma should apologize to the entire country and also slammed the police who handled her case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X