ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೊಯ್‌ ಬಗ್ಗೆ ತಿಳುಕೊಳ್ಳಬೇಕಾದ ವಿಷಯಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ರಂಜನ್ ಗೊಗೊಯ್ ಅವರು ಸುಪ್ರಿಂಕೋರ್ಟ್‌ನ 46ನೇ ಮುಖ್ಯ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮುಂದಿನ ವರ್ಷ ನವೆಂಬರ್ ವರೆಗೆ ಈ ಹುದ್ದೆಯಲ್ಲಿರಲಿದ್ದಾರೆ.

ಅಸ್ಸಾಂನ ಮೂಲೆಯಿಂದ ಬಂದ ರಂಜನ್ ಗೊಗೊಯ್ ಅವರು, ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಗೇರಿದ್ದಾರೆ. ರಾಜಕಾರಣಿ ಕುಟುಂಬದಿಂದ ಬಂದಿದ್ದರೂ ಸಹಿತ ನ್ಯಾಯಾಂಗ ಕಡೆ ಅವರು ಸಾಗಿದ ಹಾದಿ ಬಹಳ ಕುತೂಹಲಕಾರಿಯಾದುದು.

46ನೇ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಪ್ರಮಾಣವಚನ ಸ್ವೀಕಾರ 46ನೇ ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಪ್ರಮಾಣವಚನ ಸ್ವೀಕಾರ

ದೀಪಕ್ ಮಿಶ್ರಾ ಅವರ ನಿವೃತ್ತಿಯಿಂದ ತೆರವಾಗಿದ್ದ ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ರಂಜನ್ ಗೊಗೊಯ್ ಅವರು ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರು ಇಂದು ಗೊಗೊಯ್ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ ಇಲ್ಲಿದೆ....

ಮಾಜಿ ಮುಖ್ಯಮಂತ್ರಿಯ ಮಗ

ಮಾಜಿ ಮುಖ್ಯಮಂತ್ರಿಯ ಮಗ

ರಂಜನ್‌ ಅವರು ನವೆಂಬರ್ 18, 1954 ರಲ್ಲಿ ಅಸ್ಸಾಂ ದಿಬ್ರುಗರ್‌ ನಲ್ಲಿ ಜನಸಿದರು. ಅವರ ತಂದೆ ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಕೇಶಬ್ ಗೊಗೊಯ್. ರಾಜಕಾರಣಿ ಕುಟುಂಬದಲ್ಲಿ ಹುಟ್ಟಿದ್ದರೂ ಸಹ ರಾಜಕಾರಣದಿಂದ ರಂಜನ್ ಅವರು ಸದಾ ದೂರವೇ ಉಳಿದರು. ಅವರಿಗೆ ಸಂವಿಧಾನ ಪ್ರಿಯವಾಗಿತ್ತು.

ನ್ಯಾ. ರಂಜನ್ ನೇಮಕ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂನ್ಯಾ. ರಂಜನ್ ನೇಮಕ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಪ್ರಾಥಮಿಕ, ಪ್ರೌಢಶಿಕ್ಷಣ

ಪ್ರಾಥಮಿಕ, ಪ್ರೌಢಶಿಕ್ಷಣ

ರಂಜನ್‌ ಗೊಗೊಯ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದಿಬ್ರುಗರ್‌ ನಲ್ಲಯೇ ಪೂರೈಸಿದರು. ಆ ನಂತರ ಕಾಲೇಜು ಶಿಕ್ಷಣಕ್ಕಾಗಿ ಗುವಾಹಟಿಗೆ ಬಂದರು. ಉನ್ನತ ಶಿಕ್ಷಣವನ್ನು ದೆಹಲಿಯಲ್ಲಿ ಪೂರೈಸಿದರು. ಇತಿಹಾಸದಲ್ಲಿ ಹಾನರ್ ಮಾಡಿದ್ದ ಅವರು, ಕಾನೂನು ಓದಿದ್ದ ದೆಹಲಿ ವಿವಿಯಲ್ಲಿ.

2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಟಾಪ್ 10 ತೀರ್ಪುಗಳು2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಟಾಪ್ 10 ತೀರ್ಪುಗಳು

1978 ರಲ್ಲಿ ವಕೀಲಿ ವೃತ್ತಿ ಆರಂಭ

1978 ರಲ್ಲಿ ವಕೀಲಿ ವೃತ್ತಿ ಆರಂಭ

ಗೊಗೊಯ್ ಅವರು 1978 ರಲ್ಲಿ ಗೊವಾಹಟಿಯಲ್ಲಿ ಬಾರ್ ಕೌನ್ಸಿಲ್ ಸೇರಿಕೊಂಡರು. ಅಲ್ಲಿ ಅವರ ಸೀನಿಯರ್ ಆಗಿದ್ದು ಜೆ.ಪಿ.ಭಟ್ಟಾಚಾರ್ಯ. 20 ಕ್ಕೂ ಹೆಚ್ಚು ವರ್ಷ ಗುವಾಹಟಿ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ.

ಗುಹಾವಟಿ ಹೈಕೋರ್ಟ್‌ ಜಡ್ಜ್‌ ಆಗಿ ಸೇವೆ

ಗುಹಾವಟಿ ಹೈಕೋರ್ಟ್‌ ಜಡ್ಜ್‌ ಆಗಿ ಸೇವೆ

2011 ರಲ್ಲಿ ಗೊಗೊಯ್ ಅವರು ಗುವಾಹಟಿಯ ಹೈಕೋರ್ಟ್‌ಗೆ ಜಡ್ಜ್‌ ಆಗಿ ನೇಮಕಗೊಳ್ಳುತ್ತಾರೆ. ಸತತ ಒಂಬತ್ತು ವರ್ಷ ಗುವಾಹಟಿ ಹೈಕೋರ್ಟ್‌ಗೆ ನ್ಯಾಯಾಧೀಶರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಆ ನಂತರ 2010ರಲ್ಲಿ ಅವರನ್ನು ಪಂಜಾಬ್, ಹರ್ಯಾಣಾ ಹೈಕೋರ್ಟ್‌ಗೆ ವರ್ಗಾವಣೆ ಆದರು.

2012ಕ್ಕೆ ಸುಪ್ರಿಂ ನ್ಯಾಯಾಧೀಶರಾಗಿ ನೇಮಕ

2012ಕ್ಕೆ ಸುಪ್ರಿಂ ನ್ಯಾಯಾಧೀಶರಾಗಿ ನೇಮಕ

ಏಪ್ರಿಲ್ 23, 2012ಕ್ಕೆ ರಂಜನ್ ಅವರು ಸುಪ್ರಿಂಕೋರ್ಟ್‌ ನ್ಯಾಯಾಧೀಶರಾಗಿ ನೇಮಕವಾಗುತ್ತಾರೆ. ಸತತ ಆರು ವರ್ಷ ಸುಪ್ರಿಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಬಳಿಕ ಈಗ ಅವರು ಸುಪ್ರಿಂನ ಮುಖ್ಯ ನ್ಯಾಯಾಧೀಶರಾಗಿದ್ದಾರೆ.

ಗೊಗೊಯ್ ಅವರ ವಿವಾದ

ಗೊಗೊಯ್ ಅವರ ವಿವಾದ

ಇದೇ ವರ್ಷದ ಆರಂಭದಲ್ಲಿ ಸುಪ್ರಿಂಕೋರ್ಟ್‌ನ ನಾಲ್ಕು ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನಗೊಂಡು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರಂಜನ್‌ ಅವರೂ ಭಾಗವಹಿಸಿದ್ದರು. ಈ ಘಟನೆ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಹುಳುಕುಗಳಿವೆ ಎಂಬುದು ಆ ಪತ್ರಿಕಾಗೋಷ್ಠಿಯಿಂದ ಗೊತ್ತಾಗಿತ್ತು. ಇದರಲ್ಲಿ ರಂಜನ್ ಗೊಗೊಯ್ ಸಹ ಇದ್ದರು.

ಪ್ರಮುಖ ತೀರ್ಪುಗಳು

ಪ್ರಮುಖ ತೀರ್ಪುಗಳು

ಸುಪ್ರಿಂಕೋರ್ಟ್‌ ನ್ಯಾಯಾಧೀಶರಾದ ನಂತರ ಗೊಗೊಯ್‌ ಅವರು ಹಲವು ಅತ್ಯಂತ ಪ್ರಮುಖ ತೀರ್ಪುಗಳ ಭಾಗವಾಗಿದ್ದಾರೆ. ಅಸ್ಸಾಂನ ಎನ್‌ಸಿಆರ್‌ (ನ್ಯಾಷನಲ್‌ ರಿಜಿಸ್ಟ್ರೇಷನ್ ಆಫ್ ಸಿಟಿಜನ್‌) ಪ್ರಕರಣದಲ್ಲಿ ನ್ಯಾಯಾಧೀಶರ ಪೀಠದ ನೇತೃತ್ವ ಇವರದ್ದೆ. ಇದರ ಹೊರತಾಗಿ ರಾಜಕಾರಣಿಗಳ ಆಸ್ತಿ ಘೋಷಣೆ ಪ್ರಕರಣದ ನ್ಯಾಯಾಧೀಶತ ಪೀಠದಲ್ಲಿ ಇವರಿದ್ದರು. ಗೋವಿಂದ ಸ್ವಾಮಿಗೆ ಮರಣದಂಡನೆ ವಿಧಿಸಿದ ಪೀಠದಲ್ಲಿ ಇದ್ದರು, ಜಾಟ್ ಸಮುದಾಯಕ್ಕೆ ಹಿಂದುಳಿದ ಸ್ಥಾನ ಮಾನ ನಿರಾಕರಿಸಿದ ಪೀಠದಲ್ಲಿ ಇವರಿದ್ದರು, ಇನ್ನೂ ಹಲವು ಪ್ರಮುಖ ತೀರ್ಪುಗಳ ಭಾಗವಾಗಿ ಗೊಗೊಯ್ ಇದ್ದರು.

ಮುಂದಿರುವ ಸವಾಲುಗಳು ಯಾವುವು?

ಮುಂದಿರುವ ಸವಾಲುಗಳು ಯಾವುವು?

ನೇರಪ್ರಸಾರ ಆಗುವ ಸುಪ್ರಿಂಕೋರ್ಟ್‌ ಕಲಾಪವನ್ನು ನಡೆಸುವ ಮೊದಲ ಮುಖ್ಯನ್ಯಾಯಾಧೀಶ ರಂಜನ್ ಗೊಗೊಯ್ ಆಗಲಿದ್ದಾರೆ. ಕಲಾಪದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅವರ ಮುಂದಿರುವ ಮೊದಲ ಆದ್ಯತೆ. ಜೊತೆಗೆ ಅಯೋಧ್ಯೆ ಪ್ರಕರಣ, ಜಮ್ಮು ಕಾಶ್ಮೀರದ ಸೆಕ್ಷನ್ 35A ಪ್ರಕರಣಗಳನ್ನು ಇನ್ನು ಮುಂದೆ ಗೊಗೊಯ್ ಅವರು ಮುಂದುವರೆಸಬೇಕಾಗುತ್ತದೆ. ಇದರ ಜೊತೆಗೆ ಅಸ್ಸಾಂನ ಎನ್‌ಸಿಆರ್‌ ಪ್ರಕರಣ ಕಲಾಪ ಸಹ ಗೊಗೊಯ್ ಅವರು ನಡೆಸಬೇಕಿದೆ.

English summary
Ranjan Gogoi sworn in as Supreme court's 46th chief justice today. Here is the detaile of his life, educatio, career, verdicts and other important subjects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X