ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆಗಳ ಪ್ರತಿ ವಿವರವನ್ನೂ ನೀಡಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ಜೂನ್ 02: ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಫುಟ್ನಿಕ್ ವಿ ಒಳಗೊಂಡಂತೆ ದೇಶದಲ್ಲಿನ ಎಲ್ಲಾ ಕೊರೊನಾ ಲಸಿಕೆಗಳ ಸಂಬಂಧ ಆರಂಭದಿಂದ ಇಲ್ಲಿಯವರೆಗಿನ ವಿವರವಾದ ದತ್ತಾಂಶವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. ಜೊತೆಗೆ ಕೇಂದ್ರದ ಲಸಿಕಾ ನೀತಿಯನ್ನು ಪ್ರತಿಬಿಂಬಿಸುವ ಎಲ್ಲಾ ಸಂಬಂಧಿತ ದಾಖಲೆಗಳು ಹಾಗೂ ವಿವರಗಳನ್ನು ಹಂಚಿಕೊಳ್ಳುವಂತೆ ತಿಳಿಸಿದೆ.

ನ್ಯಾಯಮೂರ್ತಿ ಚಂದ್ರಚೂಡ, ಎಲ್‌.ಎನ್.ರಾವ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ವಿಶೇಷ ನ್ಯಾಯ ಪೀಠವು, "ಕೇಂದ್ರ ಸರ್ಕಾರ ತನ್ನ ಲಸಿಕಾ ನೀತಿಯನ್ನು ಪ್ರತಿಬಿಂಬಿಸುವ, ಸಮರ್ಥಿಸುವ ಕುರಿತು ವಿವರಗಳನ್ನು ಸಲ್ಲಿಕೆ ಮಾಡಬೇಕು. ಇದರಲ್ಲಿ ಲಸಿಕೆಗಳ ಕುರಿತು ಪ್ರತಿಯೊಂದು ವಿವರಗಳೂ ಇರಬೇಕು" ಎಂದು ತಿಳಿಸಿದೆ. ಎರಡು ವಾರದೊಳಗೆ ಈ ಸಂಬಂಧ ಅಫಿಡವಿತ್ ಸಲ್ಲಿಸಬೇಕು ಎಂದು ಮೇ 31ರ ಆದೇಶದಲ್ಲಿ ತಿಳಿಸಿದೆ. ಬುಧವಾರ ಈ ಆದೇಶದ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

Bullet Point ಸುದ್ದಿ: ಲಸಿಕೆ ನೀತಿ ಬಗ್ಗೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಸುಪ್ರೀಂಕೋರ್ಟ್Bullet Point ಸುದ್ದಿ: ಲಸಿಕೆ ನೀತಿ ಬಗ್ಗೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಸುಪ್ರೀಂಕೋರ್ಟ್

ಎಲ್ಲಾ ಲಸಿಕೆಗಳ ಕುರಿತು ನಿರ್ದಿಷ್ಟ ದಿನಾಂಕಗಳನ್ನು ಒದಗಿಸಬೇಕು. ಬೇಡಿಕೆಯಿಟ್ಟ, ಖರೀದಿಸಿದ, ಸರಬರಾಜು ಮಾಡಿದ ಎಲ್ಲಾ ಲಸಿಕೆಗಳ ದತ್ತಾಂಶಗಳು ಇರಬೇಕು ಎಂದು ಹೇಳಿದೆ.

Supreme Court Asks Centre To Place All Records On Vaccination Policy

ಇನ್ನುಳಿದ ಜನತೆಗೆ ಯಾವಾಗ ಕೇಂದ್ರ ಲಸಿಕೆ ನೀಡುತ್ತದೆ ಎಂಬ ಕುರಿತು ಒಂದು ಸ್ಥೂಲ ಮಾಹಿತಿ ನೀಡಬೇಕು ಎಂದು ಆದೇಶಿಸಿದೆ. ಇದುವರೆಗೂ ಲಸಿಕೆ ನೀಡಿದ ಜನಸಂಖ್ಯೆಯ ವಿವರ, ಒಂದು ಡೋಸ್, ಎರಡು ಡೋಸ್ ಲಸಿಕೆ ಪಡೆದವರ ವಿವರ, ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ನೀಡಿದ ಪ್ರಮಾಣ ಎಲ್ಲವನ್ನೂ ನಮೂದಿಸಬೇಕೆಂದು ತಿಳಿಸಿದೆ.

ಮೇ 31ರಂದು ಸುಮೋಟೋ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಲಸಿಕೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಿತ್ತು. ಸುಪ್ರೀಂಕೋರ್ಟ್ ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಖಡಕ್ ಸೂಚನೆ ನೀಡಿತ್ತು.

English summary
The Supreme Court has asked the Centre to furnish detailed data on the purchase history till date of all Covid vaccines including Covaxin, Covishield and Sputnik V,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X