ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾರ್ಗ ಪರಿಗಣಿಸಿ ಎಂದ ಸುಪ್ರೀಂ

|
Google Oneindia Kannada News

ನವದೆಹಲಿ, ಮೇ 3: ಕೊರೊನಾ ಲಸಿಕೆಗಳ ಕುರಿತ ತನ್ನ ನೀತಿಯನ್ನು ಕೇಂದ್ರ ಪುನರ್ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆಗ್ರಹಿಸಿದ್ದು, ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಾಕ್‌ಡೌನ್ ಮಾರ್ಗವನ್ನು ಪರಿಗಣಿಸಬೇಕು ಎಂದು ಸೂಚಿಸಿದೆ.

ಲಾಕ್‌ಡೌನ್ ವಿಧಿಸಿದರೆ ಆಗಬಹುದಾದ ಸಾಮಾಜಿಕ, ಆರ್ಥಿಕ ಪರಿಣಾಮಗಳ ಕುರಿತು ನಮಗೆ ಅರಿವಿದೆ. ಹೀಗಾಗಿ ಲಾಕ್‌ಡೌನ್ ಮಾಡುವ ಮುನ್ನ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಜನರಿಗೆ ತೊಂದರೆಯಾಗದಂತೆ ಲಾಕ್‌ಡೌನ್ ಹೇರಬೇಕು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಎಲ್ ನಾಗೇಶ್ವರರಾವ್ ಹಾಗೂ ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಜುಲೈ ತನಕ ಭಾರತದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಕೊರತೆಜುಲೈ ತನಕ ಭಾರತದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಕೊರತೆ

ಜೊತೆಗೆ ಸ್ಥಳೀಯ ವಿಳಾಸ ಅಥವಾ ಗುರುತಿನ ಪುರಾವೆ ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಅಗತ್ಯ ಔಷಧಿಗಳನ್ನು ಪಡೆಯುವುದರಿಂದ ರೋಗಿಗಳನ್ನು ನಿರಾಕರಿಸುಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Supreme Court Asks Centre To Consider Lockdown To Curb Spread Of Coronavirus

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಕುರಿತು ರಾಷ್ಟ್ರೀಯ ನೀತಿಯನ್ನು ಎರಡು ವಾರಗಳಲ್ಲಿ ರೂಪಿಸಲು ಕೇಂದ್ರಕ್ಕೆ ತಿಳಿಸಿದೆ. ಇದನ್ನು ಎಲ್ಲಾ ರಾಜ್ಯಗಳು ಅನುಸರಿಸಬೇಕು ಎಂದು ಹೇಳಿದೆ.

Recommended Video

#Covid19Updates, Karnataka: ರಾಜ್ಯದಲ್ಲಿ ಇಂದು 37733 ಜನರಿಗೆ ಸೋಂಕು | Oneindia Kannada

ಕೇಂದ್ರ ಸರ್ಕಾರವು ಲಸಿಕಾ ಉತ್ಪಾದಕರೊಂದಿಗೆ ಮಾತುಕತೆ ನಡೆಸಿ ದರವನ್ನು ನಿಗದಿ ಪಡಿಸಬೇಕು. ಪ್ರತಿ ರಾಜ್ಯಗಳಿಗೂ ಸೂಕ್ತ ದರ ನಿಗದಿಪಡಿಸಬೇಕು. ಆನಂತರ ವಿತರಣೆ ಮಾಡಬೇಕು ಎಂದು ತಿಳಿಸಿದೆ.

English summary
Supreme Court asks Centre to revisit its vaccine policy and also consider a lockdown to curb the spread of COVID-19 in country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X