ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಕ್ಕೆ ಹಿನ್ನಡೆ ಮದನಿಗೆ ಮಣಿಪಾಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ

By Srinath
|
Google Oneindia Kannada News

ನವದೆಹಲಿ, ನ.19: ಸಾಕಷ್ಟು ಚರ್ಚಗೆ ಗ್ರಾಸವಾಗಿದ್ದ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಧಾನ ಆರೋಪಿ ಅಬ್ದುಲ್ ನಾಸಿರ್ ಮದನಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆದರೆ ಇದೇ ವೇಳೆ, ಕರ್ನಾಟಕ ಸರಕಾರಕ್ಕೆ ಹೊರೆಯಾಗುವಂತೆ ಮದನಿಗೆ ಖಾಸಗಿ ಆಸ್ಪತ್ರೆಯಲ್ಲೇ ವೈದ್ಯಕೀಯ ಚಿಕಿತ್ಸೆ ಕಲ್ಪಿಸಬೇಕು ಎಂದು ಆದೇಶಿಸಿದೆ.

ಮದನಿಗೆ ಪ್ರತಿಷ್ಠಿತ ಐಷಾರಾಮಿ ಮಣಿಪಾಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸುವುದಕ್ಕೆ ಸುಪ್ರೀಂಕೋರ್ಟಿನಿಂದ ಅಂಕಿತ ಹಾಕಿಸುವಲ್ಲಿ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಯಶಸ್ವಿಯಾಗಿದ್ದಾರೆ. ಮದನಿ ಪರ ಸೋಮವಾರ ವಾದ ಮಂಡಿಸಿದ ಆಮ್ ಆದ್ಮಿ ಪಕ್ಷದ ಜತೆ ಗುರುತಿಸಿಕೊಂಡಿರುವ ಪ್ರಶಾಂತ್ ಭೂಷಣ್, ಕರ್ನಾಟಕ ಸರಕಾರ ಹೇಳುವಂತೆ ವಿಕ್ಟೋರಿಯಾ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಲ್ಲ. ಆದ್ದರಿಂದ ಮದನಿಯನ್ನು ಮಣಿಪಾಲ್ ಆಸ್ಪತ್ರೆಗೇ ದಾಖಲಿಸಬೇಕು ಎಂದು ವಾದ ಮಂಡಿಸಿ, ಸರ್ವೋಚ್ಛ ನ್ಯಾಯಾಲಯದ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಧತ್ವ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ, ಪರಪ್ಪನ ಅಗ್ರಹಾರ ಜೈಲುವಾಸಿ, ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿ ಪ್ರಸ್ತುತ ಅಗರವಾಲ್ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಜ್ಯದ ಪ್ರತಿವಾದಕ್ಕೆ ಸುಪ್ರೀಂ ತಿರಸ್ಕಾರ

ರಾಜ್ಯದ ಪ್ರತಿವಾದಕ್ಕೆ ಸುಪ್ರೀಂ ತಿರಸ್ಕಾರ

ಮಣಿಪಾಲ್ ಆಸ್ಪತ್ರೆ ಖಾಸಗಿ ಆಸ್ಪತ್ರೆ. ಸರಕಾರಿ ಸ್ವಾಮ್ಯದ ವಿಕ್ಟೋರಿಯಾ ಆಸ್ಪತ್ರೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಮದನಿಗೆ ಅಲ್ಲಿಯೇ ಚಿಕಿತ್ಸೇ ಕೊಡಿಸಬಹುದು ಎಂದು ರಾಜ್ಯ ಸರಕಾರದ ಪರ ನ್ಯಾಯವಾದಿಗಳಾದ ಎಚ್ಎಲ್ ಗೋಖಲೆ ಮತ್ತು ಚಲಮೇಶ್ವರ್ ಅವರು ಮಂಡಿಸಿದ ಪ್ರತಿವಾದವನ್ನು ಸುಪ್ರೀಂಕೋರ್ಟ್ ಪುರಸ್ಕರಿಸದೇ ಹೋಯಿತು.

ಮಣಿಪಾಲ್ ಚಿಕಿತ್ಸೆ ವೆಚ್ಚವನ್ನು ರಾಜ್ಯವೇ ಭರಿಸಬೇಕು

ಮಣಿಪಾಲ್ ಚಿಕಿತ್ಸೆ ವೆಚ್ಚವನ್ನು ರಾಜ್ಯವೇ ಭರಿಸಬೇಕು

ಇದರಿಂದ ಏನಾಗಿದೆ ಅಂದರೆ ಮದನಿ ಮಣಿಪಾಲ್ ಆಸ್ಪತ್ರೆಯ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಬೇಕಿದೆ. ಒಂದು ವೇಳೆ, ವಿಕ್ಟೋರಿಯಾ ಆಸ್ಪತ್ರೆ ಸಹ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯೇ. ಅಲ್ಲಿಯೆ ಮದನಿಗೆ ಚಿಕಿತ್ಸೆ ಕೊಡಿಸಿ ಸಾಕು ಎಂದು ಸುಪ್ರೀಂಕೋರ್ಟ್ ಹೇಳಿದ್ದರೆ ರಾಜ್ಯ ಸರಕಾರ ಆ ಖರ್ಚನ್ನು ಉಳಿಸಬಹುದಿತ್ತು.

ಮದನಿ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆ ಸಜ್ಜು

ಮದನಿ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆ ಸಜ್ಜು

ಮದನಿಗೆ ಚಿಕಿತ್ಸೆ ನೀಡಲು ಮಣಿಪಾಲ್ ಆಸ್ಪತ್ರೆ ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಮಣಿಪಾಲ್ ಆಸ್ಪತ್ರೆ ಮದನಿ ಚಿಕಿತ್ಸೆಗೆ ಹಿಂದೇಟು ಹಾಕಿದರೆ ವಿಕ್ಟೋರಿಯಾ ಆಸ್ಪತ್ರೆಗೇ ದಾಖಲು ಮಾಡಿ ಎಂದೂ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ ಇತ್ತ ಬೆಂಗಳೂರಿನಲ್ಲಿ ಮದನಿಗೆ ಚಿಕಿತ್ಸೆ ನೀಡಲು ಮಣಿಪಾಲ್ ಆಸ್ಪತ್ರೆ ಸಜ್ಜಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.

ಮದನಿ ವಿರುದ್ಧ 56 ಪ್ರಕರಣಗಳು ದಾಖಲಾಗಿವೆ

ಮದನಿ ವಿರುದ್ಧ 56 ಪ್ರಕರಣಗಳು ದಾಖಲಾಗಿವೆ

ರಾಜ್ಯ ಸರಕಾರ ದುರುದ್ದೇಶದಿಂದ ಮದನಿಯನ್ನು ವಶದಲ್ಲಿಟ್ಟುಕೊಂಡಿದೆ ಎಂಬ ಪ್ರಶಾಂತ್ ಭೂಷಣ್ ಆರೋಪಕ್ಕೆ ಉತ್ತರಿಸಿದ ರಾಜ್ಯ ವಕೀಲೆ ಅನಿತಾ ಶೆಣೈ ಮದನಿ ವಿರುದ್ಧ ವಿವಿಧ ರಾಜ್ಯಗಳಲ್ಲಿ ಒಟ್ಟು 56 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಬಾಂಬ್ ಸ್ಫೋಟ ಬಹುದೊಡ್ಡ ಸಂಚಿನ ಒಂದು ಭಾಗವಷ್ಟೇ. ಬೆಂಗಳೂರು ಸ್ಫೋಟದ ಬಳಿಕ ಜೈಪುರ, ಅಹಮದಾಬಾದ್, ಸೂರತ್ ಮತ್ತು ದೆಹಲಿಯಲ್ಲಿ ಉಗ್ರರು ದಾಳಿ ನಡೆಸಿದ್ದರು. ಈತನಿಗೆ ಸಿಮಿ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳೊಂದಿಗೆ ನೆಂಟಸ್ತನ ಇದೆ ಎಂದು ವಕೀಲೆ ಅನಿತಾ ಶೆಣೈ ಪ್ರತಿವಾದಿಸಿದರು.

English summary
Bangalore bomb blast prime accused Abdul Nasser Madani is allowed to undergo treatment at Manipal Hospital in Bangalore. At the same time the court rejected his bail application. Well known advocate Prashant Bhushan defended Abdul Nasser Madani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X