ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಕೋರ್ಟ್‌ನ ಶೇ 50ರಷ್ಟು ಸಿಬ್ಬಂದಿಗೆ ಕೊರೊನಾ; ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 12: ಸುಪ್ರೀಂ ಕೋರ್ಟ್‌ನ ಸುಮಾರು ಶೇ 50ರಷ್ಟು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧಾರ ಪ್ರಕಟಿಸಿದೆ. ಸದ್ಯಕ್ಕೆ ಭೌತಿಕ ವಿಚಾರಣೆಯನ್ನು ಸ್ಥಗಿತಗೊಳಿಸಲಾಗಿದೆ.

ವಿಡಿಯೋ ಮೂಲಕವೇ ನ್ಯಾಯಮೂರ್ತಿಗಳು ತಮ್ಮ ನಿವಾಸದಿಂದ ವಿಚಾರಣೆ ನಡೆಸುವುದಾಗಿ ತಿಳಿದುಬಂದಿದೆ. ನ್ಯಾಯಮೂರ್ತಿಗಳ ಕಚೇರಿ ಹಾಗೂ ರೆಜಿಸ್ಟ್ರಿಯಲ್ಲಿನ ಹಲವು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

 ರಿಲಯನ್ಸ್, ಫ್ಯೂಚರ್ ರೀಟೇಲ್ ಡೀಲ್ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋದ ಅಮೆಜಾನ್ ರಿಲಯನ್ಸ್, ಫ್ಯೂಚರ್ ರೀಟೇಲ್ ಡೀಲ್ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋದ ಅಮೆಜಾನ್

ಎಲ್ಲಾ ಕೋರ್ಟ್ ಹಾಲ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಬೆಳಿಗ್ಗೆ 10.30ರ ಬದಲು 11.30ಕ್ಕೆ ವಿಚಾರಣೆ ಆರಂಭವಾಗಲಿದೆ. 10.30ಕ್ಕೆ ನಿಗದಿಯಾಗಿದ್ದ ನ್ಯಾಯಪೀಠ 11.30ಕ್ಕೆ ಆರಂಭವಾಗಲಿವೆ. 11ಕ್ಕೆ ನಿಗದಿಯಾಗಿದ್ದ ಪ್ರಕರಣಗಳ ವಿಚಾರಣೆ 12ರಿಂದ ಶುರುವಾಗಲಿವೆ ಎಂದು ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

Supreme Court 50 Percent Staff Test Coronavirus Positive

ಏಪ್ರಿಲ್ 11ರಂದು ದೆಹಲಿಯಲ್ಲಿ ಅತಿ ಹೆಚ್ಚಿನ ದಿನನಿತ್ಯದ ಪ್ರಕರಣ ದಾಖಲಾಗಿದ್ದು, 10,774 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯಕ್ಕೆ 34,341 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ದೆಹಲಿಯಲ್ಲಿ ಸೋಂಕಿನಿಂದ 11,283 ಮಂದಿ ಸಾವನ್ನಪ್ಪಿದ್ದಾರೆ. 6.79 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವತ್ತ ರಾಜ್ಯ ಸರ್ಕಾರ ಆಲೋಚಿಸುತ್ತಿದೆ.

English summary
Hearings in the Supreme Court will now be held via video conferencing after 50 staffers are said to have tested positive for COVID-19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X