ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಚನಾತ್ಮಕ ಟೀಕೆಯನ್ನು ನಮ್ಮ ಪ್ರಧಾನಿ ಸ್ವೀಕರಿಸದೇ ಇರುವುದು ದೊಡ್ಡ ತಪ್ಪು

|
Google Oneindia Kannada News

Recommended Video

ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ಮೋದಿ ಬಗ್ಗೆ ಹೇಳಿದ್ದೇನು ? | Oneindia Kannada

ನವದೆಹಲಿ, ಸೆ 30: " ಸಾರ್ವಜನಿಕ ವಲಯಗಳಿಂದ ಬರುವ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಲು ಸರಕಾರಕ್ಕೆ ಸಾಧ್ಯವಾಗದೇ ಇದ್ದರೆ, ಮೇಲಿಂದ ಮೇಲೆ ತಪ್ಪಾಗುತ್ತಿರುತ್ತದೆ" ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.

" ಇತ್ತೀಚೆಗೆ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯಲ್ಲಿದ್ದ ಇಬ್ಬರನ್ನು ವಜಾಗೊಳಿಸಲಾಯಿತು. ಸರಕಾರದ ವಿದೇಶ ಹಣಕಾಸು ನೀತಿಯನ್ನು ಇವರಿಬ್ಬರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ, ಇವರನ್ನು ಸಮಿತಿಯಿಂದ ಹೊರಹಾಕಲಾಯಿತು" ಎಂದು ರಾಜನ್, ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

RBIನಿಂದ 30,000 ಕೋಟಿ ರುಪಾಯಿ ಕೇಳಬಹುದು ಕೇಂದ್ರ ಸರ್ಕಾರRBIನಿಂದ 30,000 ಕೋಟಿ ರುಪಾಯಿ ಕೇಳಬಹುದು ಕೇಂದ್ರ ಸರ್ಕಾರ

" ಸರಕಾರದ ವಿರುದ್ದ ಮಾತನಾಡಿದರೆ, ದೂರವಾಣಿ ಕರೆಗಳು ಬರುತ್ತವೆ. ಇಲ್ಲವೆಂದರೆ, ಸರಕಾರದ ಪರವಾಗಿರುವವರಿಂದ ಟ್ರೋಲ್ ಗೆ ಒಳಗಾಗಬೇಕಾಗುತ್ತದೆ. ಹಾಗಾಗಿ, ಹೆಚ್ಚಿನ ಹಣಕಾಸು ಸಲಹೆಗಾರರು ಸುಮ್ಮನಾಗಿ ಬಿಡುತ್ತಾರೆ" ಎಂದು ರಘುರಾಂ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Suppressing Criticism Can Lead To Mistake In Policy Making: Raghuram Rajan

" ಖಾಸಗಿ ವಲಯದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಸುಧಾರಣಾ ಕ್ರಮವನ್ನು ಸರಕಾರ ತುರ್ತಾಗಿ ತೆಗೆದುಕೊಳ್ಲಬೇಕಿದೆ" ಎಂದು ರಾಜನ್ ಹೇಳಿದ್ದಾರೆ.

" ಈಗಿರುವ ಆರ್ಥಿಕ ಹಿಂಜರಿತ ಕಳವಳಕಾರಿ" ಎಂದು ಹೇಳಿರುವ ರಘುರಾಂ ರಾಜನ್, " ಮುಂಬರುವ ದಿನಗಳಲ್ಲಿ ದೇಶ ದೊಡ್ಡಮಟ್ಟದ ಆರ್ಥಿಕ ಹಿನ್ನಡೆ ಎದುರಿಸುವ ಸಾಧ್ಯತೆ ಕಮ್ಮಿ" ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರದ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ರಘುರಾಂ ರಾಜನ್ ಹಲವು ಬಾರಿ ಟೀಕಿಸಿದ್ದರು.

English summary
Suppressing Criticism Can Lead To Mistake In Policy Making: Former Reserve Bank Of India Governor Raghuram Rajan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X